ಕಳೆದ 5 ವರ್ಷದಲ್ಲಿ ರಾಹುಲ್ ಗಾಂಧಿ ಆಸ್ತಿ ಎಷ್ಟು ಜಾಸ್ತಿಯಾಗಿದೆ ಗೊತ್ತಾ?

ಗುರುವಾರ ವಯನಾಡ್‌ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ರಾಹುಲ್ ಗಾಂಧಿ ಸಲ್ಲಿಸಿದ ಅಫಿಡವಿಟ್ ನಿಂದ ಈ ಮಾಹಿತಿ ತಿಳಿದು ಬಂದಿದೆ.

Last Updated : Apr 5, 2019, 07:12 AM IST
ಕಳೆದ 5 ವರ್ಷದಲ್ಲಿ ರಾಹುಲ್ ಗಾಂಧಿ ಆಸ್ತಿ ಎಷ್ಟು ಜಾಸ್ತಿಯಾಗಿದೆ ಗೊತ್ತಾ? title=

ವಯನಾಡ್‌: 2014 ರ ಚುನಾವಣೆಯಲ್ಲಿ 9.4 ಕೋಟಿ ರೂಪಾಯಿಗಳ ಒಟ್ಟು ಆಸ್ತಿಗಳನ್ನು ಘೋಷಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಅವರ ಆಸ್ತಿ ಇದೀಗ 15.88 ಕೋಟಿ ರೂ. ಆಗಿದೆ. ಗುರುವಾರ ವಯನಾಡ್‌ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಅವರು ನೀಡಿರುವ ಅಫಿಡವಿಟ್ ನಿಂದ ಈ ಮಾಹಿತಿ ತಿಳಿದು ಬಂದಿದೆ. ಕಳೆದ ಐದು ವರ್ಷದಲ್ಲಿ ಅವರ ಆಸ್ತಿ 4.85 ಕೋಟಿ ವೃದ್ಧಿಯಾಗಿದೆ.

ರಾಹುಲ್ ಗಾಂಧಿ ಬಳಿ ಯಾವುದೇ ಕಾರುಗಳಿಲ್ಲಲ್ಲ. ವಿವಿಧ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಲ್ಲಿ ಅವರು 72 ಲಕ್ಷ ರೂ. ಹೊಂದಿದ್ದಾರೆ ಎಂದು ಅಫಿಡೆವಿಟ್ ನಲ್ಲಿ ತಿಳಿಸಲಾಗಿದೆ.

ರಾಹುಲ್ ಗಾಂಧಿ 5,80,58,799ರೂ. ಮೌಲ್ಯದ ಚರಾಸ್ತಿ ಮತ್ತು 10 ಕೋಟಿ ಎಂಟು ಲಕ್ಷದ 18 ಸಾವಿರದ 284 ರೂ. ಸ್ಥಿರಾಸ್ತಿ ಹೊಂದಿದ್ದು. ಅವರ ಒಟ್ಟು 15 ಕೋಟಿ 88 ಲಕ್ಷ 77 ಸಾವಿರದ 83 ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿ ಕ್ಷೇತ್ರದಿಂದ ಕೂಡಾ ಸ್ಪರ್ಧಿಸುತ್ತಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷರ ಬಳಿ 40,000 ರೂ. ನಗದು ಹಣವಿದ್ದು, ವಿವಿಧ ಬ್ಯಾಂಕುಗಳಲ್ಲಿ 17.93 ಲಕ್ಷ ರೂ. ಹೊಂದಿದ್ದಾರೆ. ಇದಲ್ಲದೆ 5.19 ಕೋಟಿ ರೂಪಾಯಿಗಳನ್ನು ಬಾಂಡ್ಗಳು, ಡಿಬೆಂಚರ್ಗಳು ಮತ್ತು ವಿವಿಧ ಕಂಪೆನಿಗಳ ಷೇರುಗಳಲ್ಲಿ ಇರಿಸಿದ್ದಾರೆ. ಅವರು 333.3 ಗ್ರಾಂ ಚಿನ್ನವನ್ನು ಹೊಂದಿದ್ದಾರೆ.

ರಾಹುಲ್ ವಿರುದ್ಧ ಐದು ಪ್ರಕರಣಗಳು ಬಾಕಿ ಉಳಿದಿವೆ:
ರಾಹುಲ್ ಗಾಂಧಿ ತಮ್ಮ ವಿರುದ್ಧ ಒಟ್ಟು ಐದು ಪ್ರಕರಣಗಳು ಬಾಕಿ ಉಳಿದಿವೆ ಎಂದು ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ. ಅಫಿಡವಿಟ್ ಪ್ರಕಾರ, ಮಹಾರಾಷ್ಟ್ರದಲ್ಲಿ  2 ಪ್ರಕರಣಗಳು ಬಾಕಿ ಉಳಿದಿದ್ದರೆ ಜಾರ್ಖಂಡ್, ಅಸ್ಸಾಂ ಮತ್ತು ನವದೆಹಲಿಗಳಲ್ಲಿ ಒಂದೊಂದು ಪ್ರಕರಣ ಬಾಕಿ ಇದೆ.

ಗುರುಗ್ರಾಂನಲ್ಲಿ ಎರಡು ಕಚೇರಿ ಹೊಂದಿರುವ ರಾಹುಲ್:
ದೆಹಲಿಯ ಸುಲ್ತಾನಪುರ ಗ್ರಾಮದಲ್ಲಿ ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಕೃಷಿ ಭೂಮಿಯನ್ನು ಹೊಂದಿದ್ದಾರೆ. ರಾಹುಲ್ ಗಾಂಧಿ ಗುರುಗ್ರಾಂನಲ್ಲಿ ಎರಡು ಕಚೇರಿಗಳನ್ನು ಹೊಂದಿದ್ದಾರೆಂದು ಅಫಿಡವಿಟ್ ನಲ್ಲಿ ತೋರಿಸಲಾಗಿದೆ. ಅಫಿಡವಿಟ್ ನಲ್ಲಿರುವ ಮಾಹಿತಿ ಪ್ರಕಾರ 2017-18ರ ಆರ್ಥಿಕ ವರ್ಷದಲ್ಲಿ ಅವರ ಒಟ್ಟು ಆದಾಯ 1,11,85,570 ರೂ.

ಸಂಸದ ಸಂಬಳ, ರಾಯಧನ ಆದಾಯ, ಬಾಡಿಗೆಯಿಂದ ಬರುವ ಆದಾಯ, ಬಾಂಡುಗಳಿಂದ ಬರುವ ಆದಾಯ, ಡಿವಿಡೆಂಟ್ ಮತ್ತು ಮ್ಯೂಚುಯಲ್ ಫಂಡ್ಗಳಿಂದ ಪಡೆದ ಲಾಭವನ್ನು ಅವರ ಆದಾಯದ ಮೂಲ ಎಂದು ರಾಹುಲ್ ಗಾಂಧಿ ಘೋಷಿಸಿದ್ದಾರೆ.

1995 ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜ್ನಿಂದ ಎಂ.ಫಿಲ್ (ಡೆವೆಲಪ್ಮೆಂಟ್ ಸ್ಟಡೀಸ್) ಮಾಡಿದ್ದಾರೆಂದು ಕಾಂಗ್ರೆಸ್ ಮುಖ್ಯಸ್ಥ ಹೇಳಿದ್ದಾರೆ. ರಾಹುಲ್ ಗಾಂಧಿಯವರು ಸ್ವಂತ ಕಾರು ಹೊಂದಿಲ್ಲ ಮತ್ತು ಎಸ್ಪಿಜಿ ಭದ್ರತೆ ಪಡೆಯುವ ಕಾರಣ ಅವರು ಎಸ್ಪಿಜಿ ವಾಹನದಲ್ಲಿ ಹೋಗಬೇಕು ಎಂದು ಹೇಳಲಾಗಿದೆ. 
 

Trending News