ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ 1 ಸಾವು

ಘರ್ಷಣೆಯಲ್ಲಿ ಟಿಎಂಸಿ ಕಾರ್ಯಕರ್ತನ ಹತ್ಯೆಯಾಗಿದ್ದು, ಆ ಬಳಿಕ ಪ್ರದೇಶದಲ್ಲಿ ಆತಂಕ ಮನೆಮಾಡಿದೆ ಎನ್ನಲಾಗಿದೆ. 

Last Updated : Jun 6, 2019, 08:56 AM IST
ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ 1 ಸಾವು title=
Pic Courtesy: ANI

ಕೊಲ್ಕತ್ತಾ: ಬುಧವಾರ ಪಶ್ಚಿಮ ಬಂಗಾಳದ ಕೂಚ್ಬೀಹಾರ್ ಜಿಲ್ಲೆಯ ದಿನ್ಹಾಟದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದೆ.

ಘರ್ಷಣೆ ಬಳಿಕ ಟಿಎಂಸಿ ಕಾರ್ಯಕರ್ತ ಅಜಿಜರ್ ರಹಮಾನ್ ಮನೆಗೆ ಹಿಂದಿರುಗುವಾಗ ಬಿಜೆಪಿ ಕಾರ್ಯಕರ್ತರು ಆತನನ್ನು ಕೊಲೆ ಮಾಡಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಅಜಿಜರ್ ರಹಮಾನ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ತಮ್ಮ ಕಾರ್ಯಕರ್ತನ ಕೊಲೆಗೆ ಬಿಜೆಪಿಯೇ ಕಾರಣ ಎಂದು ಟಿಎಂಸಿ ಆರೋಪಿಸಿದೆ, ಆದರೆ ಬಿಜೆಪಿ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದೆ.

ಮಂಗಳವಾರ ರಾತ್ರಿ ಉತ್ತರ 24 ಪರಗಾನಗಳಲ್ಲಿ ನಿಮ್ಟಾ ಪೋಲಿಸ್ ಸ್ಟೇಷನ್ ಮಿತಿಗಳ ಅಡಿಯಲ್ಲಿ ಬರುವ ಉತ್ತರ ಕೋಲ್ಕತಾದ ಡಮ್ ಡಮ್ ಪ್ರದೇಶದಲ್ಲಿ ಮೂರು ಬೈಕುಗಳಲ್ಲಿ ಬಂದ ದಾಳಿಕೋರರು ಟಿಎಂಸಿ ನಾಯಕ ನಿರ್ಮಲ್ ಕುಂದೂ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಕುಂದು  ಡಮ್ ಡಮ್ ಪುರಸಭೆಯ ಪ್ರದೇಶದ ವಾರ್ಡ್ ನಂ 6 ರ ಟಿಎಂಸಿ ಅಧ್ಯಕ್ಷರಾಗಿದ್ದರು. 

ಈ ಘಟನೆಯ ಬಳಿಕ, ಆತನ ತಲೆಯ ಮೇಲೆ ಬುಲೆಟ್ ಗಾಯಗಳೊಂದಿಗೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಅಷ್ಟರಲ್ಲಿ ಆತ ಸತ್ತಿರುವುದಾಗಿ ವೈದ್ಯರು ಘೋಷಿಸಿದರು ಎನ್ನಲಾಯಿತು. ಕೊಲೆಗೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಏಳು ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಹಿಂಸಾಚಾರವನ್ನು ಎದುರಿಸಿದೆ. ತೃಣಮೂಲ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಘರ್ಷಣೆ ಮಾಡಿಕೊಂಡಿದ್ದಾರೆ. ಕಳೆದ ತಿಂಗಳು ಚುನಾವಣಾ ಫಲಿತಾಂಶ ಘೋಷಿಸಿದ ನಂತರವೂ ರಾಜಕೀಯ ಹಿಂಸಾಚಾರದ ಘಟನೆಗಳು ರಾಜ್ಯದಲ್ಲಿ ಮುಂದುವರಿದಿದೆ.
 

Trending News