ನವದೆಹಲಿ: ಹಣಕಾಸಿನ ಕೊರತೆಯಿಂದಾಗಿ ಅಮರಾವತಿಯನ್ನು ಆಂಧ್ರಪ್ರದೇಶದ ರಾಜಧಾನಿ ಮಾಡುವ ಪ್ರಸ್ತಾಪವನ್ನು ಕೈ ಬಿಡುವ ಸುಳಿವನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೀಡಿದ್ದಾರೆ
ಮೂರು ರಾಜಧಾನಿಯನ್ನಾಗಿ ಮಾಡುವ ಕ್ರಮಕ್ಕೆ ಕೇಂದ್ರದಿಂದ ಯಾವುದೇ ಆಕ್ಷೇಪಣೆ ಇಲ್ಲದ ಹಿನ್ನಲೆಯಲ್ಲಿ ವಿಶಾಖಪಟ್ಟಣಂ, ಅಮರಾವತಿ ಮತ್ತು ಕರ್ನೂಲ್‌ನಲ್ಲಿ ಕಾರ್ಯನಿರ್ವಾಹಕ, ಶಾಸಕಾಂಗ ಮತ್ತು ನ್ಯಾಯಾಂಗ ರಾಜಧಾನಿಗಳನ್ನು ನಿರ್ಮಾಣ ಮಾಡುವ ಬಗ್ಗೆ ಸಿಎಂ ಜಗನ್ ರೆಡ್ಡಿ ಪ್ರಸ್ತಾಪಿಸಿದ್ದಾರೆ.
'ಅಮರಾವತಿಯಲ್ಲಿ ನಮಗೆ ಹಿಂದಿನ ಯೋಜನೆಯೊಂದಿಗೆ ಮುಂದುವರಿಯಲು 1.09 ಲಕ್ಷ ಕೋಟಿ ರೂ. ಬೇಕಾಗಿತ್ತು, ಅದರಲ್ಲಿ ಕೇವಲ 6,000 ಕೋಟಿ ರೂ. ಮಾತ್ರ ಖರ್ಚು ಮಾಡಲಾಗಿದೆ. ರಸ್ತೆಗಳು, ಒಳಚರಂಡಿ, ನೀರು ಸರಬರಾಜಿನಂತಹ ಮೂಲಸೌಕರ್ಯಗಳನ್ನು ಹಾಕಲು 1.03 ಲಕ್ಷ ಕೋಟಿ ರೂ ಅಗತ್ಯವಿದೆ. ಆದರೆ ಆದಾಗ್ಯೂ, ನಾನು ಗರಿಷ್ಠ 6,000 ಕೋಟಿ ರೂ. ಮಾತ್ರ ಖರ್ಚು ಮಾಡಲು ಶಕ್ತನಾಗಿದ್ದೆ, ಎಂದು ಜಗನ್ ಮೋಹನ್ ರೆಡ್ಡಿ ಹೇಳಿದರು.
ಮುಖ್ಯಮಂತ್ರಿಯವರ ಪ್ರಕಾರ, ವಿಶಾಖಪಟ್ಟಣಂನಲ್ಲಿ ಕಾರ್ಯಾಂಗದ ರಾಜಧಾನಿಯನ್ನು ಸ್ಥಾಪಿಸುವುದು ಹೆಚ್ಚು ವಿತ್ತೀಯ ಅರ್ಥವನ್ನು ನೀಡುತ್ತದೆ ಏಕೆಂದರೆ ಅದು ಈಗಾಗಲೇ ಹೆಚ್ಚಿನ ಮೂಲ ಸೌಕರ್ಯಗಳನ್ನು ಹೊಂದಿದೆ. 'ನಾನು ಅದರಲ್ಲಿ 10 ಶೇಕಡಾವನ್ನು ವಿಶಾಖಪಟ್ಟಣದಲ್ಲಿ ಹೂಡಿಕೆ ಮಾಡಿದರೆ, ಅದು ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈಗಳೊಂದಿಗೆ 10 ವರ್ಷಗಳಲ್ಲಿ ಸ್ಪರ್ಧಿಸಬಹುದು, ಎಂದು ಅವರು ಹೇಳಿದರು.
ಮಂಗಳವಾರ ಈ ಪ್ರದೇಶದ ರೈತ ನಿಯೋಗದೊಂದಿಗಿನ ಸಂವಾದದಲ್ಲಿ, ವಿಜಯವಾಡ ಮತ್ತು ಗುಂಟೂರು ಎರಡರಿಂದಲೂ ಸುಮಾರು 30 ಕಿ.ಮೀ ದೂರದಲ್ಲಿ ಅಮರಾವತಿ ಹೇಗೆ ಇದೆ ಎಂದು ಜಗನ್ ಮೋಹನ್ ರೆಡ್ಡಿ ವಿವರಿಸಿದ್ದರು. ಈ ಪ್ರದೇಶವು ವರ್ಜಿನ್ ಲ್ಯಾಂಡ್ ಆಗಿರುವುದರಿಂದ ಮೂಲ ಸೌಕರ್ಯಗಳ ಕೊರತೆ ಅಥವಾ ಎರಡು ಪಥದ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಇಂತಹ ಸನ್ನಿವೇಶಗಳಲ್ಲಿ ಕಷ್ಟಕರವಾಗಿರುತ್ತದೆ ಎಂದು ಅವರು ಹೇಳಿದರು.
ಕಳೆದ ತಿಂಗಳು ಜಗನ್ ಮೋಹನ್ ರೆಡ್ಡಿ ಸರ್ಕಾರ ಈ ಹಿಂದಿನ ಪ್ರಸ್ತಾಪವನ್ನು ರದ್ದುಗೊಳಿಸಿದಾಗಿನಿಂದ ಅಮರಾವತಿ ಪ್ರದೇಶದ ರೈತರು ಆಂದೋಲನ ನಡೆಸುತ್ತಿದ್ದಾರೆ. "ಅಮರಾವತಿಯನ್ನು ಸ್ಥಳಾಂತರಿಸಲಾಗುವುದಿಲ್ಲ, ಅಪಪ್ರಚಾರ ಮಾಡಲಾಗುತ್ತಿದೆ. ಇದು ರಾಜ್ಯದ ಶಾಸಕಾಂಗ ರಾಜಧಾನಿಯಾಗಿ ಉಳಿದಿದೆ, ಮತ್ತು ವಿಧಾನಸಭೆ ಇಲ್ಲಿಂದ ಕಾರ್ಯನಿರ್ವಹಿಸುತ್ತದೆ ಎಂದು ಜಗನ್ ಮೋಹನ್ ರೆಡ್ಡಿ ಅವರಿಗೆ ಧೈರ್ಯ ತುಂಬಿದರು.
ರಾಜ್ಯದ ಕಾರ್ಯಾಂಗದ ರಾಜಧಾನಿಯಾಗಿ, ವಿಶಾಖಪಟ್ಟಣಂ ಹೊಸ ಪ್ರಸ್ತಾವನೆಯಡಿಯಲ್ಲಿ ಸಚಿವಾಲಯ ಮತ್ತು ಮುಖ್ಯಮಂತ್ರಿಗಳ ಕಚೇರಿಯನ್ನು ಹೊಂದಿರುತ್ತದೆ. 1953 ರಿಂದ 1956 ರವರೆಗೆ ರಾಜ್ಯ ರಾಜಧಾನಿಯಾಗಿದ್ದ ಕರ್ನೂಲ್ ನಲ್ಲಿ ಹೈಕೋರ್ಟ್ ಸ್ಥಾಪನೆಗೆ ಅವಕಾಶ ಕಲ್ಪಿಸಲಿದೆ.