ಅಯೋಧ್ಯೆ ತೀರ್ಪು ಹಿನ್ನಲೆ ಭದ್ರತಾ ಕ್ರಮ ಪರಿಶೀಲಿಸಿದ ಸಿಜೆಐ ರಂಜನ್ ಗೋಗಯ್

ಅಯೋಧ್ಯೆ ತೀರ್ಪು ಹಿನ್ನಲೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮುಂಚಿತವಾಗಿ ಉತ್ತರ ಪ್ರದೇಶದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಭದ್ರತಾ ಕ್ರಮಗಳ ಕುರಿತಾಗಿ ಮಾಹಿತಿ ಪಡೆದರು.

Last Updated : Nov 8, 2019, 02:26 PM IST
ಅಯೋಧ್ಯೆ ತೀರ್ಪು ಹಿನ್ನಲೆ ಭದ್ರತಾ ಕ್ರಮ ಪರಿಶೀಲಿಸಿದ ಸಿಜೆಐ ರಂಜನ್ ಗೋಗಯ್ title=
ಸಾಂದರ್ಭಿಕ ಚಿತ್ರ

ನವದೆಹಲಿ: ಅಯೋಧ್ಯೆ ತೀರ್ಪು ಹಿನ್ನಲೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮುಂಚಿತವಾಗಿ ಉತ್ತರ ಪ್ರದೇಶದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಭದ್ರತಾ ಕ್ರಮಗಳ ಕುರಿತಾಗಿ ಮಾಹಿತಿ ಪಡೆದರು.

ವಿವಾದಿತ ಅಯೋಧ್ಯೆ ತೀರ್ಪು ಇನ್ನು ಕೆಲವೇ ದಿನಗಳಲ್ಲಿ ಹೊರಬಿಳುವುದರಿಂದ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ನಿಟ್ಟಿನಲ್ಲಿ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ತಿವಾರಿ ಮತ್ತು ಪೊಲೀಸ್ ಮುಖ್ಯಸ್ಥ ಓಂ ಪ್ರಕಾಶ್ ಸಿಂಗ್ ಅವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಚೇಂಬರ್ ನಲ್ಲಿ ಸಭೆ ನಡೆಯಿತು ಎಂದು ಮೂಲಗಳು ತಿಳಿಸಿವೆ.ನವೆಂಬರ್ 17 ರಂದು ರಂಜನ್ ಗೋಗಯ್ ನಿವೃತ್ತರಾಗಲಿರುವುದರಿಂದ ಅದಕ್ಕೂ ಮುಂಚೆಯೇ ತೀರ್ಪು ಹೊರ ಬಿಳಲಿದೆ.

ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಅವರು ಅಯೋಧ್ಯೆ ಪ್ರಕರಣವನ್ನು ವಿಶ್ವದ ಪ್ರಮುಖ ಪ್ರಕರಣಗಳಲ್ಲಿ ಒಂದೆಂದು ಕರೆದಿದ್ದರು. ಮುಖ್ಯನ್ಯಾಯಮೂರ್ತಿಗಳನ್ನು ಒಳಗೊಂಡ ಐದು ನ್ಯಾಯಾಧೀಶರ ಪೀಠ 133 ವರ್ಷಗಳ ಹಳೆಯ ಶೀರ್ಷಿಕೆ ಮೊಕದ್ದಮೆಯನ್ನು 40 ದಿನಗಳವರೆಗೆ ಆಲಿಸಿದೆ.ಈಗ ಅಂತಿಮ ತೀರ್ಪು ನೀಡುವುದೊಂದೆ ಬಾಕಿ ಇದೆ.

ಈಗಾಗಲೇ ತೀರ್ಪಿಗೂ ಮುಂಚಿತವಾಗಿ ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳು ಹಾಗೂ ರಾಜಕೀಯ ನಾಯಕರುಗಳು ಶಾಂತಿಗಾಗಿ ಮನವಿ ಮಾಡಿದ್ದಾರೆ. ಅಲ್ಲದೆ ಕೇಂದ್ರ ಗೃಹ ಸಚಿವಾಲಯ ಜಾಗೃತವಾಗಿರಲು ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದೆ. ಇನ್ನೊಂದೆಡೆ ಪ್ರಧಾನಿ ಮೋದಿ ತಮ್ಮ ಸಚಿವ ಸಂಪುಟದ ಸದಸ್ಯರಿಗೆ ಅನಗತ್ಯ ಹೇಳಿಕೆ ನೀಡಕೂಡದು ಎಂದು ಸೂಚನೆ ನೀಡಿದ್ದಾರೆ. 
 

Trending News