Cheating Case: ಪತಿಗೆ ಮದುವೆಯ ಮೊದಲ ರಾತ್ರಿಯ ವಿಡಿಯೋ ವೈರಲ್ ಮಾಡುವುದಾಗಿ ಧಮ್ಕಿ ಹಾಕಿದ ಪತ್ನಿ

Cunning Wife - 10 ಲಕ್ಷ ರೂಪಾಯಿ ನೀಡಲು ಒಪ್ಪದಿದ್ದರೆ ಹನಿಮೂನ್ ವಿಡಿಯೋ ವೈರಲ್ ಮಾಡುವುದಾಗಿ ಪತ್ನಿಯೊಬ್ಬಳು ತನ್ನ ಪತಿಗೆ ಬೆದರಿಕೆ ಹಾಕಿದ ಘಟನೆ ಮಧ್ಯಪ್ರದೇಶದ (Madhya Pradesh) ಭೋಪಾಲ್ (Bhopal) ನಿಂದ ಬೆಳಕಿಗೆ ಬಂದಿದೆ.  

Written by - Nitin Tabib | Last Updated : Mar 14, 2022, 07:54 PM IST
  • ಪತಿಗೆ ಪತ್ನಿಯಿಂದಲೇ ಬ್ಲಾಕ್ ಮೇಲ್
  • ಹನಿಮೂನ್ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ
  • ನಂತರ ಬೆಳಕಿಗೆ ಬಂದ ಬೆಚ್ಚಿಬೀಳಿಸುವ ಸತ್ಯಾಂಶ
Cheating Case: ಪತಿಗೆ ಮದುವೆಯ ಮೊದಲ ರಾತ್ರಿಯ ವಿಡಿಯೋ ವೈರಲ್ ಮಾಡುವುದಾಗಿ ಧಮ್ಕಿ ಹಾಕಿದ ಪತ್ನಿ title=
Cunning Wife (File Photo)

ನವದೆಹಲಿ: Wife-Husband Dispute - ತಾನು ಅವಿವಾಹಿತೆ ಎಂದು ಹೇಳಿಕೊಂಡು ನರ್ಸ್‌ ಒಬ್ಬಳು ಗುಜರಾತ್‌ನ (Gujarat) ವ್ಯಕ್ತಿಯೊಂದಿಗೆ ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿ ನಂತರ ವಿವಾಹವಾಗಿದ್ದಾಳೆ. ಬಳಿಕ  ಹಣಕ್ಕಾಗಿ ಪತಿಗೆ ಬ್ಲಾಕ್‌ಮೇಲ್ ಮಾಡಿ, ತನ್ನ ಬೇಡಿಕೆಯನ್ನು ಒಪ್ಪದಿದ್ದರೆ ಹನಿಮೂನ್ (Honeymoon) ವಿಡಿಯೋ ವೈರಲ್ (Viral Video) ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಸಂತ್ರಸ್ತೆಯ ಪತಿ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮೊದಲು ಫೇಸ್‌ಬುಕ್ ಪ್ರೀತಿ ನಂತರ ಮದುವೆ
ಮಾಧ್ಯಮ ವರದಿಗಳ ಪ್ರಕಾರ, ಸಂತ್ರಸ್ತ ಪತಿ ನವೀನ್ ಗುಪ್ತಾ (Naveen Gupta) ವಡೋದರ ನಿವಾಸಿಯಾಗಿದ್ದಾನೆ. ಫೇಸ್ ಬುಕ್ ನಲ್ಲಿ ಭೋಪಾಲ್ ನ ರಾಣಿ ರಾಕ್ವಾರ್ (Rani Rakwar) ಎಂಬಾಕೆಯ ಜೊತೆಗೆ ಸ್ನೇಹ ಬೆಳೆಸಿದ್ದಾನೆ. 2018ರಲ್ಲಿ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ತಾನು ಸಿಂಗಲ್ ಆಗಿದ್ದು, ಭೋಪಾಲ್‌ನ ಜೆಕೆ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದೇನೆ ಎಂದು ರಾಣಿ ನವೀನ್‌ಗೆ ಹೇಳಿದ್ದಳು ಎನ್ನಲಾಗಿದೆ. ನವೀನ್ ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮಹಿಳೆ ಆತನನ್ನು ತನ್ನ ಕುಟುಂಬ ಸದಸ್ಯರೊಂದಿಗೆ ಮಾತನಾಡಿಸಿದ್ದಾಳೆ. ಇಬ್ಬರೂ ಕುಟುಂಬಗಳ ಒಪ್ಪಿಗೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು, ಜೂನ್ 2019 ರಂದು ಭೋಪಾಲ್‌ನ ನೆಹರು ನಗರದಲ್ಲಿ ಆರ್ಯ ಸಮಾಜ ಪದ್ಧತಿಯಿಂದ ಇಬ್ಬರು ವಿವಾಹ ಮಾಡಿಕೊಂಡಿದ್ದಾರೆ. ನವೀನ ಹೇಳಿಕೆಯ ಪ್ರಕಾರ, ಆತ ರಾಣಿಗೆ ಚಿನ್ನಾಭರಣ ಸೇರಿದಂತೆ 8.5 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ನೀಡಿದ್ದಾನೆ. ಪತ್ನಿಯ ಖಾತೆಗೆ  ಆತ ಹಣವನ್ನು ವರ್ಗಾಯಿಸಿದ್ದಾನೆ ಎನ್ನಲಾಗಿದೆ.

ವಂಚನೆಗಾಗಿ ಪತಿ ಮೂರು ತಿಂಗಳು ಜೈಲು ವಾಸ
ಸಂತ್ರಸ್ತ ಯುವಕನ ಸಂಬಂಧಿಕರು ನೀಡಿರುವ ಮಾಹಿತಿಯ ಪ್ರಕಾರ, ಮದುವೆಯಾದ ಕೆಲ ದಿನಗಳವರೆಗೆ ಎಲ್ಲವೂ ಸರಿಯಾಗಿತ್ತು. ಆದರೆ ನಂತರ ಇಡೀ ಕುಟುಂಬಕ್ಕೆ ಆಘಾತ ಬಂದೊದಗಿದೆ. ಮಹಿಳೆ ತನ್ನ ಪತಿ ವಿರುದ್ಧ ಜೈಪುರದಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾಳೆ. ಇದಾದ ನಂತರ ಪೊಲೀಸರು ಬಂದು ನವೀನ್‌ನನ್ನು  ಕರೆದುಕೊಂಡು ಹೋಗಿ ಮೂರು ತಿಂಗಳುಗಳ ಕಾಲ ಜೈಲಿನಲ್ಲಿರಿಸಿದ್ದಾರೆ.

ಇದನ್ನೂ ಓದಿ-Mysuru: ವಕೀಲೆ ಅನುಮಾನಾಸ್ಪದ ಸಾವು; ಪೋಷಕರಿಂದ ಗಂಭೀರ ಆರೋಪ

6 ವರ್ಷಗಳ ಹಿಂದೆ ಮದುವೆಯಾಗಿತ್ತು
ಮನೆಯವರು ಹೇಗೋ ಮಾಡಿ  ನವೀನ್‌ನನ್ನು ಜೈಲಿನಿಂದ ಬಿಡಿಸಿಕೊಂಡು ಬಂದಿದ್ದಾರೆ. ಜೈಲಿನಿಂದ ಹೊರಬಂದ ನಂತರ ನವೀನ್ ಪತ್ನಿಗಾಗಿ ಹುಡುಕಾಟ ನಡೆಸಿದ್ದು, ರಾಣಿಗೆ ಈಗಾಗಲೇ ಮದುವೆಯಾಗಿದ್ದು, ಮಗುವಿದೆ ಎಂಬ ಮಾಹಿತಿ ಆತನಿಗೆ ತಿಳಿದು ಬಂದಿದೆ. ಮದುವೆಯ ವೇಳೆ ರಾಣಿ ನೀಡಿದ ಅಫಿಡವಿಟ್‌ನಲ್ಲಿ ತಾನು ಅವಿವಾಹಿತೆ ಎಂದು ಘೋಷಿಸಿದ್ದಳು. ನಂತರ ಆಕೆಗೆ 6 ವರ್ಷಗಳ ಹಿಂದೆ ಪ್ರೇಮ್ ಸಿಂಗ್ ಡಾಂಗಿ ಎಂಬ ವ್ಯಕ್ತಿಯೊಂದಿಗೆ ವಿವಾಹವಾಗಿದೆ ಎಂಬ ಸತ್ಯ ಬಹಿರಂಗಗೊಂಡಿದೆ.

ಇದನ್ನೂ ಓದಿ-ಟೊಮೇಟೊ ವಿಚಾರಕ್ಕೆ ಮಹಿಳೆ ಕೊಲೆ ಪ್ರಕರಣ: ಆರೋಪಿಗಳು ಅಂದರ್!

ಹನಿಮೂನ್ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ
ನಂತರ ನವೀನ್ ರಾಣಿಯನ್ನು ಭೇಟಿಯಾಗಿ ತನ್ನ ಪ್ರೀತಿ ನಿಜ ಎಂದು ಹೇಳಿದ್ದಾನೆ. ಇದಾದ ನಂತರ ಮಹಿಳೆ ಆತನಿಗೆ ಬೆದರಿಕೆಯೊಡ್ಡಲು ಆರಂಭಿಸಿದ್ದಾಳೆ. ಯುವತಿ ವಿಚ್ಛೇದನಕ್ಕಾಗಿ ಯುವಕನ ಮೇಲೆ ಒತ್ತಡ ಹೇರಲು ಆರಂಭಿಸಿದ್ದಾಳೆ. ಇನ್ನೊಂದೆಡೆ ನವೀನ್ ಸಂಪೂರ್ಣ ಸತ್ಯವನ್ನು ನ್ಯಾಯಾಲಯಕ್ಕೆ ತಿಳಿಸಿದ್ದಾನೆ. ವಿಚ್ಛೇದನ ಪತ್ರಕ್ಕೆ ಸಹಿ ಹಾಕಲು ರಾಣಿ ತನ್ನನ್ನು ಭೋಪಾಲ್‌ಗೆ ಕರೆದಿದ್ದಾಳೆ ಎಂದು ಅವನು ನ್ಯಾಯಾಲಯಕ್ಕೆ ತಿಳಿಸಿದ್ದಾನೆ. ಭೋಪಾಲ್ ಗೆ ಬಂದ ತಕ್ಷಣ ಆತನ ಬ್ಯಾಗ್, ಪಾಸ್ ಪೋರ್ಟ್, ಬ್ಯಾಂಕ್ ಪಾಸ್ ಬುಕ್ ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ಆತನ ಬಳಿಯಿಂದ ತೆಗೆದುಕೊಂಡು ಹೋಗಿದ್ದಾರೆ ಎಂದು ಆತ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾನೆ. 10 ಲಕ್ಷ ರೂಪಾಯಿ ನೀಡದಿದ್ದರೆ ಹನಿಮೂನ್ ವಿಡಿಯೋವನ್ನು ಇಂಟರ್‌ನೆಟ್‌ನಲ್ಲಿ ಹಾಕಿ, ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸುವುದಾಗಿ ಪತ್ನಿ ಬೆದರಿಕೆ ಹಾಕಿದ್ದಾಳೆ ಎಂದು ಆತ ನ್ಯಾಯಾಲಯಕ್ಕೆ ತಿಳಿಸಿದ್ದಾನೆ.

ಇದನ್ನೂ ಓದಿ-ಈಶಾನ್ಯ ರಾಜ್ಯದ ಬಡ ಮಹಿಳೆಯರೇ ಇವರ ಟಾರ್ಗೆಟ್.. ಮಾಂಸ ದಂಧೆ ನಡೆಸುತ್ತಿದ್ದ ಮೂವರ ಅರೆಸ್ಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News