ನವದೆಹಲಿ: ಇಸ್ರೋದ ಬಹುನಿರೀಕ್ಷಿತ ಯೋಜನೆಯಾದ ಚಂದ್ರಯಾನ--2 ಉಡಾವಣೆ ಸೋಮವಾರ 2.43ಕ್ಕೆ ಯಶಸ್ವಿಯಾಯಿತು. ಆ ಮೂಲಕ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರ ಎನ್ನುವ ಶ್ರೆಯವನ್ನು ಭಾರತ ಪಡೆಯಿತು.
#Chandrayaan2 lifts off from Sriharikota centre #ISRO pic.twitter.com/fKpVE0a30o
— ANI (@ANI) July 22, 2019
ಆಂಧ್ರಪ್ರದೇಶದ ನೆಲ್ಲೊರ್ ಜಿಲ್ಲೆಯ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ--2 ಯಶಸ್ವಿಯಾಗಿ 2.45 ಕ್ಕೆ ಸರಿಯಾಗಿ ಗಗನಕ್ಕೆ ನೆಗೆಯಿತು, ಇದರ ಕ್ಷಣಗಣನೆಗೆ 20 ಗಂಟೆಗಳನ್ನು ನಿಗದಿ ಪಡಿಸಲಾಗಿತ್ತು. ಈ ಹಿನ್ನಲೆಯಲ್ಲಿ ಭಾನುವಾರ ಸಾಯಂಕಾಲದಿಂದ ವಿಜ್ಞಾನಿಗಳು ಕಾತುರದಿಂದ ಕಾಯುತ್ತಿದ್ದರು.
ISRO Chief K Sivan: I'm extremely happy to announce that the #GSLVMkIII-M1 successfully injected #Chandrayaan2 spacecraft into Earth Orbit. It is the beginning of a historic journey of India towards moon & to land at a place near South Pole to carry out scientific experiments. pic.twitter.com/vgNXVNOcSr
— ANI (@ANI) July 22, 2019
ಕಳೆದ ವಾರದ ಉಡಾವಣೆಗೂ ಮೊದಲು ತಾಂತ್ರಿಕ ದೋಷಪತ್ತೆಯಾದ ಹಿನ್ನಲೆಯಲೆಯಲ್ಲಿ ಕಡೆಕ್ಷಣದಲ್ಲಿ ಉಡಾವಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಇಲ್ಲದೆ ಹೋದಲ್ಲಿ ಈ ಮಹಾತ್ವಾಕಾಂಕ್ಷೆಯ ಯೋಜನೆ ವಿಫಲವಾಗುವ ಸಾಧ್ಯತೆ ಇತ್ತು ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದರು. ಈ ಯೋಜನೆ ನಿರ್ದೇಶಕರಾದ ರಿತು ಕರಿಧಾಲ್ ಅವರು ಚಂದ್ರಯಾನ್-2 ಉಡಾವಣೆ ನೇತೃತ್ವವನ್ನು ವಹಿಸಿದ್ದರು.
#WATCH live from Sriharikota: ISRO launches #Chandrayaan2(Courtesy: ISRO) https://t.co/AiDD9xhQZQ
— ANI (@ANI) July 22, 2019
ಚಂದ್ರಯಾನ-2 ಉಡಾವಣೆ ಮಾಡಿದ ನಂತರ ಮಾತನಾಡಿದ ಇಸ್ರೋ ಅಧ್ಯಕ್ಷ ಕೆ.ಶಿವನ್ ಚಂದ್ರದೆಡೆಗಿನ ಪಯಣ ಐತಿಹಾಸಿಕವಾದದ್ದು, ಇದಕ್ಕೂ ಮೊದಲು ನಾವು ತಾಂತ್ರಿಕ ದೋಷವನ್ನು ಅನುಭವಿಸಿದರು ಸಹಿತ ಈಗ ಈ ಪರೀಕ್ಷೆಯನ್ನು ಸಫಲಗೊಳಿಸಲು ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.