ಆಮದು ಸುಂಕ ಏರಿಸಿದ ಕೇಂದ್ರ ಸರ್ಕಾರ: ನಿನ್ನೆ ಮಧ್ಯರಾತ್ರಿಯಿಂದ ಈ ವಸ್ತುಗಳು ದುಬಾರಿ

ಎಸಿ, ಪ್ರಿಡ್ಜ್ , ವಾಷಿಂಗ್ ಮಿಷಿನ್ ಇನ್ನು ದುಬಾರಿ!

Last Updated : Sep 27, 2018, 09:06 AM IST
ಆಮದು ಸುಂಕ ಏರಿಸಿದ ಕೇಂದ್ರ ಸರ್ಕಾರ: ನಿನ್ನೆ ಮಧ್ಯರಾತ್ರಿಯಿಂದ ಈ ವಸ್ತುಗಳು ದುಬಾರಿ title=

ನವದೆಹಲಿ: ಅನಗತ್ಯ ಸರಕುಗಳ  ಆಮದು ತಡೆ ಉದ್ದೇಶದೊಂದಿಗೆ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಜೆಟ್  ಇಂಧನ, ಹವಾನಿಯಂತ್ರಕ,  ರೆಪ್ರಿಜಿರೇಟರ್ ಒಳಗೊಂಡಂತೆ 19ಕ್ಕೂ ಹೆಚ್ಚು ವಸ್ತುಗಳ ಮೇಲಿನ ಆಮದು ಸುಂಕವನ್ನು  ಹೆಚ್ಚಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. 

ಈ ಆದೇಶವು ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದ್ದು, ಎಸಿ, ಪ್ರಿಡ್ಜ್ , ವಾಷಿಂಗ್ ಮಿಷಿನ್,  ವಾಯುಯಾನ, ಸ್ಪೀಕರ್ಸ್, ರಾಡಿಕಲ್ ಕಾರ್ ಟೈರ್ಸ್,  ಆಭರಣ ವಸ್ತುಗಳು, ಕಿಚ್ಚನ್ ಮತ್ತು ಟೇಬಲ್ ಬಟ್ಟೆ, ಸೂಟ್ ಕೇಸ್ ಮತ್ತು  ಕೆಲವು ಪ್ಲಾಸ್ಟಿಕ್ ಸರಕುಗಳು ಮತ್ತಿತರ ವಸ್ತುಗಳು ದುಬಾರಿಯಾಗಲಿವೆ.

ಕಳೆದ ವರ್ಷ ದೇಶಕ್ಕೆ ಸರಕು ಸಾಗಣೆ ಮಾಡಿರುವ ಒಟ್ಟು ಆಮದು ವೆಚ್ಚ 86,000 ಕೋಟಿ ರೂಪಾಯಿಗಳಾಗಿವೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಇಂತಹ ವಸ್ತುಗಳ ಆಮದು ತಡೆಗಟ್ಟುವ ಉದ್ದೇಶದಿಂದ ಕೇಂದ್ರಸರ್ಕಾರ ಆಮದು ಸುಂಕ ಹೆಚ್ಚಿಸಿದೆ. ಇದರಿಂದಾಗಿ ವಿತ್ತೀಯ ಕೊರತೆ ಸುಧಾರಿಸಲಿದ್ದು, 19 ವಸ್ತುಗಳ ಆಮದು ಸುಂಕವನ್ನು ಹೆಚ್ಚಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಎಸಿ, ಪ್ರಿಡ್ಜ್ , ವಾಷಿಂಗ್ ಮಿಷಿನ್(10kg ಗಿಂತ ಕಡಿಮೆಯ)ಗಳಿಗೆ ಶೇ. 20 ರಷ್ಟು ಆಮದು ಸುಂಕ ವಿಧಿಸಲಾಗಿದ್ದು ಆಮದು ಸುಂಕ ದ್ವಿಗುಣವಾಗಿದೆ. 

Trending News