7 Pay Commission DA: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌: DA ಹೆಚ್ಚಳದ ಬಂಪರ್?

ಕೊರೋನಾ ವೈರಸ್‌ ಕಾರಣದಿಂದಾಗಿ ತಡೆಹಿಡಿಯಲಾಗಿದ್ದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ

Last Updated : Mar 21, 2021, 04:27 PM IST
  • ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವ ತುಟ್ಟಿಭತ್ಯೆಯನ್ನು ಹೆಚ್ಚಿಸಿ ಹೋಳಿ ಹಬ್ಬಕ್ಕೆ ಕೇಂದ್ರ ಸರ್ಕಾರ ಭರ್ಜರಿ ಕೊಡುಗೆ ನೀಡುವ ಸಾಧ್ಯತೆ ಇದೆ.
  • ಕೊರೋನಾ ವೈರಸ್‌ ಕಾರಣದಿಂದಾಗಿ ತಡೆಹಿಡಿಯಲಾಗಿದ್ದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ
  • ಕೇಂದ್ರದ ಉದ್ಯೋಗಿಗಳು ಈವರೆಗೆ ಶೇ.17ರಷ್ಟು ತುಟ್ಟಿಭತ್ಯೆ ಪಡೆಯುತ್ತಿದ್ದಾರೆ.
7 Pay Commission DA: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌: DA ಹೆಚ್ಚಳದ ಬಂಪರ್? title=

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವ ತುಟ್ಟಿಭತ್ಯೆಯನ್ನು ಹೆಚ್ಚಿಸಿ ಹೋಳಿ ಹಬ್ಬಕ್ಕೆ ಕೇಂದ್ರ ಸರ್ಕಾರ ಭರ್ಜರಿ ಕೊಡುಗೆ ನೀಡುವ ಸಾಧ್ಯತೆ ಇದೆ. ಕೊರೋನಾ ವೈರಸ್‌ ಕಾರಣದಿಂದಾಗಿ ತಡೆಹಿಡಿಯಲಾಗಿದ್ದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಜು.1ರಿಂದ ನೀಡಲಾಗುತ್ತದೆ ಎಂದು ಘೋಷಿಸಿದ ಬೆನ್ನಲ್ಲೇ ಈ ಸುದ್ದಿ ಹೊರಬಿದ್ದಿದೆ.

ಕೇಂದ್ರದ ಉದ್ಯೋಗಿಗಳು ಈವರೆಗೆ ಶೇ.17ರಷ್ಟು ತುಟ್ಟಿಭತ್ಯೆ(Dearness Allowance) ಪಡೆಯುತ್ತಿದ್ದಾರೆ. ಕೊರೋನಾ ಕಾರಣ ಅವರಿಗೆ 2020ರ ಜ.1, ಜು.1 ಹಾಗೂ 2021ರ ಜ.1ರ ಡಿಎ ಕಂತು ಬಿಡುಗಡೆ ಆಗಿರಲಿಲ್ಲ. ಆದರೆ ಈಗ ಒಮ್ಮೆಲೇ ಜುಲೈ 1ರಂದು ತಡೆ ಹಿಡಿದ 3 ಕಂತು ಸೇರಿ ಒಟ್ಟು 4 ಕಂತಿನ ಡಿಎ (17 + 3 + 4 + 4) ಬಿಡುಗಡೆ ಆಗಲಿದ್ದು, ಇದರಿಂದಾಗಿ ಶೇ.28ರಷ್ಟು ಡಿಎ ಪಡೆದಂತಾಗುತ್ತದೆ.

ಮಹಾರಾಷ್ಟ್ರದ ಮೈತ್ರಿಕೂಟ ಸರ್ಕಾರದಲ್ಲಿ ಬಿರುಕು ತಂದ ಮಾಜಿ ಪೋಲಿಸ್ ಅಧಿಕಾರಿ ಪತ್ರ..!

7 ನೇ ವೇತನ ಆಯೋಗದ (7 Pay Commission) ಪ್ರಕಾರ ಉದ್ಯೋಗಿಯೊಬ್ಬರು 21,000 ಮೂಲ ವೇತನ() ಪಡೆಯುತ್ತಿದ್ದರೆ, 7ನೇ ಸಿಪಿಸಿ ವೇತನ 52,970 ರು. (21000x2.57) ಆಗಲಿದೆ. ಜೊತೆಗೆ 7ನೇ ವೇತನ ಆಯೋಗದ ತುಟ್ಟಿಭತ್ಯೆ, HRA ಹಾಗೂ ಪ್ರಯಾಣ ಭತ್ಯೆ ಸೌಲಭ್ಯಕ್ಕೂ ಅರ್ಹರಾಗುತ್ತಾರೆ.

Bank Holidays: ಸಾರ್ವಜನಿಕರ ಗಮನಕ್ಕೆ; ಮಾ. 27ರಿಂದ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News