CBSE 12th Board Result 2021 Formula: 30:30:40 ರ ಸೂತ್ರದಲ್ಲಿ ಸಿದ್ಧವಾಗಲಿದೆಯೇ ರಿಸಲ್ಟ್?

CBSE 12th Board Result 2021 Formula latest update: ಸಿಬಿಎಸ್‌ಇ ರಚಿಸಿದ 13 ಸದಸ್ಯರ ಸಮಿತಿಯು ಸಿಬಿಎಸ್‌ಇ 12 ನೇ ತರಗತಿಯ ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡಲು 30:30:40 ಸೂತ್ರವನ್ನು ಅಳವಡಿಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.  

Written by - Yashaswini V | Last Updated : Jun 16, 2021, 02:45 PM IST
  • ಸಿಬಿಎಸ್‌ಇ) 12 ನೇ ತರಗತಿ ಫಲಿತಾಂಶ 2021 ರ ಘೋಷಣೆಯ ದಿನಾಂಕವನ್ನು ಶೀಘ್ರದಲ್ಲೇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ
  • ಸಿಬಿಎಸ್‌ಇ (CBSE) ರಚಿಸಿದ 13 ಸದಸ್ಯರ ಸಮಿತಿಯು ಸಿಬಿಎಸ್‌ಇ 12 ನೇ ತರಗತಿಯ ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡಲು 30:30:40 ಸೂತ್ರವನ್ನು ಅಳವಡಿಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ
  • ಸಮಿತಿಯು ನಿಗದಿಪಡಿಸಿದ ಮೌಲ್ಯಮಾಪನ ಮಾನದಂಡದ ಆಧಾರದ ಮೇಲೆ ಮಂಡಳಿಯು ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆಯ ಫಲಿತಾಂಶ 2021 ಅನ್ನು ಪ್ರಕಟಿಸುತ್ತದೆ
CBSE 12th Board Result 2021 Formula: 30:30:40 ರ ಸೂತ್ರದಲ್ಲಿ ಸಿದ್ಧವಾಗಲಿದೆಯೇ ರಿಸಲ್ಟ್? title=
CBSE 12th Board Result 2021 Formula latest update

CBSE 12th Board Result 2021 Formula latest update: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 12 ನೇ ತರಗತಿ ಫಲಿತಾಂಶ 2021 ರ ಘೋಷಣೆಯ ದಿನಾಂಕವನ್ನು ಶೀಘ್ರದಲ್ಲೇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ. ಆದಾಗ್ಯೂ, ಸಿಬಿಎಸ್‌ಇ 12 ನೇ ತರಗತಿ ಮೌಲ್ಯಮಾಪನ ಪ್ರಕ್ರಿಯೆ 2021 ಗಾಗಿ ವಿದ್ಯಾರ್ಥಿಗಳು ಇನ್ನೂ ಕಾಯುತ್ತಿದ್ದಾರೆ. ಸಿಬಿಎಸ್‌ಇ ಸಲಹಾ ಸಮಿತಿಯು ವಸ್ತುನಿಷ್ಠ ಮಾನದಂಡದ ಕುರಿತು ತನ್ನ ವರದಿಯನ್ನು ಸಲ್ಲಿಸಲಿದ್ದು, ಅದರ ಆಧಾರದ ಮೇಲೆ ಸಿಬಿಎಸ್‌ಇ 12 ನೇ ತರಗತಿಯ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ತಿಳಿದುಬಂದಿದೆ.

ಸಿಬಿಎಸ್‌ಇ (CBSE) ರಚಿಸಿದ 13 ಸದಸ್ಯರ ಸಮಿತಿಯು ಸಿಬಿಎಸ್‌ಇ 12 ನೇ ತರಗತಿಯ ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡಲು 30:30:40 ಸೂತ್ರವನ್ನು ಅಳವಡಿಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ. ಮಾಧ್ಯಮ ವರದಿಯ ಪ್ರಕಾರ, 10 ನೇ ಮತ್ತು 11 ನೇ ಪರೀಕ್ಷೆಯ ಅಂತಿಮ ಫಲಿತಾಂಶಕ್ಕೆ 30% ವೆಟೆಜ್ ನೀಡಲಾಗುವುದು ಮತ್ತು 12 ನೇ ತರಗತಿಯ ಪೂರ್ವ-ಮಂಡಳಿಯ ಪರೀಕ್ಷೆಗೆ 40% ವೆಟೆಜ್ ಅನ್ನು ನೀಡಲಾಗುವುದು. ಸಮಿತಿಯು ನಿಗದಿಪಡಿಸಿದ ಮೌಲ್ಯಮಾಪನ ಮಾನದಂಡದ ಆಧಾರದ ಮೇಲೆ ಮಂಡಳಿಯು ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆಯ ಫಲಿತಾಂಶ 2021 ಅನ್ನು ಪ್ರಕಟಿಸುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ - CBSE 12th Exam Cancelled: 'ಸರ್ ಫೆಯರ್ ವೆಲ್ ಆದ್ರು ಮಾಡ್ಸಿ, 12ನೇ B ತರಗತಿಯ ನೇಹಾಳನ್ನು ಸೀರೆಯಲ್ಲಿ ನೋಡ್ಬೇಕ್ಕಿತ್ತು'

ಇದಕ್ಕೂ ಮೊದಲು, ಜೂನ್ 1 ರಂದು ಸಿಬಿಎಸ್‌ಇ ಕೋವಿಡ್ -19 (Covid 19) ಸಾಂಕ್ರಾಮಿಕ ರೋಗದ ದೃಷ್ಟಿಯಿಂದ 2020-21ರ ಶೈಕ್ಷಣಿಕ ವರ್ಷದ ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಿತು. 12 ನೇ ತರಗತಿ ಮಂಡಳಿ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರ ಬೆನ್ನಲ್ಲೇ ದೇಶಾದ್ಯಂತ ವಿವಿಧ ರಾಜ್ಯ ಮಂಡಳಿಗಳು 12 ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಿದವು. 

ಇದನ್ನೂ ಓದಿ -  CBSE Class 12 Board Exam 2021 Cancelled: 12ನೇತರಗತಿ ಬೋರ್ಡ್ ಪರೀಕ್ಷೆಗಳು ರದ್ದು, ಪ್ರಧಾನಿ ಮೋದಿ ಸಭೆಯಲ್ಲಿ ನಿರ್ಧಾರ

ಆದರೆ, ತಮ್ಮ 12 ನೇ ತರಗತಿಯ ಅಂಕಗಳಿಂದ ತೃಪ್ತರಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲು ಪರಿಸ್ಥಿತಿಗಳು ಅನುಕೂಲಕರವಾದ ನಂತರವೇ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದು ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News