ಎಸ್ಸಿ/ಎಸ್ಟಿ ಸದಸ್ಯರು ಎರಡು ರಾಜ್ಯಗಳಲ್ಲಿ ಮೀಸಲಾತಿ ಪಡೆಯಲು ಅರ್ಹರಲ್ಲ: ಸುಪ್ರೀಂ

ಉದ್ಯೋಗ ಮತ್ತು ಶಿಕ್ಷಣದ ಕಾರಣಕ್ಕಾಗಿ ವಲಸೆ ಹೊಂದಿದ ಒಂದು ರಾಜ್ಯದ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯನ್ನು ಇತರ ರಾಜ್ಯಗಳಲ್ಲಿನ ಪರಿಶಿಷ್ಟ ಜಾತಿ ಸಮುದಾಯದ ಸದಸ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ಎಂ ಹೇಳಿದೆ.

Last Updated : Aug 30, 2018, 07:23 PM IST
ಎಸ್ಸಿ/ಎಸ್ಟಿ ಸದಸ್ಯರು ಎರಡು ರಾಜ್ಯಗಳಲ್ಲಿ ಮೀಸಲಾತಿ ಪಡೆಯಲು ಅರ್ಹರಲ್ಲ: ಸುಪ್ರೀಂ title=

ನವದೆಹಲಿ: ಒಂದು ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಸದಸ್ಯರು ಮತ್ತೊಂದು ರಾಜ್ಯದ ಸರ್ಕಾರಿ ನೇಮಕಾತಿಗಳಲ್ಲಿ ಮೀಸಲಾತಿಯ ಲಾಭ ಪಡೆಯಲು ಅರ್ಹನಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ಇತರೆ ರಾಜ್ಯಗಳ ಎಸ್ಸಿ/ಎಸ್ಟಿ ಸದಸ್ಯರು ದೆಹಲಿಯ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಸೌಲಭ್ಯ ಪಡೆಯಬಹುದೇ ಎಂಬ ಕುರಿತು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ, ಉದ್ಯೋಗ ಮತ್ತು ಶಿಕ್ಷಣದ ಕಾರಣಕ್ಕಾಗಿ ವಲಸೆ ಹೊಂದಿದ ಒಂದು ರಾಜ್ಯದ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯನ್ನು ಇತರ ರಾಜ್ಯಗಳಲ್ಲಿನ ಪರಿಶಿಷ್ಟ ಜಾತಿ ಸಮುದಾಯದ ಸದಸ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದಿದೆ.

ನ್ಯಾಯಮೂರ್ತಿಗಳಾದ ಎನ್.ವಿ ರಮಾನಾ, ಆರ್.ಬಾನುಮತಿ, ಎಂ. ಶಂತನಗೌಡರ್ ಮತ್ತು ಜಸ್ಟೀಸ್ ಎಸ್.ಎ.ನಜೀರ್ ಅವರನ್ನೊಳಗೊಂಡ ಪೀಠವು " 'A' ರಾಜ್ಯದಲ್ಲಿ ಪರಿಶಿಷ್ಟ ಜಾತಿ ಎಂದು ಘೋಷಿಸಲ್ಪಟ್ಟ ಒಬ್ಬ ವ್ಯಕ್ತಿಯು 'B' ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಯ ಪ್ರಯೋಜನ ಪಡೆಯಲು ಅರ್ಹನಲ್ಲ. ಆತ 'A' ರಾಜ್ಯದಲ್ಲಿ ಮಾತ್ರ ಮೀಸಲಾತಿ ಪ್ರಯೋಜನ ಪಡೆಯಬಹುದು" ಎಂದು ಸ್ಪಷ್ಟಪಡಿಸಿದೆ. 

Trending News