ನವದೆಹಲಿ: 2019 ರ ಸಾರ್ವತ್ರಿಕ ಚುನಾವಣೆಗೂ ಮೊದಲು ಮೋದಿ ಸರ್ಕಾರ ದೇಶದ ಜನರಿಗೆ ದೊಡ್ಡ ಉಡುಗೊರೆ ನೀಡುವ ನಿರೀಕ್ಷೆಯಿದೆ. ವಾಸ್ತವವಾಗಿ, ಸರ್ಕಾರ ಯುನಿವರ್ಸಲ್ ಬೇಸಿಕ್ ಇನ್ಕಮ್ (ಯುಬಿಐ) ಜಾರಿಗೆ ಯೋಜಿಸುತ್ತಿದೆ. UBI ಅನುಷ್ಠಾನಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 27 (ಗುರುವಾರ) ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಬಹುದೆಂದು ನಿರೀಕ್ಷಿಸಲಾಗಿದೆ. ಒಂದು ವೇಳೆ UBI ಜಾರಿಗೊಂಡಿದ್ದೆಯಾದರೆ ಅದು ದೇಶದ ಪ್ರತಿಯೊಬ್ಬ ನಾಗರಿಕರಿಗೆ ಪ್ರಯೋಜನವನ್ನು ನೀಡುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಯೋಜನೆಯ ಮಾದರಿಗಳನ್ನು ಗುರುವಾರ ಸಂಪುಟ ಸಹೋದ್ಯೋಗಿಗಳೊಂದಿಗೆ ಚರ್ಚಿಸುವ ಸಾಧ್ಯತೆಯಿದೆ.
ಯೋಜನೆಯ ಮಾದರಿ ಬಗ್ಗೆ ಚರ್ಚೆ ಸಾಧ್ಯತೆ:
ದೇಶದ ಕೆಲವು ರಾಜ್ಯಗಳಲ್ಲಿ ರೈತರಿಗೆ ಪ್ರಯೋಜನ ನೀಡುತ್ತಿರುವ ಈ ಯೋಜನೆಯ ಮಾದರಿ ಚರ್ಚಿಸಬಹುದು ಎಂದು ಮೂಲಗಳು ಹೇಳಿವೆ. ಸಭೆಯಲ್ಲಿ, ಯಾವಾಗ ಮತ್ತು ಹೇಗೆ ಯೋಜನೆಯನ್ನು ಕಾರ್ಯಗತಗೊಳಿಸಬೇಕು ಎಂಬುದರ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ. ಮಧ್ಯಂತರ ಬಜೆಟ್ನಲ್ಲಿ ಸರ್ಕಾರ ಈ ಕುರಿತ ನೀಲನಕ್ಷೆಯನ್ನು ಪ್ರಸ್ತುತ ಪಡಿಸಬಹುದೆಂದು ನಿರೀಕ್ಷಿಸಲಾಗಿದೆ. ಚುನಾವಣೆಗೆ ಮುಂಚಿತವಾಗಿ ಸರ್ಕಾರ ಇದನ್ನು ಘೋಷಿಸಬಹುದು ಎನ್ನಲಾಗಿದೆ.
ಇದಲ್ಲದೆ, ಎಲ್ಲಾ ಸಚಿವಾಲಯಗಳಿಂದ ರೈತರಿಗೆ ಮಾತ್ರ ಅನುಷ್ಠಾನ ಮಾಡಬೇಕೋ ಅಥವಾ ಎಲ್ಲಾ (ನಿರುದ್ಯೋಗಿ ಮತ್ತು ರೈತ) ತನ್ನ ವ್ಯಾಪ್ತಿಯೊಳಗೆ ಹೇಗೆ ಜಾರಿಗೊಳಿಸಬಹುದು ಎಂದು ಕೇಳಲಾಗಿದೆ. ಇದಕ್ಕಾಗಿ ಸರಕಾರವು ಸಮಿತಿಯನ್ನು ರಚಿಸಬಹುದು ಎಂಬ ಬಗ್ಗೆ ಮೂಲಗಳಿಂದ ಮಾಹಿತಿ ಲಭಿಸಿದೆ.
ಏನಿದು ಯುನಿವರ್ಸಲ್ ಬೇಸಿಕ್ ಇನ್ಕಮ್:
ಸರ್ಕಾರದ ಪರವಾಗಿ ಸಾರ್ವತ್ರಿಕವಾದ ಮೂಲ ಆದಾಯದ (ಯುಬಿಐ) ಯೋಜನೆಯ ಉಡುಗೊರೆ ಸಾರ್ವಜನಿಕರಿಗೆ ನೀಡಿದರೆ, ದೇಶದ ಪ್ರತಿ ಪ್ರಜೆಯ ಖಾತೆಗೆ ನಿಗದಿತ ಮೊತ್ತವನ್ನು ನೀಡಲಾಗುತ್ತದೆ. ಇದು ಮೂಲಭೂತ ಅಗತ್ಯಗಳನ್ನು ಪೂರೈಸಲು ಅವರಿಗೆ ಸಹಾಯ ಮಾಡುತ್ತದೆ. ಸರ್ಕಾರವು ಈ ಯೋಜನೆಗಾಗಿ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದೆ. ದೇಶದ 20 ಮಿಲಿಯನ್ ಜನರು ಈ ಯೋಜನೆಯ ಪ್ರಯೋಜನ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಫೆಬ್ರವರಿ 2019 ರ ಮಧ್ಯಂತರ ಬಜೆಟ್ನಲ್ಲಿ ಯುನಿವರ್ಸಲ್ ಬೇಸಿಕ್ ಇನ್ಕಮ್ ಸ್ಕೀಮ್ ಅನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸುವ ನಿರೀಕ್ಷೆಯಿದೆ.