ಬ್ಯಾಂಕ್ ಖಾತೆ-ಹೊಸ ಸಿಮ್‌ಗೆ ಆಧಾರ್ ಕಡ್ಡಾಯವಲ್ಲ, ಸರ್ಕಾರದ ಅನುಮೋದನೆ

ಬ್ಯಾಂಕ್ ಖಾತೆ ತೆರೆಯಲು ಮತ್ತು ನೂತನ ಮೊಬೈಲ್ ಫೋನ್ ಸಂಪರ್ಕಕ್ಕಾಗಿ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಕೇಂದ್ರ ಸಂಪುಟ ಸಭೆ ನಿರ್ಧರಿಸಿದೆ.  

Last Updated : Mar 1, 2019, 12:30 PM IST
ಬ್ಯಾಂಕ್ ಖಾತೆ-ಹೊಸ ಸಿಮ್‌ಗೆ ಆಧಾರ್ ಕಡ್ಡಾಯವಲ್ಲ, ಸರ್ಕಾರದ ಅನುಮೋದನೆ  title=

ನವದೆಹಲಿ: ಆಧಾರ್ ಹಾಗೂ ಇತರ ಕಾನೂನು(ತಿದ್ದುಪಡಿ)ಮಸೂದೆಗಳ ಮೇಲೆ ಪರಿಣಾಮಬೀರುವ ಆಧ್ಯಾದೇಶದ ಘೋಷಣೆಗೆ ಗುರುವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. 

ಬ್ಯಾಂಕ್ ಖಾತೆ ತೆರೆಯಲು ಹಾಗೂ ಮೊಬೈಲ್ ಫೋನ್ ಸಂಪರ್ಕ ಪಡೆಯಲು ಗುರುತು ಪತ್ರವಾಗಿ ಆಧಾರ್ ಬಳಕೆಯನ್ನು ಸ್ವಯಂಪ್ರೇರಿತವನ್ನಾಗಿಸಲು ಅವಕಾಶ ನೀಡುವ ಆಧ್ಯಾದೇಶಕ್ಕೆ ಗುರುವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಆಧಾರ್ ತಿದ್ದುಪಡಿ ಮಸೂದೆ ಜ.4 ರಂದು ಲೋಕಸಭೆಯಲ್ಲಿ ಮಂಡನೆಯಾಗಿತ್ತು. ಆದರೆ, ರಾಜ್ಯಸಭೆಯಲ್ಲಿ ಮಸೂದೆ ಮಂಡನೆ ಬಾಕಿ ಇತ್ತು. ಈಗಿನ ಲೋಕಸಭೆ ಅವಧಿ ಮುಗಿಯುವುದರೊಂದಿಗೆ ಮಸೂದೆ ಕೈತಪ್ಪುವ ಸಾಧ್ಯತೆಯ ಹಿನ್ನೆಲೆಯಲ್ಲಿ ಆಧ್ಯಾದೇಶ ಹೊರಡಿಸುವುದು ಅಗತ್ಯವಾಗಿತ್ತು.

ಆಧಾರ್ ಹಾಗೂ ಇತರ ಕಾನೂನು(ತಿದ್ದುಪಡಿ)ಮಸೂದೆಗಳ ಮೇಲೆ ಪರಿಣಾಮಬೀರುವ ಆಧ್ಯಾದೇಶದ ಘೋಷಣೆಗೆ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಹಾಗೂ ಐಟಿ ಸಚಿವ ರವಿ ಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಗೆ (ಪಿಎಂಎಲ್‌ಎ) ತಿದ್ದುಪಡಿ ತರುವ ಮೂಲಕ ಬ್ಯಾಂಕ್‌ಗಳಿಗೆ ಆಧಾರ್‌ ಜೋಡಣೆಯನ್ನು ಐಚ್ಛಿಕ ಗೊಳಿಸಲು ಸರಕಾರ ಸಮ್ಮತಿಸಿದೆ. ಆಧಾರ್ ಮತ್ತು ಗೌಪ್ಯತೆಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಯಾದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಲಿಗ್ರಾಫ್ ಆಕ್ಟ್ ಮತ್ತು ಮನಿ ಲಾಂಡರಿಂಗ್ ಆಕ್ಟ್ (ಪಿಎಮ್ಎಲ್ಎಎ) ತಡೆಗಟ್ಟುವಿಕೆ ಆಧಾರದ ಮೇಲೆ ಸ್ವಯಂಪ್ರೇರಿತವಾಗಿ KYC ಗೆ ಬಳಸಬಹುದು. ಆಧಾರ್ ಬಳಸುವ ಕಂಪನಿಗಳು ಗೌಪ್ಯತೆಗೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಬೇಕು ಎಂದು ರವಿ ಶಂಕರ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

Trending News