ದೆಹಲಿ: Rajeev Ratan Awas Yojna Flats Collapse - ರಾಷ್ಟ್ರ ರಾಜಧಾನಿ ದೆಹಲಿಯ ಬವಾನಾ (Bawana) ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ರಾಜೀವ್ ರತನ್ ಆವಾಸ್ ಯೋಜನೆಯ (Rajiv Ratan Awas Yojna) ಹಲವು ಫ್ಲಾಟ್‌ಗಳು ಶುಕ್ರವಾರ ಮಧ್ಯಾಹ್ನ ಕುಸಿದು ಬಿದ್ದಿವೆ. ಈ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ ಜೆಜೆ ಕಾಲೋನಿ ನಿವಾಸಿಗಳಾದ ಫಾತಿಮಾ ಮತ್ತು ಶಹನಾಜ್ ಎಂಬ ಇಬ್ಬರು ಮಹಿಳೆಯರನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ, ಅವಶೇಷಗಳ (Building Collapse) ಅಡಿ ಇನ್ನೂ ಹಲವರು ಸಿಲುಕಿ ಹಾಕಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗುತ್ತಿದೆ. ಸುಮಾರು 300-400 ಫ್ಲಾಟ್‌ಗಳನ್ನು ಹೊಂದಿರುವ ರಾಜೀವ್ ರತನ್ ಆವಾಸ್ ಯೋಜನೆಯ ಭಾಗವಾಗಿರುವ ಕಟ್ಟಡವು ಕುಸಿದಿದೆ ಎಂದು ಉಪ ಪೊಲೀಸ್ ಆಯುಕ್ತ (ಬಾಹ್ಯ, ಉತ್ತರ) ಬ್ರಿಜೇಂದ್ರ ಕುಮಾರ್ ಯಾದವ್ ತಿಳಿಸಿದ್ದಾರೆ. ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ-Valentine Day Horoscope - ಈ ಎರಡು ಗ್ರಹಗಳ ಪ್ರಭಾವವಿರುವ ಯುವಕರ ಮೇಲೆ ಯುವತಿಯರು ಫಿದಾ
ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಮೊನ್ನೆ ಗುರುವಾರ ರಾತ್ರಿ, ದೆಹಲಿಯ ಪಕ್ಕದ ಗುರುಗ್ರಾಮ್‌ನಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಐಷಾರಾಮಿ ಸೊಸೈಟಿ ಕಟ್ಟಡದ ಭಾಗವು ಕುಸಿದು ಇಬ್ಬರು ಮಹಿಳೆಯರು ಮೃತಪಟ್ಟಿದ್ದರು. ಮಾಹಿತಿಯ ಪ್ರಕಾರ, ಶುಕ್ರವಾರ ಮಧ್ಯಾಹ್ನ 2:45 ಕ್ಕೆ, ನರೇಲಾ ಪೊಲೀಸ್ ಠಾಣೆಗೆ ದೆಹಲಿ ಜಲ ಬೋರ್ಡ್ ಬಳಿಯ ಕಟ್ಟಡವೊಂದು ಕುಸಿದಿದೆ ಎಂದು ಸೂಚಿಸಲಾಗಿತು, ಅದರಲ್ಲಿ 4-5 ಜನರು/ಮಕ್ಕಳು ಅವಶೇಷಗಳ ಅಡಿಯಲ್ಲಿ ಸಿಲುಕಿಹಾಕಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಲಾಗಿತ್ತು.
ಇದನ್ನೂ ಓದಿ-#JamesTeaser: ದೊಡ್ಮನೆ ಅಭಿಮಾನಿಗಳಿಗೆ ಬಿಗ್ ಗಿಫ್ಟ್; ಬಹುನಿರೀಕ್ಷಿತ 'ಜೇಮ್ಸ್' ಚಿತ್ರದ ಟೀಸರ್ ರಿಲೀಸ್
ನರೇಲಾ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿದಾಗ, ಕುಸಿದು ಬಿದ್ದ ಕಟ್ಟಡ ರಾಜೀವ್ ರತನ್ ನಿವಾಸದ ಭಾಗವಾಗಿದ್ದು, ಸುಮಾರು 300-400 ಫ್ಲ್ಯಾಟ್‌ಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಮೂರು ಜೆಸಿಬಿಗಳು ಮತ್ತು ಒಂದು ಹೈಡ್ರಾ ಮತ್ತು ಎರಡು ಆಂಬುಲೆನ್ಸ್‌ಗಳ ಸಹಾಯದಿಂದ ಪೊಲೀಸರು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಇದನ್ನೂ ಓದಿ-10 Rupee Coin: 10 ರೂಪಾಯಿಯ ಯಾವ ನಾಣ್ಯ ಮಾನ್ಯವಾಗಿದೆ? ಗೊಂದಲ ನಿವಾರಿಸಿದ ಸರ್ಕಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.