ಚುನಾವಣೆಯಲ್ಲಿ ಮಹಿಳೆಯ ಕಡೆಗಣನೆ, ಸ್ವಂತ ಪಕ್ಷ ಬಿಜೆಪಿಗೂ ಟ್ವೀಟ್ ಮೂಲಕ ಕ್ಲಾಸ್ !

 ಶೈನಾ ಎನ್.ಸಿ ಬಿಜೆಪಿ ವಕ್ತಾರೆಯಾಗಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ.ಈಗ ಅವರು ರಾಷ್ಟ್ರೀಯ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಮಹಿಳೆಯರನ್ನು ಕಡೆಗಣಿಸುತ್ತಿರುವುದಕ್ಕೆ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Last Updated : Apr 4, 2019, 07:48 PM IST
ಚುನಾವಣೆಯಲ್ಲಿ ಮಹಿಳೆಯ ಕಡೆಗಣನೆ, ಸ್ವಂತ ಪಕ್ಷ ಬಿಜೆಪಿಗೂ ಟ್ವೀಟ್ ಮೂಲಕ ಕ್ಲಾಸ್ !  title=
file photo

ನವದೆಹಲಿ:  ಶೈನಾ ಎನ್.ಸಿ ಬಿಜೆಪಿ ವಕ್ತಾರೆಯಾಗಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ.ಈಗ ಅವರು ರಾಷ್ಟ್ರೀಯ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಮಹಿಳೆಯರನ್ನು ಕಡೆಗಣಿಸುತ್ತಿರುವುದಕ್ಕೆ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಚ್ಚರಿಯೆಂದರೆ ಶೈನಾ ಎನ್.ಸಿ ಸ್ವಂತ ಬಿಜೆಪಿ ಪಕ್ಷ ಸಹಿತ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಮಹಿಳೆಯರನ್ನು ಕಡೆಗಣಿಸಿರುವುದಕ್ಕೆ ಟ್ವೀಟ್ ಮೂಲಕ  ಕ್ಲಾಸ್ ತೆಗೆದುಕೊಂಡಿದ್ದಾರೆ. 

" ಎಲ್ಲ ರಾಜಕೀಯ ಪಕ್ಷಗಳೂ ಎಚ್ಚೆತ್ತುಕೊಳ್ಳಬೇಕಾಗಿದೆ.ಶೇ 50 ರಷ್ಟು ಮಹಿಳೆಯರು ಮತದಾರರಾಗಿದ್ದಾರೆ. ಮಮತಾ ಬ್ಯಾನರ್ಜೀ ಶೇ 41 ಹಾಗೂ ನವೀನ್ ಪಟ್ನಾಯಕ್ ಶೇ 33 ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಸೀಟುಗಳನ್ನು ಹಂಚಿರುವುದು ಬಿಟ್ಟರೆ ಉಳಿದ ಎಲ್ಲ ರಾಜಕೀಯ ಪಕ್ಷಗಳು ಕೇವಲ ಬಾಯಿ ಮಾತಿನಲ್ಲೇ ತಲ್ಲಿನವಾಗಿವೆ." ಎಂದು ಶೈನಾ ಎನ್ ಸಿ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯತೆ ನೀಡಬೇಕೆಂದು ಆಗ್ರಹಿಸಿದ್ದಾರೆ.

 

Trending News