ನವದೆಹಲಿ: BJP Whip - ಭಾರತೀಯ ಜನತಾ ಪಕ್ಷ (BJP) ತನ್ನ ಲೋಕಸಭಾ ಸಂಸದರಿಗೆ ಮಾರ್ಚ್ 22 ಸಂಸತ್ತಿನಲ್ಲಿ ಹಾಜರಿರಲು ವ್ಹಿಪ್ ಜಾರಿಗೊಳಿಸಿದೆ. ಮೂಲಸೌಕರ್ಯ ನಿಧಿಗೆ (Infrastructure Funding) ಹೊಸ ಬ್ಯಾಂಕು ರಚನೆಗೆ ಸಂಬಂಧಿಸಿದ ಮಸೂದೆಯನ್ನು ಈ ದಿನ ಸರ್ಕಾರ ತರಬಹುದು ಎಂದು ಮೂಲಗಳು ತಿಳಿಸಿವೆ. ಇದಲ್ಲದೆ, ಇತರ ಎರಡು ಮಸೂದೆಗಳನ್ನು ತರಲು ಕೂಡ ಸರ್ಕಾರ ಸಿದ್ಧತೆ ನಡೆಸುತ್ತಿದೆ.
ಎಲ್ಲ ಲೋಕಸಭಾ ಸಂಸದರು ಉಪಸ್ಥಿತರಿರಬೇಕು
ಈ ಕುರಿತು ಲೋಕಸಭಾ ಸಂಸದರಿಗೆ ವ್ಹಿಪ್ ಜಾರಿಗೊಳಿಸಿರುವ ಪಕ್ಷದ ವ್ಹಿಪ್ ಮುಖ್ಯಸ್ಥ ರಾಜೇಶ್ ಸಿಂಗ್, "ಮಾರ್ಚ್ 22 ರಂದು ಚರ್ಚೆ ಮತ್ತು ಅಂಗೀಕಾರಕ್ಕಾಗಿ ಕೆಲವು ಪ್ರಮುಖ ಶಾಸಕಾಂಗ ಮಸೂದೆಗಳನ್ನು ಲೋಕಸಭೆಗೆ ತರಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷದ ಎಲ್ಲ ಲೋಕಸಭಾ ಸಂಸದರು ಕಡ್ಡಾಯವಾಗಿ ಸದನಕ್ಕೆ ಹಾಜರಾಗಿ ಮಾರ್ಚ್ 22 ರಂದು ಸರ್ಕಾರದ ಪರವಾಗಿ ಮತ ಚಲಾಯಿಸುವಂತೆ " ಕೋರಿದ್ದಾರೆ.
ಇದನ್ನೂ ಓದಿ-ಎಷ್ಟು ತಲೆಮಾರಿನವರೆಗೆ ಜಾರಿಯಲ್ಲಿರಲಿದೆ ಕೋಟಾ?: ಸುಪ್ರೀಂ ಪ್ರಶ್ನೆ
ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು
ಇತ್ತೀಚೆಗೆ, ಅಭಿವೃದ್ಧಿ ಹಣಕಾಸು ಸಂಸ್ಥೆ (Development Finance Institution) ಗೆ ಸಂಬಂಧಿಸಿದ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ನ್ಯಾಷನಲ್ ಬ್ಯಾಂಕಿನಂತೆ ಕಾರ್ಯನಿರ್ವಹಿಸುವ ಈ ಸಂಸ್ಥೆಗಳು ದೊಡ್ಡ ಮೂಲಸೌಕರ್ಯ ಯೋಜನೆಗಳಿಗೆ ಹಣವನ್ನು ನೀಡುತ್ತವೆ. ಪ್ರಧಾನಿ ನರೇಂದ್ರ ಮೋದಿ (Prime Minister Narendra Modi)ಅವರ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ, ಮೂಲಸೌಕರ್ಯಗಳಿಗೆ ಧನಸಹಾಯ ನೀಡುವಂತಹ ಬ್ಯಾಂಕುಗಳನ್ನು ರಚಿಸುವುದಾಗಿ ಘೋಷಣೆ ಮಾಡಲಾಗಿತ್ತು. ಸರ್ಕಾರವು ಇದೀಗ ಈ ಬ್ಯಾಂಕ್ ಮಸೂದೆಯನ್ನು ಚರ್ಚೆಗೆ ತರಲಿದೆ ಎನ್ನಲಾಗಿದೆ.
ಇದನ್ನೂ ಓದಿ-ಮಾರ್ಚ್ ತಿಂಗಳಾಂತ್ಯದವರೆಗೂ ರಾಜಕೀಯ ಕೂಟಗಳನ್ನು ನಿಷೇಧಿಸಿದ ಈ ರಾಜ್ಯ
ಜನಸಂಖ್ಯೆ ನಿಯಂತ್ರಣಕ್ಕಾಗಿ ಕಾನೂನಿನ ಬೇಡಿಕೆ
ಮತ್ತೊಂದೆಡೆ, ಶನಿವಾರ ಲೋಕಸಭೆಯಲ್ಲಿ ಬಿಜೆಪಿ ಸಂಸದರು ಹೆಚ್ಚುತ್ತಿರುವ ಜನಸಂಖ್ಯೆಯನ್ನು ದೇಶದ ಮುಂದೆ ಗಂಭೀರ ಬಿಕ್ಕಟ್ಟು ಎಂದು ಉಲ್ಲೇಖಿಸಿ ಜನಸಂಖ್ಯಾ ನಿಯಂತ್ರಣ ಕಾನೂನು (Population control law) ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸಂಸತ್ತಿನ ಶೂನ್ಯಕಾಲದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಬಿಜೆಪಿ ಸಂಸದ ಸಂಜಯ್ ಸೇಠ್, ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯು ದೊಡ್ಡ ಬಿಕ್ಕಟ್ಟಾಗುತ್ತಿದೆ, ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನನ್ನು ತರಬೇಕು ಎಂದು ಹೇಳಿದ್ದಾರೆ. ಇಬ್ಬರು ಮಕ್ಕಳ ಮಾನದಂಡಗಳನ್ನು ಜಾರಿಗೆ ತರಬೇಕು ಎಂದು ಅವರು ಹೇಳಿದ್ದಾರೆ. ಅದನ್ನು ಉಲ್ಲಂಘಿಸುವವರಿಗೆ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ ಮತ್ತು ಚುನಾವಣೆಯಲ್ಲಿ ಅವರು ಸ್ಪರ್ಧಿಸಲು ಸಾಧ್ಯವಿಲ್ಲ ಎಂಬಂತಹ ಕಠಿಣ ನಿಯಮಗಳನ್ನು ಜಾರಿಗೆ ತರಬೇಕು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ-ಚಹಾಗೆ ಸಂಬಂಧಿಸಿದ ಈ General Knowledge ನಿಮಗೆ ತಿಳಿದಿದೆಯಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.