ಬಿಜೆಪಿಗೆ ಬಹುಮತ ಸಿಕ್ಕರೂ, ಮೋದಿ ಮತ್ತೆ ಪ್ರಧಾನಿಯಾಗಲ್ಲ: ಶರದ್ ಪವಾರ್

"ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು ಮತ್ತು ಸರ್ಕಾರ ರಚಿಸಲು ಮೈತ್ರಿಕೂಟದ ಬೆಂಬಲವನ್ನೂ ಪಡೆಯಬಹುದು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡನೇ ಅವಧಿಗೆ ಆ ಹುದ್ದೆ ಅಲಂಕರಿಸುವುದು ಅಸಂಭವ"- ಎನ್​ಸಿಪಿ ಮುಖಂಡ ಶರದ್ ಪವಾರ್

Last Updated : Mar 13, 2019, 11:16 AM IST
ಬಿಜೆಪಿಗೆ ಬಹುಮತ ಸಿಕ್ಕರೂ, ಮೋದಿ ಮತ್ತೆ ಪ್ರಧಾನಿಯಾಗಲ್ಲ: ಶರದ್ ಪವಾರ್ title=
File Image

ಮುಂಬೈ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ ಎಂದು ಎನ್​ಸಿಪಿ ಮುಖಂಡ ಶರದ್ ಪವಾರ್ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, "ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು ಮತ್ತು ಸರ್ಕಾರ ರಚಿಸಲು ಮೈತ್ರಿಕೂಟದ ಬೆಂಬಲವನ್ನೂ ಪಡೆಯಬಹುದು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡನೇ ಅವಧಿಗೆ ಆ ಹುದ್ದೆ ಅಲಂಕರಿಸುವುದು ಅಸಂಭವ" ಎಂದು ಹೇಳಿದರು.

ಮಾರ್ಚ್ 14 ಮತ್ತು 15 ರಂದು ದೆಹಲಿಯಲ್ಲಿ ಹಲವು ಪ್ರಾದೇಶಿಕ ಪಕ್ಷಗಳೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದ ಮಾಜಿ ಕೇಂದ್ರ ಸಚಿವ ಶರದ್ ಪವಾರ್, ಈ ಸಮಯದಲ್ಲಿ ಮಹಾಘಟಬಂಧನ್ ಬಗ್ಗೆ ಚರ್ಚಿಸಲಾಗುವುದು ಎಂದರು.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್​ಸಿಪಿ ಮೈತ್ರಿಕೂಟದಿಂದ ಕೆಲವು ಪ್ರಾದೇಶಿಕ ಪಕ್ಷಗಳು ಹೊರಬರುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪವಾರ್, "ಲೋಕಸಭಾ ಚುನಾವಣೆಯಲ್ಲಿ ಎನ್​ಸಿಪಿಗೆ ಬೆಂಬಲಿಸಿರುವುದಕ್ಕಾಗಿ ನಾನು ಪಿಡಬ್ಲ್ಯೂಪಿ ಯನ್ನು ಅಭಿನಂದಿಸುತ್ತೇನೆ. ಎನ್​ಸಿಪಿ ಸ್ವಾಭಿಮಾನಿ ಶೆಟ್ಕರಿ ಸಂಗತ್ನಾ(ಎಸ್ಎಸ್ಎಸ್) ಜೊತೆಗೂ ಸಹ ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಸಿದೆ. ಆದರೆ ರೈತಾಪಿ ವರ್ಗದಿಂದ ಕಾಂಗ್ರೆಸ್ ಬಗ್ಗೆ ಕೆಲವು ನಿರೀಕ್ಷೆಗಳಿವೆ. ಉಭಯ ಪಕ್ಷಗಳು ಈ ಬಗ್ಗೆ ನಿರ್ಧರಿಸಲಿವೆ" ಎಂದು ಹೇಳಿದರು.
 

Trending News