ನವದೆಹಲಿ:ನೈಸರ್ಗಿಕ ವಿಕೋಪಗಳನ್ನು ನಿಭಾಯಿಸಲು ಹನುಮಾನ್ ಚಾಲಿಸಾ ಮಂತ್ರ ಪಠಣೆ ಮಾಡಿ ಎಂದು ರೈತರಿಗೆ ಮಧ್ಯಪ್ರದೇಶದ ಬಿಜೆಪಿ ನಾಯಕ ರಮೇಶ್ ಸಕ್ಸೇನಾ ಸಲಹೆ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಮಧ್ಯಪ್ರದೇಶದ ಸೆಹೋರ್ನಲ್ಲಿ ಅಕಾಲಿಕ ಮಳೆ ಬಿಳುತ್ತಿದ್ದು ಇದರಿಂದ ಭಾರಿ ಪ್ರಮಾಣದ ಬೆಳೆಹಾನಿ ಸಂಭವಿಸಿದೆ. ಈ ನೈಸರ್ಗಿಕ ಅನಾಹುತಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಪ್ರತಿದಿನ ಒಂದು ಗಂಟೆಯವರೆಗೆ ಹನುಮಾನ್ ಚಾಲೀಸಾ ಮಂತ್ರವನ್ನು ಪಠಿಸಲು ರಮೇಶ್ ಸಕ್ಸೇನಾ ಮನವಿ ಮಾಡಿದ್ದಾರೆ.
ಮುಂದಿನ 4-5 ದಿನಗಳಲ್ಲಿ ಈ ನೈಸರ್ಗಿಕ ವಿಕೋಪ ಮುಂದುವರಿಯಲಿದೆ ಎಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. ಆದ್ದರಿಂದ ಇದನ್ನು ನಿಭಾಯಿಸಲು ಇರುವ ಒಂದು ಮಾರ್ಗವೆಂದರೆ ಹನುಮಾನ್ ಚಾಲಿಸಾ! ಎಂದು ಬಿಜೆಪಿ ನಾಯಕ ಸಕ್ಸೇನಾ ತಿಳಿಸಿದ್ದಾರೆ.
ಹನುಮಾನ್ ಚಾಲೀಸಾವನ್ನು ಪ್ರತಿ ಹಳ್ಳಿಯಲ್ಲಿ ಒಂದು ಗಂಟೆಯವರೆಗೆ ಪಠಣೆ ಮಾಡಿದರೆ ಈ ನೈಸರ್ಗಿಕ ವಿಕೋಪವನ್ನು ತಡೆಗಟ್ಟಬಹುದೆಂದು ಎಂದು ತಿಳಿಸಿದ್ದಾರೆ.
"ಹನುಮಾನ್ ಚಾಲಿಸಾವನ್ನು ಜನರನ್ನು ಪ್ರತಿ ಹಳ್ಳಿಯಲ್ಲಿ ಒಂದು ಗಂಟೆಯ ಕಾಲ ಓದಿದರೆ ಈ ನೈಸರ್ಗಿಕ ವಿಕೋಪವನ್ನು ನಿಭಾಯಿಸಬಹುದೆಂಬುದು ನಾನು ಹೇಳಬಲ್ಲೆ ,ಆದ್ದರಿಂದ ಮುಂದಿನ ಐದು ದಿನಗಳಲ್ಲಿ ಪ್ರತಿದಿನ ಒಂದು ಗಂಟೆ ಹನುಮಾನ್ ಚಾಲೀಸಾವನ್ನು ಪಠಣೆ ಮಾಡಬೇಕೆಂದು ನಾನು ಯುವಕರಲ್ಲಿ ಮನವಿ ಮಾಡುತ್ತೇನೆ" ಎಂದು ಮಾಜಿ ಬಿಜೆಪಿ ಶಾಸಕ ಸಕ್ಸೇನಾ ವಿನಂತಿಸಿಕೊಂಡಿದ್ದಾರೆ.