ಬಿಜೆಪಿಯು ಸಂಘಟನೆಯ ಧ್ವನಿಯಾದರೆ ಕಾಂಗ್ರೆಸ್ ಪಕ್ಷವು ಜನರ ಧ್ವನಿ -ರಾಹುಲ್ ಗಾಂಧಿ

    

Last Updated : Mar 18, 2018, 06:57 PM IST
ಬಿಜೆಪಿಯು ಸಂಘಟನೆಯ ಧ್ವನಿಯಾದರೆ ಕಾಂಗ್ರೆಸ್ ಪಕ್ಷವು ಜನರ ಧ್ವನಿ -ರಾಹುಲ್ ಗಾಂಧಿ title=

ನವದೆಹಲಿ: ಕಾಂಗ್ರೆಸ್ ಪಕ್ಷದ ಮಹಾ ಅಧಿವೇಶನದಲ್ಲಿ ಭಾಗವಹಿಸಿ ಅಂತಿಮ ದಿನದ ಭಾಷಣ ಮಾಡಿದ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಭಾಷಣದುದ್ದಕೂ ಮೋದಿ ಸರ್ಕಾರದ ವಿರುದ್ದ ಟೀಕಾ ಪ್ರಹಾರ ಮಾಡಿದರು. 

ರಾಹುಲ್ ಗಾಂಧಿ ಭಾಷಣದ ಮುಖ್ಯಾಂಶಗಳು:

  • ಕೌರವರು ಶಕ್ತಿಶಾಲಿಗಳಾಗಿದ್ದರು ಮತ್ತು ಸೊಕ್ಕಿನವರು, ಆದರೆ ಪಾಂಡವರು ವಿನಮ್ರರಾಗಿದ್ದರು ಸತ್ಯಕ್ಕಾಗಿ ಹೋರಾಡಿದರು.ಅದರಂತೆ ಬಿಜೆಪಿ ಅಧಿಕಾರಕ್ಕಾಗಿ ಹಪಾಹಪಿಸಿದರೆ, ಕಾಂಗ್ರೆಸ್ ಪಕ್ಷವು ಸತ್ಯಕ್ಕಾಗಿ ಹೋರಾಡಲಿದೆ. 
  • ಕಾಂಗ್ರೆಸ್ ಯಾವತ್ತೂ ಕೂಡಾ ಬಿಜೆಪಿಯಾಗಲು ಸಾಧ್ಯವಿಲ್ಲ.ಈ ದೇಶದ ಜನರು ಕೊಲೆಯ ಆರೋಪವನ್ನು ಹೊಂದಿರುವ ವ್ಯಕ್ತಿಯನ್ನು ಬಿಜೆಪಿಯ ಅಧ್ಯಕ್ಷನಾಗಿ  ಸ್ವೀಕರಿಸಿದ್ದಾರೆ. ಆದರೆ ಇದನ್ನು ಜನರು ಕಾಂಗ್ರೆಸ್ ನಲ್ಲಿ ನೀರಿಕ್ಷಿಸಲು ಸಾಧ್ಯವಿಲ್ಲ. ಬಿಜೆಪಿಯು ಸಂಘಟನೆಯ ಧ್ವನಿಯಾದರೆ ಕಾಂಗ್ರೆಸ್ ಪಕ್ಷವು ಜನರ ಧ್ವನಿ. 
  • ಕಾಂಗ್ರೆಸ್ ಪಕ್ಷ ಯಾವಾಗಲು ಸತ್ಯದ ಪರ ಚಿಂತಿಸುತ್ತದೆ ಏಕೆಂದರೆ ಇಡೀ ಭಾರತವು  ಕಾಂಗ್ರೆಸ್ ಪಕ್ಷದಿಂದ ಅದನ್ನು ನಿರೀಕ್ಷಿಸುತ್ತಿದೆ. ಆದರೆ ಮೋದಿ ಸರಕಾರವು ಭ್ರಷ್ಟಾಚಾರ ಮತ್ತು ಅಧಿಕಾರ ನಿಯಂತ್ರಣದ ಗುಣವನ್ನು ಹೊಂದಿದೆ.
  •  ಅವರು ಆದಿವಾಸಿಗಳಿಗೆ ಜಂಗಲ್ ನಿಮ್ಮದಲ್ಲವೆಂದು ಹೇಳುತ್ತಾರೆ, ರೈತರು ಕೆಲಸಕ್ಕೆ ಬರುವುದಿಲ್ಲವೆಂದು, ತಮಿಳರಿಗೆ ಭಾಷೆಯನ್ನು ಬದಲಿಸಿ ಎಂದು.ಅದೇ ರೀತಿಯಾಗಿ ಈಶಾನ್ಯ ರಾಜ್ಯದವರಿಗೆ ನೀವು ತಿನ್ನುವುದು ಇಷ್ಟವಿಲ್ಲವೆಂದು, ಮಹಿಳೆಯರಿಗೆ ಸರಿಯಾಗಿ ಬಟ್ಟೆಯನ್ನು ಧರಿಸಿ ಎಂದು ಆದೇಶ ನೀಡುತ್ತಾರೆ.
  • ಅದೇ ರೀತಿಯಾಗಿ ಪ್ರಧಾನಮಂತ್ರಿಗಳ ಹೆಸರಿನವನೇ ಆದ ನೀರವ್ ಮೋದಿ ಭಾರತದ ಅತಿ ದೊಡ್ಡ ಲೂಟಿಗೆ ಸಾಕ್ಷಿಯಾಗಿದ್ದಾನೆ.ಇದು ನಿಜಕ್ಕೂ ಏನನ್ನು ಪ್ರತಿನಿಧಿಸುತ್ತದೆ, ಇದು ಭಾರತದ ಅತಿ ದೊಡ ಕ್ರೋನಿ ಬಂಡವಾಳಶಾಹಿ ಮತ್ತು ಪ್ರಧಾನಿ ಮೋದಿ ನಡುವಿನ ರಹಸ್ಯ ಒಪ್ಪಂದವನ್ನು ಸೂಚಿಸುತ್ತದೆ. 
  • ಒಬ್ಬ ಮೋದಿ ಇನ್ನೊಬ್ಬ ಮೋದಿಗೆ 30 ಸಾವಿರ ಕೋಟಿ ರೂಗಳನ್ನು ನೀಡುತ್ತಾನೆ ಅದಕ್ಕೆ ಪ್ರತಿಯಾಗಿ ಮೋದಿ ಚುನಾವಣೆಯಲ್ಲಿ ಮೋದಿಯನ್ನು ಮಾರ್ಕೆಟಿಂಗ್ ಮಾಡಲು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಹಣವನ್ನು ನೀಡುತ್ತಾನೆ
  • ನಮ್ಮ ಸಂಘಟನೆ ಬದಲಾಗಬೇಕಾಗಿದೆ.ಇಲ್ಲಿ ಹಿಂದೆ ಕುಳಿತಿರುವ ಕಾಂಗ್ರೆಸ್ ಪ್ರತಿನಿದಿಗಳಿಗೆ ಬದಲಾವಣೆ ಮಾಡುವ ಶಕ್ತಿ ಇದೆ,ಆದರೆ ನಮ್ಮ ಕಾರ್ಯಕರ್ತರ ಮತ್ತು ನಾಯಕರ ನಡುವೆ ಅಡ್ಡಗೋಡೆ ಇದೆ, ಆದ್ದರಿಂದ ನನ್ನ ಮೊದಲ ಕೆಲಸ  ಅಡ್ಡಗೋಡೆಯನ್ನು ಒಡೆಯುವುದು.
  • ನಾನು ಗುಜರಾತ್ ಚುನಾವಣೆಯಲ್ಲಿ ಒಂದು ಸಣ್ಣ ಸಂಗತಿಯನ್ನು ನೋಡಿದೆ.ಆದೇನೆಂದರೆ ನಾವು ಕಾಂಗ್ರೆಸ್ ಕಾರ್ಯಕರ್ತರಿಗೆ ಟಿಕೆಟ್ ನೀಡಿದೆವು ಆಗ ಮೋದಿಯವರು ಸೀ ಪ್ಲೇನ್ ನಲ್ಲಿ ಸಾಗಿದರು. ಒಂದುವೇಳೆ ನಾವು ಕಾಂಗ್ರೆಸ್ ಕಾರ್ಯಕರ್ತನಿಗೆ ಟಿಕೆಟ್ ನೀಡಿದರೆ, ಸೀ ಪ್ಲೇನ್ ಒಂದೆಡೆ ಇರಲಿ, ಆಗ ನೀವು ಮೋದಿಯವರನ್ನು ಸಬ್ ಮರೀನ್ ನಲ್ಲಿ ಸಾಗುವುದನ್ನು ನೋಡುತ್ತಿರಿ.
  • ಬಿಜೆಪಿಯು ಭೀತಿಯನ್ನು ಸೃಷ್ಟಿಸಿದೆ,ಮೊದಲಬಾರಿಗೆ ನಾವು ನ್ಯಾಯಮೂರ್ತಿಗಳು ಸಾರ್ವಜನಿಕರ ಬಳಿ ನ್ಯಾಯಕ್ಕಾಗಿ ಅಂಗಲಾಚುತ್ತಿರುವುದನ್ನು ನೋಡುತ್ತಿದ್ದೇವೆ. 

 

Trending News