ಹೊಸ ವರ್ಷದಲ್ಲಿ 10 ಗ್ರಾಂ ಚಿನ್ನ ಫ್ರೀ; ಯಾರಿಗೆ ಒಲಿಯಲಿದೆ ಅದೃಷ್ಟ!

ಸರ್ಕಾರ ಸರಾಸರಿ 10 ಗ್ರಾಂ ಚಿನ್ನದ ಬೆಲೆಯನ್ನು 30000 ರೂ. ಎಂದು ನಿಗದಿ ಪಡಿಸಿದೆ. 

Last Updated : Dec 31, 2019, 01:37 PM IST
ಹೊಸ ವರ್ಷದಲ್ಲಿ 10 ಗ್ರಾಂ ಚಿನ್ನ ಫ್ರೀ; ಯಾರಿಗೆ ಒಲಿಯಲಿದೆ ಅದೃಷ್ಟ! title=

2020 ರ ಜನವರಿ 1 ರಿಂದ ಅಸ್ಸಾಂ ಬಾಲಕಿಯರಿಗೆ 10 ಗ್ರಾಂ ಚಿನ್ನ ಉಚಿತವಾಗಿ ಸಿಗುತ್ತದೆ. ಈ ಯೋಜನೆಯನ್ನು ಹೊಸ ವರ್ಷದಲ್ಲಿ ಪ್ರಾರಂಭಿಸುವುದಾಗಿ ಅಸ್ಸಾಂ ಸರ್ಕಾರ ಘೋಷಿಸಿತ್ತು. ಈ ಯೋಜನೆಯ ಹೆಸರು 'ಅರುಂಧತಿ ಚಿನ್ನದ ಯೋಜನೆ'.

ಚಿನ್ನದ ಉಡುಗೊರೆ:
ಅರುಂಧತಿ ಚಿನ್ನದ ಯೋಜನೆ: ಇದರ ಅಡಿಯಲ್ಲಿ ಮದುಮಗಳು ಮದುವೆಯಲ್ಲಿ ಉಡುಗೊರೆಯಾಗಿ 10 ಗ್ರಾಂ ಚಿನ್ನವನ್ನು ಪಡೆಯುತ್ತಾರೆ. ಈಗ ಈ ಯೋಜನೆಯನ್ನು 2020 ರ ಜನವರಿ 1 ರಿಂದ ರಾಜ್ಯದಲ್ಲಿ ಜಾರಿಗೆ ತರಲಾಗುವುದು. ಬಿಜೆಪಿ ಸರ್ಕಾರದ ಈ ಯೋಜನೆಯ ಲಾಭ ಪಡೆಯಲು ಕೆಲವು ಷರತ್ತುಗಳಿವೆ.

ಷರತ್ತುಗಳೇನು?
ವಯಸ್ಕ ಹುಡುಗಿ ಅಂದರೆ ಮದುವೆಯ ಸಮಯದಲ್ಲಿ, ಹುಡುಗಿಗೆ 18 ವರ್ಷ ವಯಸ್ಸಾಗಿರಬೇಕು. ಹುಡುಗನ ವಯಸ್ಸು 21 ವರ್ಷ ಆಗಿರಬೇಕು. ಹುಡುಗಿ ಕನಿಷ್ಠ 10ನೇ ತರಗತಿವರೆಗೆ ಅಧ್ಯಯನ ಮಾಡಿರಬೇಕು. ವಿಶೇಷ ಮದುವೆ ಕಾಯ್ದೆ 1954 ರ ಅಡಿಯಲ್ಲಿ ವಧುವಿನ ವಿವಾಹದ ನೋಂದಣಿ ಅಗತ್ಯ.

ಕುಟುಂಬದ ಆದಾಯ 5 ಲಕ್ಷ:
ವಧುವಿನ ಕುಟುಂಬದ ವಾರ್ಷಿಕ ಆದಾಯವು 5 ಲಕ್ಷ ರೂ.ಗಿಂತ ಕಡಿಮೆಯಿರಬೇಕು ಎಂದು ಸಹ ಹೇಳಲಾಗಿದೆ. 
ನೆನಪಿಡಿ: ಈ ಯೋಜನೆಯ ಲಾಭವು ಹುಡುಗಿಯ ಮೊದಲ ಮದುವೆಯಲ್ಲಿ ಮಾತ್ರ ಲಭ್ಯವಿರುತ್ತದೆ.

ಚಿನ್ನ ಪಡೆಯುವುದು ಹೇಗೆ?
ರಾಜ್ಯ ಸರ್ಕಾರದ ಈ ಯೋಜನೆಯಡಿ ಹೆಣ್ಣುಮಕ್ಕಳಿಗೆ ಭೌತಿಕ ರೂಪದಲ್ಲಿ ಚಿನ್ನ ಸಿಗುವುದಿಲ್ಲ. ಮದುವೆ ನೋಂದಣಿ ಪ್ರಮಾಣಪತ್ರ(Marriage Registration Certificate) ಮತ್ತು ಅದರ ಪರಿಶೀಲನೆಯ ನಂತರ ಸರ್ಕಾರವು ವಧುವಿನ ಬ್ಯಾಂಕ್ ಖಾತೆಗೆ 30,000 ರೂ. ಗಳನ್ನು ಜಮಾ ಮಾಡಲಿದೆ.

ಮೊತ್ತವನ್ನು ಹೇಗೆ ನಿಗದಿಪಡಿಸಲಾಗಿದೆ:
ಸರ್ಕಾರ ಸರಾಸರಿ 10 ಗ್ರಾಂ ಚಿನ್ನದ ಬೆಲೆಯನ್ನು 30000 ರೂ. ಎಂದು ನಿಗದಿ ಪಡಿಸಿದೆ. ಇಡೀ ವರ್ಷದ ಚಿನ್ನದ ಸರಾಸರಿ ಬೆಲೆಯನ್ನು ಅಂದಾಜು ಮಾಡಿದ ನಂತರ ಇದನ್ನು ನಿಗದಿಪಡಿಸಲಾಗಿದೆ. ಖಾತೆಯಲ್ಲಿ ಹಣವನ್ನು ಪಡೆದ ನಂತರ, ಹುಡುಗಿ ಚಿನ್ನಾಭರಣ ಖರೀದಿಗೆ ರಶೀದಿಯನ್ನು ತೋರಿಸಬೇಕು.
 

Trending News