Bird Flu : ಕೆಂಪು ಕೋಟೆಯಲ್ಲಿ ಪಕ್ಷಿ ಜ್ವರದಿಂದಾಗಿ ಕಾಗೆಗಳ ಮಾರಣಹೋಮ

Red Fort News : ಕರೋನಾ ಬಿಕ್ಕಟ್ಟಿನ ಮಧ್ಯೆ ದೇಶದ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪಕ್ಷಿ ಜ್ವರ ಬಡಿದಿದೆ. ಪಕ್ಷಿ ಜ್ವರದಿಂದಾಗಿ ಅನೇಕ ಪ್ರಾಣಿಸಂಗ್ರಹಾಲಯಗಳನ್ನು ಸಹ ಮುಚ್ಚಲಾಗಿದೆ.

Written by - Yashaswini V | Last Updated : Jan 20, 2021, 01:25 PM IST
  • ಕೆಲವು ದಿನಗಳ ಹಿಂದೆ ಕೆಂಪು ಕೋಟೆ (Red Fort)ಯಲ್ಲಿ ಸುಮಾರು 15 ಕಾಗೆಗಳು ಶವವಾಗಿ ಪತ್ತೆಯಾಗಿವೆ
  • ಪಕ್ಷಿ ಮಾದರಿಗಳನ್ನು ಪರೀಕ್ಷೆಗೆ ಜಲಂಧರ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ
  • ಮುನ್ನೆಚ್ಚರಿಕೆಯಾಗಿ ಜನವರಿ 26 ರವರೆಗೆ ಪ್ರವಾಸಿಗರಿಗಾಗಿ ಕೆಂಪು ಕೋಟೆಯನ್ನು ಮುಚ್ಚಲಾಗಿದೆ
Bird Flu : ಕೆಂಪು ಕೋಟೆಯಲ್ಲಿ ಪಕ್ಷಿ ಜ್ವರದಿಂದಾಗಿ ಕಾಗೆಗಳ ಮಾರಣಹೋಮ title=
Red Fort will remain closed for visitors till 26 January

ನವದೆಹಲಿ : ಕರೋನಾ ಬಿಕ್ಕಟ್ಟಿನ ಮಧ್ಯೆ ದೇಶದ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪಕ್ಷಿ ಜ್ವರ ಬಡಿದಿದೆ. ಪಕ್ಷಿ ಜ್ವರದಿಂದಾಗಿ ಅನೇಕ ಪ್ರಾಣಿಸಂಗ್ರಹಾಲಯಗಳನ್ನು ಸಹ ಮುಚ್ಚಲಾಗಿದೆ. ದೇಶದ ರಾಜಧಾನಿ ದೆಹಲಿ ಇದಕ್ಕೆ ಹೊರತಾಗಿಲ್ಲ. ಕೆಂಪು ಕೋಟೆಯಲ್ಲಿ ಸತ್ತ ಕಾಗೆಗಳು ಪಕ್ಷಿ ಜ್ವರ (Bird Flu)ದಿಂದ ಬಳಲುತ್ತಿದ್ದವು ಎಂದು ದೃಢಪಟ್ಟ ನಂತರ ಸ್ಮಾರಕ ಕಟ್ಟಡಕ್ಕೆ ಜನರ ಪ್ರವೇಶವನ್ನು ನಿಷೇಧಿಸಲಾಗಿದೆ.

ಕೆಲವು ದಿನಗಳ ಹಿಂದೆ ಕೆಂಪು ಕೋಟೆ (Red Fort)ಯಲ್ಲಿ ಸುಮಾರು 15 ಕಾಗೆಗಳು ಶವವಾಗಿ ಪತ್ತೆಯಾಗಿವೆ ಎಂದು ದೆಹಲಿ ಸರ್ಕಾರದ ಪಶುಸಂಗೋಪನಾ ವಿಭಾಗದ ನಿರ್ದೇಶಕ ರಾಕೇಶ್ ಸಿಂಗ್ ಹೇಳಿದ್ದಾರೆ. ಪಕ್ಷಿ ಮಾದರಿಗಳನ್ನು ಪರೀಕ್ಷೆಗೆ ಜಲಂಧರ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಜನವರಿ 26 ರವರೆಗೆ ಪ್ರವಾಸಿಗರಿಗಾಗಿ ಕೆಂಪು ಕೋಟೆಯನ್ನು ಮುಚ್ಚಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ - Bird Flu: ಬರ್ಡ್ ಫ್ಲೂ ಲಕ್ಷಣಗಳಿವು !

ಅದೇ ಸಮಯದಲ್ಲಿ ಶನಿವಾರ ದೆಹಲಿ ಮೃಗಾಲಯದ (Zoo) ಸತ್ತ ಗೂಬೆಯ ಮಾದರಿಗಳನ್ನು ಪರೀಕ್ಷಿಸಿದಾಗ ಇದು ಪಕ್ಷಿ ಜ್ವರದಿಂದ ಬಳಲುತ್ತಿದೆ ಎಂದು ದೃಢಪಟ್ಟಿದೆ. ಪಕ್ಷಿ ಜ್ವರ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರವು (Delhi Government) ನಗರದ ಹೊರಗಿನಿಂದ ಸಂಸ್ಕರಿಸಿದ ಮತ್ತು ಪ್ಯಾಕ್ ಮಾಡಿದ ಕೋಳಿ ಮಾರಾಟವನ್ನು ನಿಷೇಧಿಸಿತ್ತು ಮತ್ತು ಪೂರ್ವ ದೆಹಲಿಯ ಗಾಜಿಪುರ ಮುರ್ಗಾ ಮಂಡಿಯನ್ನು ಮುಚ್ಚಲು ಆದೇಶಿಸಿತ್ತು.

ಇದನ್ನೂ ಓದಿ - ASTRO : ಶನಿದೇವರ ವಾಹನ ಕಾಗೆ ಸತ್ತು ಬೀಳುತ್ತಿರುವುದು ಮಹಾ ಗಂಡಾಂತರದ ಮುನ್ಸೂಚನೆಯೇ..?

ಆದರೆ ಗುರುವಾರ, ಗಾಜಿಪುರದಿಂದ ತೆಗೆದ ಎಲ್ಲಾ 100 ಮಾದರಿಗಳ ಪರೀಕ್ಷಾ ವರದಿ ಋಣಾತ್ಮಕವಾಗಿ ಬಂದ ನಂತರ ಮಾರುಕಟ್ಟೆಯನ್ನು ಮತ್ತೆ ತೆರೆಯಲಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News