Biparjoy Update: ಭಾರಿ ವಿನಾಶ ಸೃಷ್ಟಿಸಲಿದೆ ಬಿಪರ್ ಜಾಯ್, ಗಂಟೆಗೆ 150 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ!

Biparjoy Latest Update: ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಚಂಡಮಾರುತ 'ಬಿಪರ್ ಜಾಯ್' ಜೂನ್ 15 ರ ಸಂಜೆ "ಅತ್ಯಂತ ತೀವ್ರವಾದ ಚಂಡಮಾರುತ" ವಾಗಿ ಜಖೌ ಬಂದರಿನ ಬಳಿ ಸೌರಾಷ್ಟ್ರ ಮತ್ತು ಕಛ್ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ. ಈ ಸಮಯದಲ್ಲಿ, ಗಾಳಿಯು ಗಂಟೆಗೆ 125-135 ಕಿಲೋಮೀಟರ್‌ನಿಂದ ಗರಿಷ್ಠ 150 ಕಿಮೀ ವೇಗದಲ್ಲಿ ಬೀಸುವ ನಿರೀಕ್ಷೆಯಿದೆ ಎನ್ನಲಾಗಿದೆ.  

Written by - Nitin Tabib | Last Updated : Jun 13, 2023, 07:09 PM IST
  • ಇದರ ಪರಿಣಾಮದಿಂದಾಗಿ, ಜೋಧ್‌ಪುರ, ಉದಯಪುರ ವಿಭಾಗದಲ್ಲಿ ಜೂನ್ 15 ಮತ್ತು 16 ರಂದು ಪ್ರಬಲ ಗುಡುಗು ಮತ್ತು
  • ಮಳೆಯ ವ್ಯವಸ್ಥೆಯು ರೂಪುಗೊಳ್ಳುತ್ತದೆ. ಜೂನ್ 17ರಂದು ಕೂಡ ಚಂಡಮಾರುತದ ಪ್ರಭಾವ ರಾಜ್ಯದಲ್ಲಿ ಇರಲಿದೆ.
  • ಜೋಧ್‌ಪುರ, ಉದಯಪುರ, ಅಜ್ಮೀರ್ ವಿಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Biparjoy Update: ಭಾರಿ ವಿನಾಶ ಸೃಷ್ಟಿಸಲಿದೆ ಬಿಪರ್ ಜಾಯ್, ಗಂಟೆಗೆ 150 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ! title=

Biparjoy Latest Update: ಅರಬ್ಬಿ ಸಮುದ್ರದಲ್ಲಿ ಎದ್ದಿರುವ ಬಿಪರ್‌ಜಾಯ್ ಚಂಡಮಾರುತ ಜಲ, ಭೂಮಿ ಮತ್ತು ಆಕಾಶದ ಮೂರರ ಮೇಲೂ ಅಪಾಯ ಪರಿಣಾಮ ಉಂಟುಮಾಡುವ ಸಾಧ್ಯತೆ ವರ್ತಿಸಲಾಗುತ್ತಿದೆ. ಚಂಡಮಾರುತದ ಹಿನ್ನೆಲೆಯಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅಲರ್ಟ್ ಮೋಡ್‌ನಲ್ಲಿ ಇರುವಂತೆ ಕೇಂದ್ರ ಹವಾಮಾನ ಕೇಂದ್ರವು ರಾಜ್ಯಗಳ ಹವಾಮಾನ ಕೇಂದ್ರಗಳಿಗೆ ಸೂಚನೆಗಳನ್ನು ನೀಡಿದೆ. ಇದರೊಂದಿಗೆ ಕರಾವಳಿ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇನ್ನೊಂದೆಡೆ SDRF, NDRF ಮತ್ತು ಸೇನೆಯು ತಮ್ಮ ಸ್ಥಾನವನ್ನು ತೆಗೆದುಕೊಂಡಿವೆ. ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸ್ಪಷ್ಟವಾಗಿ ನಿರ್ಬಂಧಿಸಲಾಗಿದೆ ಮತ್ತು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ.

ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಬಿಪರ್ ಜಾಯ್ ಪರಿಣಾಮ ಕಂಡುಬರುತ್ತಿದೆ. ಗುಜರಾತ್ ನಲ್ಲಿ ಹವಾಮಾನ ಸಂಪೂರ್ಣ ಬದಲಾಗಿದೆ. ಸೌರಾಷ್ಟ್ರ ಮತ್ತು ಕಛ್ ಪ್ರದೇಶಗಳಲ್ಲಿ ಬಲವಾದ ಗಾಳಿಯೊಂದಿಗೆ ಮಳೆಯ ಮುಂದುವರೆದಿದೆ. ಸದ್ಯ ರಾಜ್ಯದಲ್ಲಿ ಗರಿಷ್ಠ ತಾಪಮಾನ 43 ಡಿಗ್ರಿ ದಾಟಿದೆ. ಸೈಕ್ಲೋನಿಕ್ ಚಂಡಮಾರುತದ ಕಾರಣ, ಮುಂಬರುವ ದಿನಗಳಲ್ಲಿ ದಿನಗಳಲ್ಲಿ ಪರಿಹಾರ ಸಿಗುವ ಸಾಧ್ಯತೆಗಳಿವೆ.

ಬಿಪರ್‌ಜೋಯ್ ಚಂಡಮಾರುತದ ಪರಿಣಾಮ ರಾಜಸ್ಥಾನದಲ್ಲೂ ಕಂಡುಬರಲಿದೆ. ರಾಜ್ಯದ ಉದಯಪುರ ಮತ್ತು ಜೋಧ್‌ಪುರ, ಬಿಕಾನೇರ್ ವಿಭಾಗಗಳಲ್ಲಿ ಇದು ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಇದೀಗ ಈಸ್ಟ್ ಸೆಂಟ್ರಲ್ ಅರಬ್ಬೀ ಸಮುದ್ರದ ಕೊಲ್ಲಿಯಲ್ಲಿ ಚಂಡಮಾರುತ ಉಂಟಾಗಿದ್ದು, ನಿಧಾನವಾಗಿ ಅದು ಉತ್ತರದ ಕಡೆಗೆ ಚಲಿಸುತ್ತಿದೆ. ಜೂನ್ 15 ರಂದು ಗುಜರಾತ್‌ನ ಸೌರಾಷ್ಟ್ರ-ಕಛ್ ಗೆ ಚಂಡಮಾರುತ ಅಪ್ಪಳಿಸಲಿದೆ. ಇದು ತೀವ್ರ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ವರ್ತಿಸಿದೆ.

ಇದರ ಪರಿಣಾಮದಿಂದಾಗಿ, ಜೋಧ್‌ಪುರ, ಉದಯಪುರ ವಿಭಾಗದಲ್ಲಿ ಜೂನ್ 15 ಮತ್ತು 16 ರಂದು ಪ್ರಬಲ ಗುಡುಗು ಮತ್ತು ಮಳೆಯ ವ್ಯವಸ್ಥೆಯು ರೂಪುಗೊಳ್ಳುತ್ತದೆ. ಜೂನ್ 17ರಂದು ಕೂಡ ಚಂಡಮಾರುತದ ಪ್ರಭಾವ ರಾಜ್ಯದಲ್ಲಿ ಇರಲಿದೆ. ಜೋಧ್‌ಪುರ, ಉದಯಪುರ, ಅಜ್ಮೀರ್ ವಿಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಚಂಡಮಾರುತ ಬಿಪರ್ ಜಾಯ್ ಜೂನ್ 15 ರ ಸಂಜೆ "ಅತ್ಯಂತ ತೀವ್ರವಾದ ಚಂಡಮಾರುತ" ರೂಪ ಪಡೆದುಕೊಂಡು ಜಖೌ ಬಂದರಿನ ಬಳಿ ಸೌರಾಷ್ಟ್ರ ಮತ್ತು ಕಛ್ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ. ಈ ಸಮಯದಲ್ಲಿ, ಗಾಳಿಯು ಗಂಟೆಗೆ 125-135 ಕಿಲೋಮೀಟರ್‌ನಿಂದ ಗರಿಷ್ಠ 150 ಕಿಮೀ ವೇಗದಲ್ಲಿ ಬೀಸುವ ನಿರೀಕ್ಷೆಯಿದೆ.

ಮಾಹಿತಿ ಪ್ರಕಾರ...
>> ಸೈಕ್ಲೋನಿಕ್ ಚಂಡಮಾರುತ ಬಿಪರ್ ಜಾಯ್ ಹಿನ್ನೆಲೆ, ಇದುವರೆಗೆ ಸಾಕಷ್ಟು ಸಂಖ್ಯೆಯಲ್ಲಿ ಜನರನ್ನು ಸ್ಥಳಾಂತರಿಸಲಾಗಿದೆ.
>> ಜುನಾಗಢ್, ಕಛ್, ಜಾಮ್‌ನಗರ, ಪೋರಬಂದರ್, ದ್ವಾರಕಾ, ಸೋಮನಾಥ್, ಮೋರ್ಬಿ ಮತ್ತು ರಾಜ್‌ಕೋಟ್‌ನಲ್ಲಿ ಜನರನ್ನು ಸ್ಥಳಾಂತರಿಸಲಾಗಿದೆ.
>> ಚಂಡಮಾರುತದಿಂದ ಹಾನಿ ಉಂಟಾಗುವ ಸಾಧ್ಯತೆಯ ಹಿನ್ನೆಲೆ 8 ಜಿಲ್ಲೆಗಳಲ್ಲಿ ಎನ್‌ಡಿಆರ್‌ಎಫ್‌ನ 17 ತುಕ್ಕಡಿಗಳನ್ನು  ಮತ್ತು ಎಸ್‌ಡಿಆರ್‌ಎಫ್‌ನ 12 ತುಕ್ಕಡಿಗಳನ್ನು ನಿಯೋಜಿಸಲಾಗಿದೆ.
>> ಕಛ್ ನಲ್ಲಿ ಎನ್‌ಡಿಆರ್‌ಎಫ್‌ನ ನಾಲ್ಕು ತಂಡಗಳು, ದೇವಭೂಮಿ ದ್ವಾರಕಾದಲ್ಲಿ ಮೂರು, ರಾಜ್‌ಕೋಟ್‌ನಲ್ಲಿ ಮೂರು, ಜಾಮ್‌ನಗರದಲ್ಲಿ ಎರಡು, ಜುನಾಗಢ್ ಪೋರ್ಬಂದರ್, ಗಿರ್ಸೋಮನಾಥ್, ಮೊರ್ಬಿ ಮತ್ತು ವಲ್ಸಾದ್‌ನಲ್ಲಿ ತಲಾ ಒಂದು ತಂಡಗಳನ್ನು ನಿಯೋಜಿಸಲಾಗಿದೆ.
>> ಬರೋಡಾದಲ್ಲಿ ಮೂರು ಮತ್ತು ಗಾಂಧಿನಗರದಲ್ಲಿ ಒಂದು ತಂಡವನ್ನು ಸ್ಟ್ಯಾಂಡ್‌ಬೈ ಇರಿಸಲಾಗಿದೆ.
>> ಎಸ್‌ಡಿಆರ್‌ಎಫ್‌ನ ತಲಾ ಎರಡು ತಂಡಗಳನ್ನು ಕಛ್, ಜಾಮ್‌ನಗರ ಮತ್ತು ದ್ವಾರಕಾದಲ್ಲಿ, ಜುನಾಗಢ್, ಪೋರಬಂದರ್, ಗಿರ್ ಸೋಮನಾಥ್, ಮೊರ್ಬಿ, ಪಟಾನ್ ಮತ್ತು ಬನಸ್ಕಾಂತದಲ್ಲಿ ತಲಾ ಒಂದು ತಂಡವನ್ನು ನಿಯೋಜಿಸಲಾಗಿದೆ.
>> ಸೂರತ್‌ನಲ್ಲಿ ತಂಡವನ್ನು ಮೀಸಲು ಇಡಲಾಗಿದೆ.

ಇದನ್ನೂ ಓದಿ-Jammu-Kashmir: ಕುಪವಾಡಾದ ಗಡಿ ನಿಯಂತ್ರಣ ರೇಖೆ ಬಳಿ 2 ಉಗ್ರರನ್ನು ಮಟ್ಟಹಾಕಿದ ಭದ್ರತಾ ಪಡೆ, ಮುಂದುವರೆದ ಕಾರ್ಯಾಚರಣೆ

ಬಿಪರ್‌ಜೋಯ್ ಚಂಡಮಾರುತದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಈ ಸಭೆಯಲ್ಲಿ ಗುಜರಾತ್ ಮುಖ್ಯಮಂತ್ರಿ, ಗೃಹ ಖಾತೆ ರಾಜ್ಯ ಸಚಿವರು ಮತ್ತು 8 ಜಿಲ್ಲೆಗಳ ಆಡಳಿತ ಅಧಿಕಾರಿಗಳು ಆನ್‌ಲೈನ್ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯ ಮೂಲಕ ಚಂಡಮಾರುತದ ಸಿದ್ಧತೆಗಳನ್ನು ಗೃಹ ಸಚಿವರು ಪರಿಶೀಲಿಸಿದ್ದಾರೆ. ಬಿಪರ್‌ಜಾಯ್ ಚಂಡಮಾರುತವನ್ನು ಎದುರಿಸಲು ವಿಪತ್ತು ನಿರ್ವಹಣೆಗಾಗಿ 8000 ಕೋಟಿ ರೂಪಾಯಿ ಮೌಲ್ಯದ 3 ದೊಡ್ಡ ಯೋಜನೆಗಳನ್ನು ಅವರು ಈ ಸಂದರ್ಭದಲ್ಲಿ ಘೋಷಿಸಿದ್ದಾರೆ.

ಇದನ್ನೂ ಓದಿ-PM Modi: 'ಕೆಲ ರಾಜಕೀಯ ಪಕ್ಷಗಳು ನೌಕರಿ ಕೊಡುವ ನೆಪದಲ್ಲಿ 'ರೇಟ್ ಕಾರ್ಡ್' ಬಳಸಿ ಯುವಕರನ್ನು ಲೂಟಿ ಮಾಡಿವೆ'

ಬಿಪರ್‌ಜಾಯ್‌ನಿಂದಾಗಿ ಪಶ್ಚಿಮ ರೈಲ್ವೆಯ 67 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಅಲ್ಲದೆ, ಸೌರಾಷ್ಟ್ರದ ಓಖಾ, ಪೋರಬಂದರ್ ಮತ್ತು ಜಾಮ್‌ನಗರದಿಂದ ಓಡುವ 25 ರೈಲುಗಳು ಇದೀಗ ರಾಜ್‌ಕೋಟ್, ಸುರೇಂದ್ರನಗರ ಮತ್ತು ಅಹಮದಾಬಾದ್‌ನಿಂದ ಚಲಿಸಲಿವೆ. ಕಛ್ ನಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಅಷ್ಟೇ ಅಲ್ಲ ಮೂರು ದಿನಗಳ ಕಾಲ ಎಲ್ಲಾ ಶಾಲಾ-ಕಾಲೇಜುಗಳನ್ನು ಮುಚ್ಚಲು ನಿರ್ಧರಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News