ಮುಸ್ಲಿಂ ಸಮಾವೇಶದಲ್ಲಿ ಟೋಪಿ ಧರಿಸಲು ಒಲ್ಲೆ ಎಂದ ಜೆಡಿಯು ಸಚಿವ!

ಇಂಧನ ಸಚಿವ ಬಿಜೇಂದ್ರ ಪ್ರಸಾದ್ ಯಾದವ್ ಮುಸಲ್ಮಾನರ ಟೋಪಿ ಧರಿಸಲು ನಿರಾಕರಿಸಿದ್ದರು. ಇದೀಗ ಈ ವೀಡಿಯೋ ಸಾಕಷ್ಟು ವಿವಾದಕ್ಕೀಡಾಗಿದೆ. 

Last Updated : Oct 1, 2018, 05:52 PM IST
ಮುಸ್ಲಿಂ ಸಮಾವೇಶದಲ್ಲಿ ಟೋಪಿ ಧರಿಸಲು ಒಲ್ಲೆ ಎಂದ ಜೆಡಿಯು ಸಚಿವ! title=

ಪಾಟ್ನಾ: ಬಿಹಾರದ ಕಟಿಹಾರ್ ನಲ್ಲಿ ಭಾನುವಾರ ನಡೆದ ಮುಸ್ಲಿಮರ ಸಮಾವೇಶವೊಂದರಲ್ಲಿ ಬಿಹಾರದ ಇಂಧನ ಸಚಿವ ಬಿಜೇಂದ್ರ ಪ್ರಸಾದ್ ಯಾದವ್ ಮುಸಲ್ಮಾನರ ಟೋಪಿ ಧರಿಸಲು ನಿರಾಕರಿಸಿದ್ದರು. ಇದೀಗ ಈ ವೀಡಿಯೋ ಸಾಕಷ್ಟು ವಿವಾದಕ್ಕೀಡಾಗಿದೆ. 

ಜೆಡಿಯು ಪಕ್ಷವು ಭಾನುವಾರ ಕಟಿಹಾರ್ ನಲ್ಲಿ ಆಯೋಜಿಸಿದ್ದ ತಲೀಮಿ ಬೆದಾರಿ ಸಮಾವೇಶದ ಮುಖ್ಯ ಅತಿಥಿಯಾಗಿ ಸಚಿವ ಬಿಜೇಂದ್ರ ಪ್ರಸಾದ್ ಯಾದವ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಸ್ವಾಗತಿಸುವ ಸಂದರ್ಭದಲ್ಲಿ ಆಯೋಜಕರು ಶಾಲು ಹೊದಿಸಿ ಟೋಪಿ ಹಾಕಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಸಚಿವ ಯಾದವ್ ಅವರು, ಟೋಪಿಯನ್ನು ಹಾಕಿಸಿಕೊಳ್ಳಲು ನಿರಾಕರಿಸಿ ಕೈಗೆ ಈಸಿಕೊಂಡು ಪಕ್ಕದಲ್ಲಿದ್ದವರಿಗೆ ನೀಡಿದ್ದರು. ಇದೀಗ ಆ ವೀಡಿಯೋ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದು, ಜನತೆ ಸಚಿವರ ನಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಹೆಚ್ಎಎಂ(ಎಸ್) ವಕ್ತಾರ ಧನೀಶ್ ರಿಜ್ವಾನ್, ಇತ್ತೀಚೆಗೆ ಜೆಡಿ(ಯು) ಆರ್ಎಸ್ಎಸ್ ಸಿದ್ಧಾಂತದೆಡೆಗೆ ವಾಲಿದೆ. ಎಲ್ಲರಿಗೂ ಟೋಪಿಯನ್ನು ಧರಿಸಿ, ತಿಲಕ ಇಡಿ ಎಂದು ನಿತೀಶ್ ಕುಮಾರ್ ಹೇಳುತ್ತಿದ್ದರು. ಆದರೆ ಈಗ ತಮ್ಮ ಪಕ್ಷದ ಸಚಿವರೇ ಟೋಪಿ ಧರಿಸಲು ನಿರಾಕರಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ಉತ್ತರಿಸಲಿ ಎಂದು ಹೇಳಿದ್ದಾರೆ.

Trending News