ಬಿಹಾರ ಚುನಾವಣೆ: ಆರ್‌ಜೆಡಿ ನಾಯಕ ತೇಜಶ್ವಿ ಯಾದವ್ ಮಹಾಮೈತ್ರಿ ಒಕ್ಕೂಟದ ಸಿಎಂ ಅಭ್ಯರ್ಥಿ

ಮುಂಬರುವ ಬಿಹಾರ ಚುನಾವಣೆಯಲ್ಲಿ ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳ 230 ರಲ್ಲಿ 144 ಸ್ಥಾನಗಳಿಗೆ ಸ್ಪರ್ಧಿಸಲಿದ್ದು, ಕಾಂಗ್ರೆಸ್ 70 ಮತ್ತು ಎಡ ಪಕ್ಷಗಳಿಗೆ 29 ಸ್ಥಾನಗಳನ್ನು ನೀಡಲಿದೆ ಎಂದು ರಾಜ್ಯದ ಪ್ರಮುಖ ವಿರೋಧ ಪಕ್ಷಗಳು ಶನಿವಾರ ಪ್ರಕಟಿಸಿವೆ.

Last Updated : Oct 3, 2020, 06:05 PM IST
 ಬಿಹಾರ ಚುನಾವಣೆ: ಆರ್‌ಜೆಡಿ ನಾಯಕ ತೇಜಶ್ವಿ ಯಾದವ್ ಮಹಾಮೈತ್ರಿ ಒಕ್ಕೂಟದ ಸಿಎಂ ಅಭ್ಯರ್ಥಿ  title=
Photo Courtsey : Twitter

ನವದೆಹಲಿ: ಮುಂಬರುವ ಬಿಹಾರ ಚುನಾವಣೆಯಲ್ಲಿ ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳ 230 ರಲ್ಲಿ 144 ಸ್ಥಾನಗಳಿಗೆ ಸ್ಪರ್ಧಿಸಲಿದ್ದು, ಕಾಂಗ್ರೆಸ್ 70 ಮತ್ತು ಎಡ ಪಕ್ಷಗಳಿಗೆ 29 ಸ್ಥಾನಗಳನ್ನು ನೀಡಲಿದೆ ಎಂದು ರಾಜ್ಯದ ಪ್ರಮುಖ ವಿರೋಧ ಪಕ್ಷಗಳು ಶನಿವಾರ ಪ್ರಕಟಿಸಿವೆ.

ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ನಾಯಕ ತೇಜಶ್ವಿ ಯಾದವ್ ಅವರು ಪ್ರತಿಪಕ್ಷಗಳ ಒಕ್ಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ. ಲಾಲು ಪ್ರಸಾದ್ ಯಾದವ್ ನೇತೃತ್ವದ ಪಕ್ಷವು ಕಾಂಗ್ರೆಸ್ ಮತ್ತು ಎಡಪಂಥೀಯರ ಮೈತ್ರಿಕೂಟದಲ್ಲಿ ಚುನಾವಣೆಗೆ  ಸ್ಪರ್ಧಿಸುತ್ತಿದೆ.

ಆರ್‌ಜೆಡಿ ಬಿಹಾರದಲ್ಲಿ ಅಧಿಕಾರಕ್ಕೆ ಬಂದರೆ 10 ಲಕ್ಷ ಉದ್ಯೋಗ-ತೇಜಶ್ವಿ ಯಾದವ್

ಬಿಹಾರದಲ್ಲಿ ಅಕ್ಟೋಬರ್ 28, ನವೆಂಬರ್ 3 ಮತ್ತು 7 ರಂದು ಮತ ಚಲಾಯಿಸಲಿದ್ದು, ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ. ಕೊರೊನಾವೈರಸ್ ಬಿಕ್ಕಟ್ಟಿನಲ್ಲಿ ದೇಶದ ಅತಿದೊಡ್ಡ ಚುನಾವಣೆ ಹೆಚ್ಚುವರಿ ಮತದಾನದ ಸಮಯ ಮತ್ತು ದೈಹಿಕ ಸಂಪರ್ಕವಿಲ್ಲದೆಯೇ ಹಲವು ಬದಲಾವಣೆಗಳೊಂದಿಗೆ ಪ್ರಚಾರ ನಡೆಯಲಿದೆ. 

Trending News