ಪಿಎನ್ಬಿ ಹಗರಣ : ಬ್ಯಾಂಕ್ ಸಂಘಟನೆಗಳಿಂದ ಪ್ರತಿಭಟನೆ

ದೆಹಲಿಯಲ್ಲಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್(UFBU) ಪ್ರತಿಭಟನೆ ನಡೆಸಿತು.

Last Updated : Mar 21, 2018, 05:36 PM IST
ಪಿಎನ್ಬಿ ಹಗರಣ : ಬ್ಯಾಂಕ್ ಸಂಘಟನೆಗಳಿಂದ ಪ್ರತಿಭಟನೆ title=

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಯಲ್ಲಿ ಬಹಿರಂಗಪಡಿಸಿದ ಬಹು ಸಾವಿರ ಕೋಟಿಗಳ ಹಗರಣಕ್ಕೆ ಸಂಬಂಧಿಸಿದಂತೆ ಬುಧವಾರ ದೆಹಲಿಯಲ್ಲಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್(UFBU) ಪ್ರತಿಭಟನೆ ನಡೆಸಿತು.

ವರದಿಗಳ ಪ್ರಕಾರ, ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆಯೊಂದಿಗೆ ಸಹಿ ಸಂಗ್ರಹ ಚಳವಳಿಯನ್ನೂ ಸಹ ನಡೆಸಿದ್ದು, ಅದನ್ನು ಏಪ್ರಿಲ್ನಲ್ಲಿ ಲೋಕಸಭಾ ಸ್ಪೀಕರ್'ಗೆ ಕಳುಹಿಸಲು ನಿರ್ಧರಿಸಿದೆ ಎನ್ನಲಾಗಿದೆ. 

ಬ್ಯಾಂಕ್ನಿಂದ ಸಾಲ ಪಡೆದು ವಂಚಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಾರ್ಚ್ 21 ರಂದು ದೆಹಲಿಯಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಹೇಳಿತ್ತು.

ಫೆಬ್ರವರಿಯಲ್ಲಿ ಮುಂಬೈನ ಪಿಎನ್‌ಬಿ ಬ್ಯಾಂಕ್‌ನ ಶಾಖೆಯೊಂದರಿಂದ ಆಭರಣ ಉದ್ಯಮಿ ನೀರವ್‌ ಮೋದಿ ಅಕ್ರಮವಾಗಿ ಅನುಮತಿ ಪತ್ರ ಪಡೆದು, ಅದರ ಮೂಲಕ ವಿದೇಶದಲ್ಲಿನ ವಿವಿಧ ಬ್ಯಾಂಕ್‌ಗಳಿಂದ ಭಾರೀ ಪ್ರಮಾಣದ ಹಣ ಪಡೆದು ವಂಚನೆ ಎಸಗಿರುವುದು ಬೆಳಕಿಗೆ ಬಂದಿತ್ತು. 

Trending News