Bank Strike: ದೇಶಾದ್ಯಂತ ಈ ದಿನ ಬ್ಯಾಂಕ್ ಮುಷ್ಕರ, ಎಟಿಎಂ ಮತ್ತು ಇತರ ಸೇವೆಗಳ ಮೇಲೂ ಪರಿಣಾಮ

Bank Strike Update: ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ದೇಶಾದ್ಯಂತ ಒಂದು ದಿನದ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಇದರಿಂದಾಗಿ ಬ್ಯಾಂಕಿಂಗ್ ಸೇವೆಗಳಿಂದ ಹಿಡಿದು ಎಟಿಎಂ ಸೇವೆಯವರೆಗೂ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಇಲ್ಲಿದೆ ವಿವರ...  

Written by - Yashaswini V | Last Updated : Nov 14, 2022, 03:46 PM IST
  • ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಭಾರತೀಯ ಬ್ಯಾಂಕ್ ಅಸೋಸಿಯೇಷನ್‌ಗೆ ಮುಷ್ಕರಕ್ಕೆ ಕರೆ ನೀಡಿದೆ
  • ಈ ನೋಟಿಸ್‌ನಲ್ಲಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 2022 ರ ನವೆಂಬರ್ 19 ರಂದು ಮುಷ್ಕರ ನಡೆಸುವುದಾಗಿ ಯೂನಿಯನ್ ಹೇಳಿದೆ.
  • ಅಂದರೆ ನವೆಂಬರ್ 19 ರಂದು ಬ್ಯಾಂಕ್ ಗಳ ಕೆಲಸ ಸ್ಥಗಿತಗೊಳ್ಳಲಿದೆ.
Bank Strike: ದೇಶಾದ್ಯಂತ ಈ ದಿನ  ಬ್ಯಾಂಕ್ ಮುಷ್ಕರ, ಎಟಿಎಂ ಮತ್ತು ಇತರ ಸೇವೆಗಳ ಮೇಲೂ ಪರಿಣಾಮ title=
Bank strike

Bank Strike Update: ಈ ವಾರ ನೀವು ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಕೆಲಸ ಮಾಡಬೇಕಾದರೆ, ಈ ಸುದ್ದಿಯನ್ನು ತಪ್ಪದೇ ಓದಿ. ಈ ಬಾರಿ ಬ್ಯಾಂಕ್ ಮುಷ್ಕರದ ಸಮಯದಲ್ಲಿ ಬ್ಯಾಂಕಿಂಗ್ ಸೇವೆಯೊಂದಿಗೆ ಎಟಿಎಂ ಸೇವೆಯೂ ವ್ಯತ್ಯಯವಾಗಲಿದೆ. ವಾಸ್ತವವಾಗಿ,  ನವೆಂಬರ್ 19ರಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಒಂದು ದಿನದ ಮುಷ್ಕರಕ್ಕೆ ಕರೆ ನೀಡಿದೆ. ಈ ಶನಿವಾರ ಬ್ಯಾಂಕ್ ನೌಕರರು ಮುಷ್ಕರ ನಡೆಸುವುದರಿಂದ, ಬ್ಯಾಂಕ್ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಲಿದೆ.  

ದೇಶಾದ್ಯಂತ ಬ್ಯಾಂಕ್ ಮುಷ್ಕರ: 
ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಭಾರತೀಯ ಬ್ಯಾಂಕ್ ಅಸೋಸಿಯೇಷನ್‌ಗೆ ಮುಷ್ಕರಕ್ಕೆ ಕರೆ ನೀಡಿದ್ದಾರೆ ಎಂದು ಬ್ಯಾಂಕ್ ಆಫ್ ಬರೋಡಾ ಷೇರು ವಿನಿಮಯ ಕೇಂದ್ರಗಳಿಗೆ ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ತಿಳಿಸಿದ್ದು, ಅಸೋಸಿಯೇಷನ್‌ಗೆ ನೋಟಿಸ್ ನೀಡಲಾಗಿದೆ. ಈ ನೋಟಿಸ್‌ನಲ್ಲಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 2022 ರ ನವೆಂಬರ್ 19 ರಂದು ಮುಷ್ಕರ ನಡೆಸುವುದಾಗಿ ಯೂನಿಯನ್ ಹೇಳಿದೆ. ಅಂದರೆ ನವೆಂಬರ್ 19 ರಂದು ಬ್ಯಾಂಕ್ ಗಳ ಕೆಲಸ ಸ್ಥಗಿತಗೊಳ್ಳಲಿದೆ.

ಇದನ್ನೂ ಓದಿ- Earthquake In Punjab: ಪಂಜಾಬ್‌ನ ಅಮೃತಸರದಲ್ಲಿ 4.1 ತೀವ್ರತೆಯ ಭೂಕಂಪ

ಬ್ಯಾಂಕ್ ನೀಡಿದೆ ಈ ಮಾಹಿತಿ: 
ಮುಷ್ಕರದ ದಿನದಂದು ಬ್ಯಾಂಕ್ ಶಾಖೆಗಳು ಮತ್ತು ಕಚೇರಿಗಳಲ್ಲಿ ಕಾರ್ಯಾಚರಣೆಯನ್ನು ಮುಂದುವರಿಸಲು ಎಲ್ಲಾ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಬ್ಯಾಂಕ್ ಹೇಳಿದೆ. ಆದರೆ ಬ್ಯಾಂಕ್ ನೌಕರರು ಮುಷ್ಕರದಲ್ಲಿ ಭಾಗಿಯಾದರೆ,   ಬ್ಯಾಂಕ್ ಶಾಖೆಗಳು ಮತ್ತು ಕಚೇರಿಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು. ವಾಸ್ತವವಾಗಿ, ನವೆಂಬರ್ 19, 2022 ಶನಿವಾರದಂದು ಬರುತ್ತದೆ ಮತ್ತು ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್ ಮುಚ್ಚಿರುತ್ತದೆ. ಆದರೆ ಈ ತಿಂಗಳ ಮೂರನೇ ಶನಿವಾರವೂ ಮುಷ್ಕರದಿಂದಾಗಿ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರಲಿದೆ.

ಇದನ್ನೂ ಓದಿ- ರಾಮ್‌ದೇವ್ ದಿವ್ಯ ಫಾರ್ಮಸಿ ಸಂಸ್ಥೆಯ ಐದು ಉತ್ಪನ್ನಗಳ ಮೇಲಿನ ನಿಷೇಧ ರದ್ದು

ಅಂತಹ ಪರಿಸ್ಥಿತಿಯಲ್ಲಿ, ಶನಿವಾರ ಮುಷ್ಕರದ ಕಾರಣ, ನಿಮ್ಮ ಬ್ಯಾಂಕಿಂಗ್ ಕೆಲಸಗಳ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ, ನೀವೂ ಸಹ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ನಿಭಾಯಿಸಬೇಕಾದರೆ ಶುಕ್ರವಾರಕ್ಕೂ ಮೊದಲೇ ನಿಮ್ಮೆಲ್ಲಾ ಬ್ಯಾಂಕಿಂಗ್ ಕೆಲಸಗಳನ್ನು ಮುಗಿಸಿಕೊಳ್ಳಿ. ಮರುದಿನ ಭಾನುವಾರವಾದ್ದರಿಂದ ಜನಸಾಮಾನ್ಯರು ಎರಡು ದಿನ ಎಟಿಎಂಗಳಲ್ಲಿ ಹಣದ ಕೊರತೆ ಎದುರಿಸಬೇಕಾಗಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News