ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ನಟಿ ಜಯಪ್ರದಾಗೆ ಕರೆದದ್ದೇನು ?

    

Last Updated : Mar 11, 2018, 02:34 PM IST
ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ನಟಿ ಜಯಪ್ರದಾಗೆ ಕರೆದದ್ದೇನು ? title=

ನವದೆಹಲಿ: ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್  ಮತ್ತು ನಟಿ ಜಯಪ್ರದಾ ನಡುವಿನ ಮಾತಿನ ಕೆಸರಾಟ ಮತ್ತೆ ಮುಂದುವರೆದಿದೆ .ಆದರೆ ಈ ಬಾರಿ ಅಜಂ ಖಾನ್ ನಟಿ ಜಯಪ್ರದಾಗೆ ತಿರುಗೇಟು ನೀಡಿದ್ದಾರೆ.

ಇತ್ತೀಚಿಗೆ ನಟಿ ಜಯಪ್ರದಾ  ಅಜಂ ಖಾನ್ ರನ್ನು ತೆಗಳುತ್ತಾ ಅವರನ್ನು ಪದ್ಮಾವತ್ ಚಿತ್ರದಲ್ಲಿನ ಅಲ್ಲಾವುದ್ದಿನ ಖಿಲ್ಜಿ ಪಾತ್ರಕ್ಕೆ ಹೋಲಿಸಿದ್ದರು. 2009 ಉತ್ತರ ಪ್ರದೇಶದ ರಾಮ್ ಪುರ ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಜಂ ಖಾನ್ ತಮಗೆ ಕಿರುಕುಳ ನೀಡಿದ್ದರು ಎಂದು ಅವರು ಆರೋಪಿಸಿದ್ದರು.

ಈಗ ಇದಕ್ಕೆ ಪ್ರತಿಕ್ರಿಯಿಸಿರುವ ಅಜಂ ಖಾನ್ " ಮಹಿಳೆ ಮತ್ತು ನೃತ್ಯಗಾರ್ತಿಯೊಬ್ಬಳು ಈ ವ್ಯಕ್ತಿಯೊಬ್ಬನ ಕುರಿತಾಗಿ ಏನೋ ಹೇಳಿರುವುದನ್ನು ಕೇಳಿದ್ದೇನೆ,ನೀವೇ ಹೇಳಿ ಈ ನೃತ್ಯಗಾರರು ಹಾಡುಗಾರರನ್ನು ಎದುರಿಸುತ್ತಾ  ಕುಳಿತರೆ ನಾನು ರಾಜಕೀಯ ಹೇಗೆ ಮಾಡಲಿ" ಎಂದು ಅವರು ಜಯಪ್ರದಾ ಕುರಿತಾಗಿ ವ್ಯಂಗ್ಯವಾಡಿದ್ದಾರೆ. 

Trending News