ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಥಿತಿ ಗಂಭೀರ

ಏಮ್ಸ್ ಆಸ್ಪತ್ರೆಗೆ ದೌಡಾಯಿಸುತ್ತಿರುವ ಬಿಜೆಪಿ ನಾಯಕರು.

Last Updated : Aug 16, 2018, 07:33 AM IST
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಥಿತಿ ಗಂಭೀರ title=

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸದ್ಯ ಅವರಿಗೆ ಆಮ್ಲಜನಕದ ಬೆಂಬಲ ನೀಡಲಾಗಿದೆ ಎಂದು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ಬುಧವಾರ ಸಂಜೆ ಬಿಡುಗಡೆಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

93 ವರ್ಷ ವಯಸ್ಸಿನ  ಅಜಾತಶತ್ರು ವಾಜಪೇಯಿ ಅವರು ಮೂತ್ರಪಿಂಡದ ಸೋಂಕು, ಮಧುಮೇಹ, ಎದೆ ನೋವಿನಿಂದ ಬಳಲುತ್ತಿದ್ದಾರೆ. 

ಬುಧವಾರ ರಾತ್ರಿ 07:15ಕ್ಕೆ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ವರಿಗೆ ಆಸ್ಪತ್ರೆಗೆ ನಿರ್ದೇಶಕ ರಾಮ್ ದೀಪ್ ಗುಲೆರಿಯಾ, ವಾಜಪೇಯಿ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ಇನ್ನು ಮುತ್ಸದ್ಧಿ ರಾಜಕಾರಣಿ ವಾಜಪೇಯಿ ಆರೋಗ್ಯ ಸ್ಥಿತಿ ಬಿಗಡಾಯಿಸಿದೆ ಎಂದು ತಿಳಿದ ಬೆನ್ನಲ್ಲೇ ಬಿಜೆಪಿ ನಾಯಕರೂ ಸೇರಿದಂತೆ ಹಲವು ರಾಜಕಾರಣಿಗಳು ಏಮ್ಸ್ ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ.
 

Trending News