ರಾಮಬನ್: ಜಮ್ಮು-ಕಾಶ್ಮೀರದ ರಾಮಬನ ಜಿಲ್ಲೆಯ ಕುಂದಾ ಮಾಡ್ ಬಳಿ ಬಸ್ಸೊಂದು ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ 11 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, ಮೂವರು ಗಂಭಿರವಾಗಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ.
ಚಂದ್ರಕೋಟ್-ರಾಜ್ಗರ್ ರಸ್ತೆ ಮಾರ್ಗದವಾಗಿ 15 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ SUV ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ 500 ಅಡಿ ಆಳದ ಪ್ರಪಾತಕ್ಕೆ ಬಿದ್ದ ಕಾರಣ ಈ ದುರ್ಘಟನೆ ಸಂಭವಿಸಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಮತ್ತು ಪೊಲೀಸರು ಎಅಕ್ಷನಾ ಕಾರ್ಯದಲ್ಲಿ ನಿರತರಾದರು ಎಂದು ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
#UPDATE: 11 people dead and 3 injured after the vehicle they were travelling in, rolled down a deep gorge at Kunda Mod in Ramban earlier today. The vehicle was going from Chandrakot to Rajgarh. #JammuAndKashmir pic.twitter.com/6CI4hmxv11
— ANI (@ANI) March 16, 2019
ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನ್ನಪ್ಪಿದ್ದು, ಗಂಭಿರವಾಗಿ ಗಾಯಗೊಂದಿದ್ದ ಐವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಡ್ರೈವರ್ ಸೇರಿದಂತೆ ಗಂಭಿರವಾಗಿ ಗಾಯಗೊಂಡಿದ್ದು ಮೂವರನ್ನು ಜಮ್ಮು ಆಸ್ಪತ್ರೆಗೆ ದಾಖಲಿಸಲಾಗಿದೆ.