ಒಂದೇ ಸಾರಿ ಎಲ್ಲಾ ಆಮ್ ಆದ್ಮಿ ಶಾಸಕರನ್ನು ಬಂಧಿಸಿ- ಪ್ರಧಾನಿಗೆ ಕೇಜ್ರಿವಾಲ್ ಮನವಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಾ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ನಂತರ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲಾಗುವುದು ಎಂದು ಅವರು ಹೇಳಿದರು.ಆರೋಗ್ಯ, ವಿದ್ಯುತ್ ಮತ್ತು ಗೃಹ ಖಾತೆಗಳನ್ನು ಹೊಂದಿರುವ ಜೈನ್ ಅವರನ್ನು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ಬಂಧಿಸಿದೆ.

Last Updated : Jun 2, 2022, 05:34 PM IST
  • ದಿಲ್ಲಿ ಮಾತ್ರವಲ್ಲದೆ, ಅವರು ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣವನ್ನು ಪಡೆಯಬಹುದು ಎನ್ನುವ ಭರವಸೆಯನ್ನು ಅವರು ದೇಶಾದ್ಯಂತದ ಮಕ್ಕಳಿಗೆ ಭರವಸೆ ನೀಡಿದರು.
  • 'ನಾನು ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಪೋಷಕರನ್ನು 'ಇವರು ಭ್ರಷ್ಟರಾಗಿದ್ದಾರೆಯೇ ' ಎಂದು ಕೇಳಲು ಬಯಸುತ್ತೇನೆ.
 ಒಂದೇ ಸಾರಿ ಎಲ್ಲಾ ಆಮ್ ಆದ್ಮಿ ಶಾಸಕರನ್ನು ಬಂಧಿಸಿ- ಪ್ರಧಾನಿಗೆ ಕೇಜ್ರಿವಾಲ್ ಮನವಿ title=

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಾ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ನಂತರ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಲಾಗುವುದು ಎಂದು ಅವರು ಹೇಳಿದರು.ಆರೋಗ್ಯ, ವಿದ್ಯುತ್ ಮತ್ತು ಗೃಹ ಖಾತೆಗಳನ್ನು ಹೊಂದಿರುವ ಜೈನ್ ಅವರನ್ನು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ಬಂಧಿಸಿದೆ.

'ಕೇಂದ್ರ ಸರ್ಕಾರವು ಸತ್ಯೇಂದ್ರ ಜೈನ್ ಅವರನ್ನು ನಕಲಿ ಪ್ರಕರಣದಲ್ಲಿ ಬಂಧಿಸಲಿದೆ ಎಂದು ನಾನು ಕೆಲವು ತಿಂಗಳ ಹಿಂದೆಯೇ ಘೋಷಿಸಿದ್ದೆ, ಮನೀಶ್ ಸಿಸೋಡಿಯಾ ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ವಿಶ್ವಾಸಾರ್ಹ ಮೂಲಗಳು ನನಗೆ ಸೂಚಿಸಿವೆ, ಕೇಂದ್ರವು ಎಲ್ಲಾ ಏಜೆನ್ಸಿಗಳಿಗೆ ನಕಲಿ ಪ್ರಕರಣಗಳನ್ನು ದಾಖಲಿಸಲು ಆದೇಶಿಸಿದೆ ಎಂದು ಕೇಜ್ರಿವಾಲ್ ಹೇಳಿದರು.

ಇದನ್ನೂ ಓದಿ: Slapping Game: ವಿಚಿತ್ರ ಆಟಕ್ಕಿಳಿದ ಹುಡುಗಿಯರಿಂದ ಪರಸ್ಪರರ ಕೆನ್ನೆಗೆ ಕಪಾಳಮೋಕ್ಷ, ಇದೆಂಥಾ ಆಟ?

ಆರೋಗ್ಯ, ವಿದ್ಯುತ್ ಮತ್ತು ಗೃಹ ಖಾತೆಗಳನ್ನು ಹೊಂದಿರುವ ಸತ್ಯೇಂದ್ರ ಜೈನ್ ಅವರನ್ನು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸೋಮವಾರ ಬಂಧಿಸಿದೆ. ಸಿಸೋಡಿಯಾ ಅವರನ್ನು "ದೆಹಲಿಯಲ್ಲಿ ಶಿಕ್ಷಣ ಚಳುವಳಿಯ ಪಿತಾಮಹ" ಮತ್ತು ಸ್ವತಂತ್ರ ಭಾರತದ ಅತ್ಯುತ್ತಮ ಶಿಕ್ಷಣ ಸಚಿವರಾಗಿದ್ದಾರೆ ಅವರು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಭವಿಷ್ಯವನ್ನು ಸುಧಾರಿಸಲು ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಛತ್ರಪತಿ ಶಿವಾಜಿ ಆಗ್ತಾರಾ ರಾಕಿಂಗ್‌ ಸ್ಟಾರ್‌ ಯಶ್‌! ವೈರಲ್‌ ಆಗ್ತಿರುವ ಪೋಸ್ಟರ್‌ ಅಸಲಿಯತ್ತೇನು?

"ದಿಲ್ಲಿ ಮಾತ್ರವಲ್ಲದೆ, ಅವರು ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣವನ್ನು ಪಡೆಯಬಹುದು ಎನ್ನುವ ಭರವಸೆಯನ್ನು ಅವರು ದೇಶಾದ್ಯಂತದ ಮಕ್ಕಳಿಗೆ ಭರವಸೆ ನೀಡಿದ್ದಾರೆ, ಆದ್ದರಿಂದ ನಾನು ಈಗ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಪೋಷಕರನ್ನು ಸಿಶೋಡಿಯಾ ಭ್ರಷ್ಟರಾಗಿದ್ದಾರೆಯೇ ' ಎಂದು ಕೇಳಲು ಬಯಸುತ್ತೇನೆ' ಎಂದು ಅವರು ಹೇಳಿದರು.

ಸಿಸೋಡಿಯಾ ಮತ್ತು ಜೈನ್ ನೇತೃತ್ವದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉತ್ತಮ ಕೆಲಸಗಳನ್ನು ತಡೆಯಲು ಕೇಂದ್ರವು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಕೇಜ್ರಿವಾಲ್, ಅವರ ಬಂಧನದಿಂದ ದೇಶಕ್ಕೆ ನಷ್ಟವಾಗಿದೆ ಎಂದು ಹೇಳಿದರು.

ಆದ್ದರಿಂದ ಈಗ ನಾನು 'ಎಎಪಿಯ ಎಲ್ಲಾ ಶಾಸಕರನ್ನು ಒಂದೇ ಬಾರಿಗೆ ಬಂಧಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇನೆ.ಅವರನ್ನು ಒಬ್ಬೊಬ್ಬರಾಗಿ ಬಂಧಿಸುವುದು ಒಳ್ಳೆಯ ಕೆಲಸಕ್ಕೆ ತಡೆಯನ್ನು ನೀಡುತ್ತದೆ ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News