ನವದೆಹಲಿ: ಭಾನುವಾರದಂದು ಅರುಣಾಚಲ ಪ್ರದೇಶದ ಸುಮಾರು 500 ಜನರು ಸಶಸ್ತ್ರದೊಂದಿಗೆ ಮುಖವಾಡ ಧರಿಸಿ ಚುನಾವಣಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ತಂಡವನ್ನು ದಾಳಿ ಮಾಡಿ ಇವಿಎಂ ಮತಯಂತ್ರಗಳನ್ನು ನಾಶ ಮಾಡಿದ್ದಾರೆ ಎಂದು ಅರುಣಾಚಲ ಟೈಮ್ಸ್ ವರದಿ ಮಾಡಿದೆ.
ಮಂಗಳವಾರದಂದು ಮರು ಚುನಾವಣೆ ಈ ಪ್ರದೇಶದಲ್ಲಿ ಘೋಷಣೆಯಾದ ಸಂದಭದಲ್ಲಿ ಚುನಾವಣಾ ಸಿಬ್ಬಂದಿ ನಾಮ್ಪೆಗೆ ಸಾಗುತ್ತಿದ್ದಾಗ ಈ ಘಟನೆ ನಡೆದಿದ್ದು. ಕೊಲೋರಿಯಾಂಗ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕುರಂಗ್ ಕುಮೇ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ
ಈ ಘಟನೆಯಲ್ಲಿ ಭಾಗಿಯಾದವರನ್ನು ಬಿಜೆಪಿ ಮೈತ್ರಿಕೂಟದ ಭಾಗವಾಗಿರುವ ನಾಷ್ಯನಲ್ ಪೀಪಲ್ಸ್ ಪಾರ್ಟಿ ಬೆಂಬಲಿಗರು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ದಿ ಅರುಣಾಚಲ ಟೈಮ್ಸ್ ವರದಿ ಹೇಳಿದೆ.ಈಗಾಗಲೇ ಈ ಘಟನೆ ವಿಚಾರವಾಗಿ ಕೊಲೋರಿಯಾಂಗ್ ನ ಪೋಲಿಸ್ ಮೂಲಗಳು ಕೂಡ ಖಚಿತ ಪಡಿಸಿವೆ. ಸುಮಾರು 500 ಕ್ಕೂ ಅಧಿಕ ಜನರು ಎಕೆ 47 ರೈಫಲ್ಸ್ ಗಳು ಹಾಗೂ ಸ್ಟಿಕ್ ಗಳನ್ನು ಹೊಂದಿದ್ದ ತಂಡವು ಚುನಾವಣಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಇವಿಎಮ್ ಗಳನ್ನು ನಾಶಮಾಡಿದ್ದಾರೆ ಎನ್ನಲಾಗಿದೆ.
ಈಗ ನಾಮ್ಪೆ ವಲಯದ ಮ್ಯಾಜಿಸ್ಟ್ರೇಟ್ ರಿಡೋ ತಾರಕ್ ಕೊಲೋರಿಯಾಂಗ್ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿಸಿದ್ದಾರೆ. ಸುಮಾರು ಸಾಯಂಕಾಲ 5 ಗಂಟೆಗೆ ಈ ಘಟನೆ ನಡೆದ ಸಂದರ್ಭದಲ್ಲಿ ದಾಳಿಕೋರರು ಸುಸಜ್ಜಿತ ಶಸ್ತ್ರಗಳನ್ನು ಹೊಂದಿದ್ದರು ಎಂದು ತಿಳಿದುಬಂದಿದೆ.ಚುನಾವಣಾ ತಂಡದಲ್ಲಿ ಸಿಪಿಆರ್ಎಫ್ ಮತ್ತು ಭಾರತೀಯ ರಿಸರ್ವ್ ಬೆಟಾಲಿಯನ್ನ ಎರಡು ವಿಭಾಗಗಳನ್ನು ಒಳಗೊಂಡಿತ್ತು ಎಂದು ನೋಡಲ್ ಅಧಿಕಾರಿ ಗಳು ತಿಳಿಸಿದ್ದಾರೆ.