ಮೋದಿ ಸರ್ಕಾರಕ್ಕಿಂತ ಮೊದಲು ಕೂಡ ಸರ್ಜಿಕಲ್ ದಾಳಿಗಳು ನಡೆದಿದ್ದವು -ಲೆ.ಜನರಲ್ ಡಿ.ಎಸ್.ಹೂಡಾ

ಸರ್ಜಿಕಲ್ ದಾಳಿಗಳು ಈ ಹಿಂದಿನ ಸರ್ಕಾರದ ಅವಧಿಯಲ್ಲಿಯೂ ಕೂಡ ನಡೆದಿದ್ದವು ಎಂದು ಲೆಫ್ಟಿನೆಂಟ್ ಜನರಲ್(ನಿವೃತ್ತ) ಡಿ.ಎಸ್ ಹೂಡಾ ಹೇಳಿದ್ದಾರೆ.ಮೋದಿ ಸರ್ಕಾರದಲ್ಲಿ ಮೊದಲ ಬಾರಿಗೆ ಸರ್ಜಿಕಲ್ ದಾಳಿ ನಡೆದಿವೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿರುವ ಸಂದರ್ಭದಲ್ಲಿ ಈಗ ಹೂಡಾ ಹೇಳಿಕೆ ಬಂದಿದೆ.

Last Updated : May 4, 2019, 08:48 PM IST
ಮೋದಿ ಸರ್ಕಾರಕ್ಕಿಂತ ಮೊದಲು ಕೂಡ ಸರ್ಜಿಕಲ್ ದಾಳಿಗಳು ನಡೆದಿದ್ದವು -ಲೆ.ಜನರಲ್ ಡಿ.ಎಸ್.ಹೂಡಾ title=
Photo courtesy: ANI

ನವದೆಹಲಿ: ಸರ್ಜಿಕಲ್ ದಾಳಿಗಳು ಈ ಹಿಂದಿನ ಸರ್ಕಾರದ ಅವಧಿಯಲ್ಲಿಯೂ ಕೂಡ ನಡೆದಿದ್ದವು ಎಂದು ಲೆಫ್ಟಿನೆಂಟ್ ಜನರಲ್(ನಿವೃತ್ತ) ಡಿ.ಎಸ್ ಹೂಡಾ ಹೇಳಿದ್ದಾರೆ.ಮೋದಿ ಸರ್ಕಾರದಲ್ಲಿ ಮೊದಲ ಬಾರಿಗೆ ಸರ್ಜಿಕಲ್ ದಾಳಿ ನಡೆದಿವೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿರುವ ಸಂದರ್ಭದಲ್ಲಿ ಈಗ ಹೂಡಾ ಹೇಳಿಕೆ ಬಂದಿದೆ.

2016 ರಲ್ಲಿ ಉರಿ ದಾಳಿ ನಡೆದ ನಂತರ ಭಾರತೀಯ ಸೈನ್ಯ ಕೈಕೊಂಡ ಸರ್ಜಿಕಲ್ ದಾಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎನ್ನಲಾದ ಲೆಫ್ಟಿನೆಂಟ್ ಜನರಲ್(ನಿವೃತ್ತ) ಡಿ.ಎಸ್ ಹೂಡಾ ಹೇಳಿಕೆ ಈಗ ಮಹತ್ವ ಪಡೆದಿದೆ. ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ ಹೂಡಾ "ನಿವೃತ್ತ ಸೇನಾಧಿಕಾರಿಗಳು ಹೇಳುವಂತೆ ಈ ಹಿಂದೆ ಕೂಡ ಸರ್ಜಿಕಲ್ ದಾಳಿ ಹಾಗೂ ಗಡಿಯಾಚೆಗಿನ ದಾಳಿ ನಡೆದಿವೆ ಆದರೆ ನಿಖರವಾದ ದಿನಾಂಕ ಮತ್ತು ಪ್ರದೇಶದ ಬಗ್ಗೆ ತಮಗೆ ಮಾಹಿತಿ  ಇಲ್ಲವೆಂದು ಹೇಳಿದರು.

ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದ ಬಿಜೆಪಿ ನಾಯಕ ಜಿವಿಎಲ್ ನರಸಿಂಹ ರಾವ್ ಇದಕ್ಕೂ ಮೊದಲು ಬಿಜೆಪಿ ಯುಪಿಎ ಅವಧಿಯಲ್ಲಿ ಯಾವುದೇ ರೀತಿಯ ಸರ್ಜಿಕಲ್ ದಾಳಿ ಸಂಭವಿಸಿರಲಿಲ್ಲ ಎಂದು ಹೇಳಿದ್ದಲ್ಲದೆ, ಕಾಂಗ್ರೆಸ್ ನಾಯಕರು ಸರ್ಜಿಕಲ್ ದಾಳಿ ಕುರಿತಾಗಿ ಹಲವು ಅಂಕಿ ಅಂಶಗಳನ್ನು ನೀಡುತ್ತಿರುವ ಕುರಿತು ವ್ಯಂಗ್ಯವಾಡಿದ್ದರು.ಗುರುವಾರದಂದು ಕಾಂಗ್ರೆಸ್ ಪಕ್ಷವು 2004-2014 ರ ಮನಮೋಹನ್ ಸಿಂಗ್ ಅವರು  ಪ್ರಧಾನಿಯಾಗಿದ್ದ ಅವಧಿಯಲ್ಲಿ ಆರು ಸರ್ಜಿಕಲ್ ದಾಳಿ ನಡೆದಿದ್ದವು ಎಂದು ಹೇಳಿತ್ತು. 

 

Trending News