NTPCಯಲ್ಲಿ ಭರ್ಜರಿ ಉದ್ಯೋಗಾವಕಾಶ

ಎನ್‌ಟಿಪಿಸಿಯಲ್ಲಿ ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಹೊಂದಿರಬೇಕು. 

Last Updated : Nov 25, 2020, 01:32 PM IST
  • ಎನ್‌ಟಿಪಿಸಿಯಲ್ಲಿ ಎಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 12
NTPCಯಲ್ಲಿ ಭರ್ಜರಿ ಉದ್ಯೋಗಾವಕಾಶ title=

ನವದೆಹಲಿ: ಜೀ ನ್ಯೂಸ್ ನಿಮಗಾಗಿ ಜೀ ರೋಜ್ಗಾರ್ ಸಮಾಚಾರ್ ಎಂದರೆ ಜೀ ಉದ್ಯೋಗ ಸಮಾಚಾರ ಎಂಬ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಕೆಲವು ದಿನಗಳ ಹಿಂದೆ, ಜೀ ನ್ಯೂಸ್ ತನ್ನ ವೀಕ್ಷಕರನ್ನು ನೀವು ಚಾನಲ್‌ನಲ್ಲಿ ಯಾವ ಬದಲಾವಣೆಗಳನ್ನು ನೋಡಲು ಬಯಸುತ್ತೀರಿ ಮತ್ತು ಸುದ್ದಿಯಲ್ಲಿ ಯಾವ ವಿಷಯಗಳಿಗೆ ಆದ್ಯತೆ ನೀಡಲು ಬಯಸುತ್ತೀರಿ ಎಂದು ಕೇಳಿತ್ತು. ಈ ಸಂದರ್ಭದಲ್ಲಿ ಹೆಚ್ಚಿನ ಪ್ರೇಕ್ಷಕರು ಉದ್ಯೋಗ ಸಂಬಂಧಿತ ವಿಷಯದ ಬಗ್ಗೆ ಹೆಚ್ಚು ವರದಿ ಮಾಡುವಂತೆ ಸಲಹೆ ನೀಡಿದ್ದರು. ಈ ಹಿನ್ನಲೆಯಲ್ಲಿ ಜೀ ವಾಹಿನಿಯಲ್ಲಿ ಜೀ ಉದ್ಯೋಗ (Job) ಸಮಾಚಾರ ಎಂಬ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಇದರಲ್ಲಿ ಎಲ್ಲೆಲ್ಲಿ ಉದ್ಯೋಗಾವಕಾಶ ಲಭ್ಯವಿದೆ, ಹುದ್ದೆಯ ವಿವರ ಹೀಗೆ ಪೂರ್ಣ ಮಾಹಿತಿ ಲಭ್ಯವಾಗಲಿದೆ.

ಎನ್‌ಟಿಪಿಸಿಯಲ್ಲಿ ಖಾಲಿಯಿರುವ ಹುದ್ದೆಗಳಿಗೆ (Vacancy) ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇದಕ್ಕಾಗಿ ಶೀಘ್ರದಲ್ಲೇ ಅರ್ಜಿ ಸಲ್ಲಿಸಬಹುದು. ಎನ್‌ಟಿಪಿಸಿಯಲ್ಲಿ ಖಾಲಿಯಿರುವ ಒಟ್ಟು 70 ಎಂಜಿನಿಯರ್ ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಡಿಪ್ಲೊಮಾ ಇನ್ ಎಂಜಿನಿಯರಿಂಗ್ ಪದವಿ ಹೊಂದಿರಬೇಕು. ಹುದ್ದೆಗೆ ಸಂಬಂಧಿಸಿದ ಇತರ ಮಾಹಿತಿಯನ್ನು ತಿಳಿಯಲು ಮುಂದೆ ಓದಿ...

ಗುಡ್ ನ್ಯೂಸ್ : ಶೀಘ್ರವೇ ಈ ಇಲಾಖೆಯಲ್ಲಿ ಖಾಲಿ ಇರುವ 16,000 ಹುದ್ದೆಗಳಿಗೆ ನೇಮಕಾತಿ

ಉದ್ಯೋಗಕ್ಕೆ ಸಂಬಂಧಿಸಿದ ವಿವರ: 

ಇಲಾಖೆ - ಎನ್‌ಟಿಪಿಸಿ (NTPC)

ಪೋಸ್ಟ್ - ಎಂಜಿನಿಯರ್

ಒಟ್ಟು ಪೋಸ್ಟ್‌ಗಳು - 70

ಅರ್ಹತೆ - ಎಂಜಿನಿಯರಿಂಗ್ ಡಿಪ್ಲೊಮಾ

ಸಂಬಳ - ತಿಂಗಳಿಗೆ 24,000 ರೂ.

ಗರಿಷ್ಠ ವಯಸ್ಸಿನ ಮಿತಿ - 25 ವರ್ಷಗಳು

ಮಾಹಿತಿ - 2 ವರ್ಷಗಳ ತರಬೇತಿ, ನಂತರ ಕೆಲಸ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 12 ಡಿಸೆಂಬರ್

JOB: Canara Bank ​ನಲ್ಲಿ 220 ಹುದ್ದೆಗಳಿಗೆ ಅರ್ಜಿ ಆಹ್ವಾನ!

Trending News