ಹುಲಿ ಮತ್ತು ಆನೆ ಗಣತಿಗೆ ಮುಂದಾದ ಈ ರಾಜ್ಯ

ಜಾರ್ಖಂಡ್‌ನಲ್ಲಿ ಅಕ್ಟೋಬರ್ 1 ರಿಂದ ಮೂರು ತಿಂಗಳ ಅವಧಿಯ ಪ್ರಾಣಿಗಳ ಗಣತಿ ಆರಂಭವಾಗಲಿದೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

Written by - Zee Kannada News Desk | Last Updated : Sep 23, 2021, 08:23 PM IST
  • ಜಾರ್ಖಂಡ್‌ನಲ್ಲಿ ಅಕ್ಟೋಬರ್ 1 ರಿಂದ ಮೂರು ತಿಂಗಳ ಅವಧಿಯ ಪ್ರಾಣಿಗಳ ಗಣತಿ ಆರಂಭವಾಗಲಿದೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಹುಲಿ ಮತ್ತು ಆನೆ ಗಣತಿಗೆ ಮುಂದಾದ ಈ ರಾಜ್ಯ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಜಾರ್ಖಂಡ್‌ನಲ್ಲಿ ಅಕ್ಟೋಬರ್ 1 ರಿಂದ ಮೂರು ತಿಂಗಳ ಅವಧಿಯ ಪ್ರಾಣಿಗಳ ಗಣತಿ ಆರಂಭವಾಗಲಿದೆ ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಕ್ಯಾಮರಾ ಟ್ರ್ಯಾಪಿಂಗ್ ಟೆಕ್ನಿಕ್ ಮತ್ತು ಪಗ್ ಮಾರ್ಕ್ ಟೆಕ್ನಿಕ್ ಮತ್ತು ಪೆಲೆಟ್ ಎಣಿಕೆ ಒಳಗೊಂಡ ಪರೋಕ್ಷ ಎಣಿಕೆ ವಿಧಾನದ ಸಹಾಯದಿಂದ ಈ ಗಣತಿಯನ್ನು ನಡೆಸಲಾಗುವುದು ಎಂದು ಪಲಾಮು ಟೈಗರ್ ರಿಸರ್ವ್ (ಪಿಟಿಆರ್) ಉಪ ನಿರ್ದೇಶಕ ಕುಮಾರ್ ಆಶಿಶ್ ತಿಳಿಸಿದ್ದಾರೆ.ರಾಜ್ಯದ ಎಲ್ಲಾ 31 ವಿಭಾಗೀಯ ಅರಣ್ಯ ಶ್ರೇಣಿಗಳು ಮತ್ತು ಐದು ವನ್ಯಜೀವಿ ಅಭಯಾರಣ್ಯಗಳು ಈ ಗಣತಿ ಸಮಯದಲ್ಲಿ ಒಳಗೊಳ್ಳುತ್ತವೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಾದ್ಯಂತ ಪಾಕ್ ನಿಂದ ದಾಳಿ

ಪ್ರಾಣಿಗಳ ಗಣತಿ ನಡೆಸಲು ಸಿದ್ಧತೆ ಅಂತಿಮ ಹಂತದಲ್ಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಗಣತಿ ಸಮಯದಲ್ಲಿ ಹುಲಿಗಳು, ಆನೆಗಳು, ಕರಡಿಗಳು, ಚಿರತೆಗಳು ಮತ್ತು ಜಿಂಕೆಗಳನ್ನು ಎಣಿಸಲಾಗುತ್ತದೆ.ಮೇದಿನಿನಗರದಲ್ಲಿರುವ ಪಿಟಿಆರ್ ಪ್ರಧಾನ ಕಚೇರಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯ ಮೂರು ದಿನಗಳ ತರಬೇತಿಯನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಗಡಿರೇಖೆ ಬಳಿಯ ಗುಂಡಿನ ದಾಳಿ ನಿಲ್ಲಿಸಲು ಮುಂದಾದ ಭಾರತ-ಪಾಕ್

ಹಿರಿಯ ಅರಣ್ಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಡೆಯಲಿರುವ ಗಣತಿ ಪ್ರಕ್ರಿಯೆಗೆ ಸಿಬ್ಬಂದಿಯನ್ನು ಗುರುತಿಸಿದ ಅರಣ್ಯ ಪ್ರದೇಶಗಳಿಗೆ ಕಳುಹಿಸಲಾಗುವುದು ಎಂದು ಆಶಿಶ್ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News