ನವದೆಹಲಿ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸುವ ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿರುವ ಅಮಿತ್ ಶಾ ಅವರ ಭಾಷಣವೇ ಈ ಹಿಂಸಾತ್ಮಕ ಪ್ರತಿಭಟನೆಯ ಹಿಂದಿನ ಕಾರಣಗಳನ್ನು ಬಹಿರಂಗಪಡಿಸಿದೆ ಎಂದು ಭಾರತೀಯ ಕಮ್ಯೂನಿಸ್ಟ್ ಪಕ್( ಮಾರ್ಕ್ಸವಾದಿ) ತನ್ನ ಹೇಳಿಕೆಯಲ್ಲಿ ತಿಳಿಸಿದೆ.
"ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸುವ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಪ್ರಶ್ನಿಸಿದ್ದಾರೆ ಮತ್ತು ಕೇರಳದಲ್ಲಿ ಶಾ ಮಾಡಿರುವ ಭಾಷಣದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕೋರ್ಟ್ ತೀರ್ಪನ್ನು ವಿರೋಧಿಸಲು ಹೇಳಿದ್ದಾರೆ. ಆ ಮೂಲಕ ಶಬರಿಮಲೆಯಲ್ಲಿನ ಹಿಂಸಾತ್ಮಕ ಪ್ರತಿಭಟನೆಯ ಹಿಂದಿರುವ ಕೈಯನ್ನು ಬಹಿರಂಗಪಡಿಸಿದ್ದಾರೆ ಎಂದು ಸಿಪಿಐ (ಎಂ) ಪಾಲಿಟ್ಬ್ಯೂರೊ ತನ್ನ ಹೇಳಿಕೆಯಲ್ಲಿ ತಿಳಿಸಿದೆ.ಇಂತಹ ಹೇಳಿಕೆಗಳೇ ಸ್ವಾಮಿ ಸಂದೀಪನಾಂದ ಗಿರಿರ ಆಶ್ರಮದ ಮೇಲಿನ ದಾಳಿಗೆ ಕಾರಣವಾಗಿವೆ ಎಂದು ಹೇಳಿದೆ.
BJP President Amit Shah has challenged the Supreme Court order on the entry of women to the #Sabarimala temple and incited his partymen to defy the verdict. He has exposed the real hand behind the violent protests against women’s entry into Sabarimala.https://t.co/TMCfWtAIff
— CPI (M) (@cpimspeak) October 28, 2018
ಆ ಮೂಲಕ ಅಮಿತ್ ಷಾ ಅವರ ಭಾಷಣವು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮತ್ತು ಬಿಜೆಪಿಯು ಸಂವಿಧಾನ ಮತ್ತು ಸುಪ್ರೀಂ ಕೋರ್ಟ ಬಗೆಗಿರುವ ತಿರಸ್ಕಾರವನ್ನು ಸೂಚಿಸಿದೆ. ಒಂದು ವೇಳೆ ಸುಪ್ರಿಂಕೋರ್ಟ್ ತೀರ್ಪನ್ನು ಎತ್ತಿಹಿಡಿದದ್ದೇ ಆದಲ್ಲಿ ರಾಜ್ಯ ಸರ್ಕಾರವನ್ನು ಕೆಡುವಂತಹ ಮನೋಭಾವ ಪ್ರಜಾಪ್ರಭುತ್ವದ ವಿರೋಧಿ, ಸರ್ವಾಧಿಕಾರಿ ವರ್ತನೆಯದದ್ದಾಗಿದೆ.ಆ ಮೂಲಕ ಅಮಿತ್ ಶಾ ಅವರ ಇನ್ನೊಂದು ಮುಖವನ್ನು ಆನಾವರಣವಾಗಿದೆ ಎಂದು ಸಿಪಿಎಂ ತಿಳಿಸಿದೆ.