100000 ಜನರಿಗೆ ಉದ್ಯೋಗ ಕಲ್ಪಿಸಲು ಮುಂದಾದ Amazon, ಆರಂಭಿಕ ವೇತನ ರೂ.1100 ಪ್ರತಿ ಗಂಟೆಗೆ

ಕರೋನಾ (Coronavirus)ಕಾಲದಲ್ಲಿ ಉದ್ಯೋಗ ಹುಡುಕಾಟಗಲ್ಲಿರುವವರಿಗೆ ಒಂದು ಸಂತಸದ ಸುದ್ದಿ ಪ್ರಕಟಗೊಂಡಿದೆ.

Last Updated : Sep 14, 2020, 06:01 PM IST
  • ಇ-ಕಾಮರ್ಸ್ ಕಂಪನಿ ಅಮೆಜಾನ್ 100,000 ಜನರನ್ನು ನೇಮಕ ಮಾಡುವುದಾಗಿ ಘೋಷಿಸಿದೆ.
  • ತಾತ್ಕಾಲಿಕ ಮತ್ತು ಶಾಶ್ವತ ಹುದ್ದೆಗಳ ವಿಭಾಗದಲ್ಲಿ ಈ ನೂತನ ನೇಮಕಾತಿಗಳನ್ನು ನಡೆಸಲಾಗುವುದು.
  • ಈ ಹೊಸ ಉದ್ಯೋಗಿಗಳು ಆರ್ಡರ್ ಗಳ ಪ್ಯಾಕಿಂಗ್, ವಿತರಣೆ ಹಾಗೂ ವಿಂಗಡಣೆಯನ್ನು ಮಾಡಲಿದ್ದಾರೆ.
100000  ಜನರಿಗೆ ಉದ್ಯೋಗ ಕಲ್ಪಿಸಲು ಮುಂದಾದ Amazon, ಆರಂಭಿಕ ವೇತನ ರೂ.1100 ಪ್ರತಿ ಗಂಟೆಗೆ title=

ನವದೆಹಲಿ: ಕರೋನಾ (Coronavirus) ಕಾಲದಲ್ಲಿ ಉದ್ಯೋಗ ಹುಡುಕಾಟಗಲ್ಲಿರುವವರಿಗೆ ಒಂದು ಸಂತಸದ ಸುದ್ದಿ ಪ್ರಕಟಗೊಂಡಿದೆ. ಆನ್‌ಲೈನ್ ಆರ್ಡರ್ ಗಳ ಬೇಡಿಕೆಯ ನಡುವೆ, ಇ-ಕಾಮರ್ಸ್ ಕಂಪನಿ ಅಮೆಜಾನ್ 100,000 ಜನರನ್ನು ನೇಮಕ ಮಾಡುವುದಾಗಿ ಘೋಷಿಸಿದೆ. ತಾತ್ಕಾಲಿಕ ಮತ್ತು ಶಾಶ್ವತ ಹುದ್ದೆಗಳ ವಿಭಾಗದಲ್ಲಿ ಈ ನೂತನ ನೇಮಕಾತಿಗಳನ್ನು ನಡೆಸಲಾಗುವುದು ಎಂದು ಕಂಪನಿ ತಿಳಿಸಿದೆ. ಈ ಹೊಸ ಉದ್ಯೋಗಿಗಳು ಆರ್ಡರ್ ಗಳ ಪ್ಯಾಕಿಂಗ್, ವಿತರಣೆ ಅಥವಾ ವಿಂಗಡಣೆಯನ್ನು ಮಾಡಲಿದ್ದಾರೆ.  ರಜಾದಿನಗಳಲ್ಲಿ ಮಾಡಲಾಗುವ ನೆಮಕಾತಿಗಳಂತೆ ಈ ನೇಮಕಾತಿ ಇರುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಅಮೆಜಾನ್‌ನ ಗೋದಾಮಿನ ಮೇಲ್ವಿಚಾರಣೆ ವಹಿಸಿಕೊಂಡಿರುವ ಅಲಿಸಿಯಾ ಬೊಲ್ಲರ್ ಡೇವಿಸ್ ಕಂಪನಿಯು ಕೆಲ ಆಯ್ದ ನಗರಗಳಲ್ಲಿ 1,000 ಡಾಲರ್ ಸೈನ್-ಆನ್ ಬೋನಸ್ ಅನ್ನು ನೀಡುತ್ತಿದೆ. ಅಲ್ಲಿ ಡೆಟ್ರಾಯಿಟ್, ನ್ಯೂಯಾರ್ಕ್, ಫಿಲಡೆಲ್ಫಿಯಾ ಮತ್ತು ಕೆಂಟುಕಿಯ ಲೂಯಿಸ್‌ವಿಲ್ಲೆಯಲ್ಲಿ ಕೆಲಸಗಾರರನ್ನು ಹುಡುಕುವುದು ಕಷ್ಟವಾಗುತ್ತದೆ. ಅಂತಹ ನಗರಗಳಲ್ಲಿ ಅಮೆಜಾನ್‌ನ ಆರಂಭಿಕ ವೇತನ ಗಂಟೆಗೆ 15 ಡಾಲರ್ (1102.63) ರಷ್ಟಿದೆ.

ಸಿಯಾಟಲ್‌ನ ಆನ್‌ಲೈನ್ ಕಂಪನಿ ವ್ಯವಹಾರವು ವೇಗವಾಗಿ ಬೆಳೆಯುತ್ತಿದೆ. ಏಪ್ರಿಲ್ ಮತ್ತು ಜೂನ್ ಅವಧಿಯಲ್ಲಿ ಕಂಪನಿಯು ದಾಖಲೆಯ ಲಾಭ ಮತ್ತು ಗಳಿಕೆಯನ್ನು ದಾಖಲಿಸಿದೆ. ಕರೋನೊ ವೈರಸ್ ಸಾಂಕ್ರಾಮಿಕ ಸಮಯದಲ್ಲಿ, ಜನರು ದಿನಸಿ ಮತ್ತು ಇತರ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಲು ಆದ್ಯತೆ ನೀಡುತ್ತಿದ್ದಾರೆ.

ಆರ್ಡರ್ ಗಳ ಪೂರೈಕೆಗೆ ಕಂಪನಿಯು ಈ ವರ್ಷ 1,75,000 ಜನರನ್ನು ನೇಮಿಸಿಕೊಳ್ಳಲು ಈಗಾಗಲೇ ನಿರ್ಧರಿಸಿದೆ. ಕಳೆದ ವಾರ ಈ ಕುರಿತು ಹೇಳಿಕೆ ನೀಡಿದ್ದ ಕಂಪನಿಯು 33,000 ಕಾರ್ಪೊರೇಟ್ ಮತ್ತು ತಂತ್ರಜ್ಞಾನ ಉದ್ಯೋಗಗಳನ್ನು ಹೊಂದಿದ್ದು, ಅವುಗಳ ನೇಮಕಾತಿ ನಡೆಸುವ ಅವಶ್ಯಕತೆ ಇದೆ ಎಂದು ಹೇಳಿತ್ತು ತನ್ನ 100 ಹೊಸ ಗೋದಾಮುಗಳು, ಪ್ಯಾಕೇಜ್ ವಿಂಗಡಣೆ ಕೇಂದ್ರಗಳು ಮತ್ತು ಇತರ ಸ್ಥಳಗಳಲ್ಲಿ ಇದೀಗ ಮತ್ತೆ ಹೆಚ್ಚಿನ ಜನರ ಆವಶ್ಯಕತೆ ಇದೆ ಎಂದು ಕಂಪನಿ ಹೇಳಿದೆ.

Trending News