ಭಾರೀ ಮಳೆ ಹಿನ್ನೆಲೆ: ಆಗಸ್ಟ್ 4ರವರೆಗೆ ಅಮರನಾಥ ಯಾತ್ರೆ ಸ್ಥಗಿತ

ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು, ವಿಶೇಷವಾಗಿ ಜಮ್ಮು ಪ್ರದೇಶದಲ್ಲಿ ಕಲ್ಲುಗಳು ಮತ್ತು ಭೂಕುಸಿತಗಳ ಕಾರಣದಿಂದಾಗಿ ಯಾತ್ರೆಯನ್ನು ಆಗಸ್ಟ್ 4, 2019ರವರೆಗೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಎಸ್‌ಎಎಸ್‌ಬಿ ವಕ್ತಾರರು ತಿಳಿಸಿದ್ದಾರೆ.

Last Updated : Jul 31, 2019, 06:05 PM IST
ಭಾರೀ ಮಳೆ ಹಿನ್ನೆಲೆ: ಆಗಸ್ಟ್ 4ರವರೆಗೆ ಅಮರನಾಥ ಯಾತ್ರೆ ಸ್ಥಗಿತ title=

ಶ್ರೀನಗರ: ಭಾರತೀಯ ಹವಾಮಾನ ಇಲಾಖೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂದಿನ ಕೆಲವು ದಿನಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಭೂಕುಸಿತ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಆಗಸ್ಟ್ 4ರವರೆಗೆ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲು ದೇವಾಲಯದ ಆಡಳಿತ ಮಂಡಳಿ ನಿರ್ಧರಿಸಿದೆ.

"ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು, ವಿಶೇಷವಾಗಿ ಜಮ್ಮು ಪ್ರದೇಶದಲ್ಲಿ ಕಲ್ಲುಗಳು ಮತ್ತು ಭೂಕುಸಿತಗಳ ಕಾರಣದಿಂದಾಗಿ ಯಾತ್ರೆಯನ್ನು ಆಗಸ್ಟ್ 4, 2019ರವರೆಗೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ" ಎಂದು ಎಸ್‌ಎಎಸ್‌ಬಿ ವಕ್ತಾರರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಾದ್ಯಂತ ಮುಂದಿನ ಕೆಲವು ದಿನಗಳವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದು ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ವಿಶೇಷವಾಗಿ ರಾಂಬನ್ ಮತ್ತು ಬನಿಹಾಲ್ ನಡುವಿನ ಮಾರ್ಗದಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಯಾತ್ರೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

Trending News