ಹವಾಮಾನ ವೈಪರಿತ್ಯದಿಂದ ಮತ್ತೆ ಸ್ಥಗಿತಗೊಂಡ ಅಮರನಾಥ ಯಾತ್ರೆ

ಅಹಿತಕರ ವಾತಾವರಣದಿಂದಾಗಿ ಅಮರನಾಥ ಯಾತ್ರೆ ಸ್ಥಗಿತಗೊಳಿಸಿದ್ದು, ಗುರುವಾರ ಕಾಶ್ಮೀರ ಕಣಿವೆಯ ಕಡೆ ಹೋಗಲು ಯಾತ್ರಾರ್ಥಿಗಳಿಗೆ ನಿರ್ಬಂಧ ವಿಧಿಸಲಾಗಿದೆ.

Last Updated : Jul 5, 2018, 10:07 AM IST
ಹವಾಮಾನ ವೈಪರಿತ್ಯದಿಂದ ಮತ್ತೆ ಸ್ಥಗಿತಗೊಂಡ ಅಮರನಾಥ ಯಾತ್ರೆ title=

ಜಮ್ಮು: ಅಹಿತಕರ ವಾತಾವರಣದಿಂದಾಗಿ ಅಮರನಾಥ ಯಾತ್ರೆ ಸ್ಥಗಿತಗೊಳಿಸಿದ್ದು, ಗುರುವಾರ ಕಾಶ್ಮೀರ ಕಣಿವೆಯ ಕಡೆ ಹೋಗಲು ಯಾತ್ರಾರ್ಥಿಗಳಿಗೆ ನಿರ್ಬಂಧ ವಿಧಿಸಲಾಗಿದೆ.

ಪೊಲೀಸರ ಪ್ರಕಾರ ಮಂಗಳವಾರ ಸಂಭವಿಸಿದ ಭೂಕುಸಿತದ ಹಿನ್ನಲೆಯಲ್ಲಿ ಬುಧವಾರದಿಂದ ಗುಹಾ ಮಂದಿರಕ್ಕೆ ಭಗವತಿ ನಗರ್ ಯಾತ್ರಿ ನಿವಾಸದಿಂದ ಯಾವ ಯಾತ್ರಾರ್ಥಿಗಳೂ ಹೋಗುತ್ತಿಲ್ಲ.

ಆದಾಗ್ಯೂ, ಎರಡು ಮೂಲ ಶಿಬಿರಗಳಲ್ಲಿ - ಬಾತಲ್ ಮತ್ತು ಪಹಲ್ಗಾಂನಿಂದ ಬುಧವಾರ ಪವಿತ್ರ ಗುಹೆಯವರೆಗೆ 'ಯತ್ರಿಗಳಿಗೆ ಸೀಮಿತ ಹೆಲಿಕಾಪ್ಟರ್ ಸೇವೆಗಳಿವೆ ಎಂದು ಅಧಿಕೃತ ತಿಳಿಸಿದ್ದಾರೆ.

ಜೂನ್ 28 ರಿಂದ ಪ್ರಾರಂಭವಾದ ಈ ಯಾತ್ರೆಯಲ್ಲಿ ಇಲ್ಲಿಯವರೆಗೆ 60,752 ಯಾತ್ರಿಕರು ಈ ಯಾತ್ರೆಯನ್ನು ಮಾಡಿದ್ದಾರೆ.

Trending News