Amarnath Yatra 2021: ಅಮರನಾಥ್ ದರ್ಶನಾರ್ಥಿಗಳಿಗೊಂದು ಕಹಿ ಸುದ್ದಿ, ಸತತ ಎರಡನೇ ವರ್ಷ ಕೂಡ ಯಾತ್ರೆ ರದ್ದು

Amarnath Yatra 2021: ಕೊರೊನಾ ವೈರಸ್ ನ ಮೂರನೇ ಅಲೆಯ (Coronavirus Third Wave) ಭೀತಿಯ ಹಿನ್ನೆಲೆ ಆಡಳಿತ ಈ ಬಾರಿಯೂ  ಕೂಡ ಪ್ರಸಿದ್ಧ ಅಮರನಾಥ ಯಾತ್ರೆಯನ್ನು (Amarnath Yatra 2021 ) ರದ್ದುಗೊಳಿಸಿದೆ.  ಆದರೆ, ಭಕ್ತಾದಿಗಳು ಆನ್ಲೈನ್ ಮೂಲಕ ಬಾಬಾ ಅಮರನಾಥ್ (Baba Amarnath) ದರ್ಶನವನ್ನು ಪಡೆಯಬಹುದಾಗಿದೆ.

Written by - Nitin Tabib | Last Updated : Jun 21, 2021, 06:56 PM IST
  • ಅಮರನಾಥ್ ಯಾತ್ರೆಯನ್ನು ರದ್ದುಗೊಳಿಸಲು ಜಮ್ಮು- ಕಾಶ್ಮೀರ ಸರ್ಕಾರ ನಿರ್ಧಾರ.
  • ಜನರ ಪ್ರಾಣ ಉಳಿಸುವುದು ಮುಖ್ಯ ಎಂದ ರಾಜ್ಯದ ಉಪರಾಜ್ಯಪಾಲ.
  • ಆದರೆ ಜನರು ಆನ್ಲೈನ್ ಮೂಲಕ ಬಾಬಾ ಬರ್ಫಾನಿ ದರ್ಶನ ಪಡೆಯಬಹುದು.
Amarnath Yatra 2021: ಅಮರನಾಥ್ ದರ್ಶನಾರ್ಥಿಗಳಿಗೊಂದು ಕಹಿ ಸುದ್ದಿ, ಸತತ ಎರಡನೇ ವರ್ಷ ಕೂಡ ಯಾತ್ರೆ ರದ್ದು title=
Amarnath Yatra 2021 (File Photo)

ನವದೆಹಲಿ: Amarnath Yatra 2021 - ಅಮರನಾಥ ಯಾತ್ರೆ (Amarnath Yatra 2021) ಪ್ರಾರಂಭಕ್ಕೆ ಕಾಯುತ್ತಿರುವ ಯಾತ್ರಿಕರಿಗೆ ಕಹಿಸುದ್ದಿಯೊಂದು ಪ್ರಕಟವಾಗಿದೆ. ಕರೋನವೈರಸ್ ಸೋಂಕಿನ ಮೂರನೇ ಅಲೆಯ (Coronavirus Third Wave) ಭಯದ ಹಿನ್ನೆಲೆ, ಅಮರನಾಥ ದೇವಾಲಯ ಮಂಡಳಿಯು (Amarnath Shrine Board) ಈ ವರ್ಷವೂ ಅಮರನಾಥ ಯಾತ್ರೆ ರದ್ದುಗೊಳಿಸಲು ನಿರ್ಧರಿಸಿದೆ. ಆದರೆ, ಭಕ್ತರು ಬಾಬಾ ಬರ್ಫಾನಿ (Baba Barfani) ದರ್ಶನವನ್ನು ಆನ್‌ಲೈನ್‌ನಲ್ಲಿ ಪಡೆಯಬಹುದಾಗಿದೆ. ಕರೋನಾ ಸೋಂಕಿನಿಂದಾಗಿ 2020 ರಲ್ಲಿಯೂ ಕೂಡ ಅಮರನಾಥ ಯಾತ್ರೆ ರದ್ದುಗೊಳಿಸಲಾಗಿದೆ.

ಇದನ್ನೂ ಓದಿ- IRCTC New feature - ಕ್ಯಾನ್ಸಲ್ ಮಾಡಿದ ರೈಲು ಟಿಕೆಟ್ ಗೆ ಇನ್ಮುಂದೆ ತಕ್ಷಣ ರಿಫಂಡ್ ಪಡೆಯಿರಿ, ಹೇಗೆ ಅಂತಿರಾ? ಈ ಸುದ್ದಿ ಓದಿ

ಈ ಯಾತ್ರೆಯಲ್ಲಿ ದೇಶದ ವಿವಿಧ ಭಾಗಗಳಿಂದ ಭಕ್ತರು ಭಾಗವಹಿಸುತ್ತಾರೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಕರೋನಾ ಸೋಂಕು ಹರಡುವ ಅಪಾಯವಿರುತ್ತದೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಕ್ತರು ಮನೆಯಲ್ಲಿ ಸುರಕ್ಷಿತವಾಗಿರುವುದು ಮುಖ್ಯವಾಗಿದೆ. ಪ್ರತಿವರ್ಷದಂತೆ ಎಲ್ಲಾ ಸಾಂಪ್ರದಾಯಿಕ ಆಚರಣೆಗಳು ಮೊದಲಿನಂತೆ ಪೂರ್ಣಗೊಳ್ಳುತ್ತವೆ ಎಂದು ಮಂಡಳಿ ಹೇಳಿದೆ. ಅಮರನಾಥ ದೇವಾಲಯ ಮಂಡಳಿಯು ಕೋಟಿ ಭಕ್ತರ ಭಾವನೆಗಳನ್ನು ಅರ್ಥಮಾಡಿಕೊಂಡಿದೆ ಮತ್ತು ಇದನ್ನು ಗಮನದಲ್ಲಿಟ್ಟುಕೊಂಡು, ಬೆಳಿಗ್ಗೆ ಮತ್ತು ಸಂಜೆ ಆರತಿಯ ನೇರ ದರ್ಶನಕ್ಕೆ ವ್ಯವಸ್ಥೆ ಮಾಡಲು ಮಂಡಳಿಯು ನಿರ್ಧರಿಸಿದೆ. ಎರಡೂ ಆರತಿಗಳ ನೇರ ದರ್ಶನಕ್ಕೆ ದೈನಂದಿನ ವ್ಯವಸ್ಥೆ ಮಾಡಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.

ಇದನ್ನೂ ಓದಿ-International Yoga Day 2021: PM Modiಯಿಂದ mYoga App ಬಿಡುಗಡೆ

'ಜನರ ಪ್ರಾಣಉಳಿಸುವುದು ಮುಖ್ಯ'
ಜಮ್ಮು-ಕಾಶ್ಮೀರದ ಉಪರಾಜ್ಯಪಾಲರಾಗಿರುವ ಮನೋಜ್ ಸಿನ್ಹಾ ಅವರ ಕಚೇರಿಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಟ್ವೀಟ್ ಮಾಡಲಾಗಿದ್ದು, ' ಕೊವಿಡ್-19 ಮಹಾಮಾರಿಯ ಹಿನ್ನೆಲೆ ಅಮರ್ನಾಥ್ ಯಾತ್ರೆಯನ್ನು ರದ್ದುಗೊಳಿಸಲಾಗಿದೆ. ಶ್ರಾಯಿನ್ ಬೋರ್ಡ್ ಸದಸ್ಯರ ಜೊತೆಗಿನ ಸುದೀರ್ಘ ಚರ್ಚೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಈ ಬಾರಿಯೂ ಕೂಡ ಯಾತ್ರೆ ಪ್ರತಿಕಾತ್ಮಕವಾಗಿರಲಿದೆ. ಆದರೆ, ಎಲ್ಲಾ ರೀತಿಯ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಕಾರ್ಯಗಳನ್ನು ಕಳೆದ ವರ್ಷದಂತೆಯೇ ನೆರವೇರಿಸಲಾಗುವುದು. ಪ್ರಸ್ತುತ ಪರಿಸ್ಥಿತಿಯಲ್ಲಿ ಜನರ ಪ್ರಾಣ ರಕ್ಷಣೆಗೆ ಆದ್ಯತೆ ನೀಡುವ ಅವಶ್ಯಕತೆ ಇದೆ. ಹೀಗಿರುವಾಗ ಈ ಬಾರಿ ತೀರ್ಥಯಾತ್ರೆ ಆಯೋಜಿಸುವುದು ಉಚಿತವಲ್ಲ' ಎನ್ನಲಾಗಿದೆ.

ಅಮಿತ್ ಷಾ ಜೊತೆ ಭದ್ರತೆಯ ಕುರಿತು ಸಭೆ ನಡೆಸಲಾಗಿತ್ತು
ಇದಕ್ಕೂ ಮೊದಲು ಜಮ್ಮು ಮತ್ತು ಕಾಶ್ಮೀರದ LG ಮನೋಜ್ ಸಿನ್ಹಾ, ಅಭಿವೃದ್ಧಿಯ ಹೆಜ್ಜೆಗಳನ್ನು ಹೊರತುಪಡಿಸಿ, ಜಮ್ಮು ಮತ್ತು ಕಾಶ್ಮೀರದದಲ್ಲಿ ಭದ್ರತೆಯನ್ನು ಪರಿಶೀಲಿಸುವ ಸಲುವಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕರೆದಿರುವ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊಭಾಲ್, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಕೇಂದ್ರ ಸರ್ಕಾರ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯಾಡಳಿತದ ಉನ್ನತ ಭದ್ರತಾ ಹಾಗೂ ಗುಪ್ತಚರ ವಿಭಾಗದ ಅಧಿಕಾರಿಗಳು ಶಾಮೀಲಾಗಿದ್ದರು. ಮೂಲಗಳು ನೀಡಿರುವ ವರದಿಗಳ ಪ್ರಕಾರ, ಈ ಸಭೆಯಲ್ಲಿ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಷಾ ಅವರುಗೆ ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರಸ್ತುತ ಸುರಕ್ಷತೆಯ ಸ್ಥಿತಿಗತಿಗಳು ಹಾಗೂ ಅಲ್ಲಿ ಮಾಡಲಾಗುತ್ತಿರುವ ಭದ್ರತಾ ಉಪಾಯಗಳ ಕುರಿತು ಮಾಹಿತಿ ನೀಡಲಾಗಿದೆ. ಇದಲ್ಲದೆ ಪಾಕಿಸ್ತಾನಕ್ಕೆ ಹೊಂದಿಕೊಂಡಂತೆ ಇರುವ ಅಂತಾರಾಷ್ಟ್ರೀಯ ಗಡಿಭಾಗದ ಸ್ಥಿತಿಯ ಕುರಿತು ಕೂಡ ಮಾಹಿತಿ ಒದಗಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ-Big Expose: 1 ಸಾವಿರ ಜನರನ್ನು ಮತಾಂತರಗೊಳಿಸಿದ ಆರೋಪದಡಿ ಇಬ್ಬರನ್ನು ಬಂಧಿಸಿದ ATS ಅಧಿಕಾರಿಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News