ಮೇ 4 ರಿಂದ ದೇಶೀಯ, ಜೂನ್ 1 ರಿಂದ ಅಂತರರಾಷ್ಟ್ರೀಯ ಬುಕಿಂಗ್ ಮುಕ್ತಗೊಳಿಸಿದ ಏರ್ ಇಂಡಿಯಾ

ಆಯ್ದ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಕ್ರಮವಾಗಿ ಮೇ 4 ಮತ್ತು ಜೂನ್ 1 ರಿಂದ ಬುಕಿಂಗ್ ತೆರೆಯುವುದಾಗಿ ಏರ್ ಇಂಡಿಯಾ ಶನಿವಾರ ಪ್ರಕಟಿಸಿದೆ.

Last Updated : Apr 18, 2020, 06:11 PM IST
 ಮೇ 4 ರಿಂದ ದೇಶೀಯ, ಜೂನ್ 1 ರಿಂದ ಅಂತರರಾಷ್ಟ್ರೀಯ ಬುಕಿಂಗ್ ಮುಕ್ತಗೊಳಿಸಿದ ಏರ್ ಇಂಡಿಯಾ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಆಯ್ದ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಕ್ರಮವಾಗಿ ಮೇ 4 ಮತ್ತು ಜೂನ್ 1 ರಿಂದ ಬುಕಿಂಗ್ ತೆರೆಯುವುದಾಗಿ ಏರ್ ಇಂಡಿಯಾ ಶನಿವಾರ ಪ್ರಕಟಿಸಿದೆ.

"ಮೇ 4, 2020 ರಿಂದ ಆಯ್ದ ದೇಶೀಯ ವಿಮಾನಗಳಿಗಾಗಿ ಬುಕಿಂಗ್ ಮತ್ತು ಜೂನ್ 1, 2020 ರಿಂದ ಪ್ರಯಾಣಕ್ಕಾಗಿ ಅಂತರರಾಷ್ಟ್ರೀಯ ವಿಮಾನಗಳಿಗಾಗಿ ಬುಕಿಂಗ್ ಮುಕ್ತವಾಗಿದೆ" ಎಂದು ಅದು ಹೇಳಿದೆ.

ಕರೋನವೈರಸ್ ಕಾಯಿಲೆಯ ಹರಡುವಿಕೆ ಹಿನ್ನಲೆಯಲ್ಲಿ ಪ್ರಸ್ತುತ ಮೇ 3 ರವರೆಗೆ ರಾಷ್ಟ್ರವ್ಯಾಪಿ ಲಾಕ್‌ಡೌನ್  ಜಾರಿಯಲ್ಲಿದೆ.

ಲಾಕ್‌ಡೌನ್‌ನ ಮೊದಲ ಹಂತವು ಮಾರ್ಚ್ 25 ರಿಂದ ಏಪ್ರಿಲ್ 14 ರವರೆಗೆ ಇತ್ತು. ಈ ಅವಧಿಯಲ್ಲಿ ಎಲ್ಲಾ ದೇಶೀಯ ಮತ್ತು ಅಂತರರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ.

ಏಪ್ರಿಲ್ 3 ರಂದು, ಏರ್ ಇಂಡಿಯಾವು ತಿಂಗಳ ಅಂತ್ಯದವರೆಗೆ ದೇಶೀಯ ಮತ್ತು ಅಂತರರಾಷ್ಟ್ರೀಯ ಬುಕಿಂಗ್ ಅನ್ನು ಸ್ಥಗಿತಗೊಳಿಸಿತ್ತು.

Trending News