ರೈತರ ಜೊತೆ ಕುಳಿತು ಮಾತನಾಡಿ: ಪ್ರಧಾನಿ ಮೋದಿಗೆ ಪ್ರಕಾಶ್ ರೈ ಸಲಹೆ

ಸಾಮಾಜಿಕ ಹೋರಾಟಗಾರರಾಗಿಯೂ ಗುರುತಿಸಿಕೊಂಡಿರುವ ಪ್ರಕಾಶ್ ರೈ ಇತ್ತೀಚಿನ ವರ್ಷಗಳಲ್ಲಿ JustAsking ಎಂಬ ಅಭಿಯಾನವನ್ನು ನಡೆಸುತ್ತಿದ್ದಾರೆ.‌ 

Written by - Yashaswini V | Last Updated : Dec 14, 2020, 11:25 AM IST
  • ರೈತರ ಪ್ರತಿಭಟನೆಗೆ ಬಬಲ ಸೂಚಿಸಿರುವ‌ ಪ್ರಕಾಶ ರೈ
  • ಸಾಮಾಜಿಕ ಹೋರಾಟಗಾರರಾಗಿಯೂ ಗುರುತಿಸಿಕೊಂಡಿರುವ ಪ್ರಕಾಶ್ ರೈ ಇತ್ತೀಚಿನ ವರ್ಷಗಳಲ್ಲಿ JustAsking ಎಂಬ ಅಭಿಯಾನವನ್ನು ನಡೆಸುತ್ತಿದ್ದಾರೆ.‌
ರೈತರ ಜೊತೆ ಕುಳಿತು ಮಾತನಾಡಿ: ಪ್ರಧಾನಿ ಮೋದಿಗೆ ಪ್ರಕಾಶ್ ರೈ ಸಲಹೆ title=

ಬೆಂಗಳೂರು: ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ಮೂರು ಕೃಷಿ ಕಾನೂನುಗಳು ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದ್ದು ಅವುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಕೃಷಿ ಅಲ್ಲದೆ ಬೇರೆ ಸಮುದಾಯದವರು ಕೂಡ ದನಿ ಎತ್ತುತ್ತಿದ್ದಾರೆ. ಈಗ ಆ ಸರದಿ ಚಲನಚಿತ್ರ ನಟ ಪ್ರಕಾಶ್ ರೈ (Prakash Raj) ಅವರದು.

ರೈತರ ಪಾಲಿಗೆ ಮರಣಶಾಸನವಾಗಿ ಪರಿಣಮಿಸಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆ ಕುಳಿತು ಮಾತನಾಡಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರಿಗೆ ಕೃಷಿಕರೂ ಆದ ನಟ ಪ್ರಕಾಶ್ ರೈ ಸಲಹೆ ನೀಡಿದ್ದಾರೆ.

ಸಾಮಾಜಿಕ ಹೋರಾಟಗಾರರಾಗಿಯೂ ಗುರುತಿಸಿಕೊಂಡಿರುವ ಪ್ರಕಾಶ್ ರೈ ಇತ್ತೀಚಿನ ವರ್ಷಗಳಲ್ಲಿ JustAsking ಎಂಬ ಅಭಿಯಾನವನ್ನು ನಡೆಸುತ್ತಿದ್ದಾರೆ.‌ 'JustAsking' ಎಂದರೆ ಆಳುವವರನ್ನು ಕೇಳು, ಪ್ರಶ್ನೆ ಮಾಡು ಎಂದು ಅರ್ಥ. ಈಗ ರೈತರ ಪ್ರತಿಭಟನೆಗೆ ಬಬಲ ಸೂಚಿಸಿರುವ‌ ಪ್ರಕಾಶ ರೈ  #JustAsking #FarmersProstests #FarmLaws #WeUnitedForFarmers ಎಂಬ ಹ್ಯಾಷ್ ಟ್ಯಾಗ್ ಬಳಸಿದ್ದಾರೆ.

Farmers Protest: ಸಿಂಗು ಗಡಿಯಲ್ಲಿಂದು ರೈತರ ಉಪವಾಸ ಸತ್ಯಾಗ್ರಹ

ಅಲ್ಲದೆ ಬಲವಂತವಾಗಿ ಹೇರಿರುವ ಕೃಷಿ ಕಾನೂನುಗಳನ್ನು ವಾಪಸ್ ಪಡೆಯಿರಿ. ರೈತರ ಜೊತೆ ಕುಳಿತು ಚರ್ಚೆ ಮಾಡಿ, ಅವರು ಏನು ಹೇಳುತ್ತಾರೆ ಎಂಬುದನ್ನು ಕೇಳಿ. ರೈತರ ಕಷ್ಟವನ್ನು ಅರಿಯಿರಿ, ವಾಸ್ತವವನ್ನು ತಿಳಿಯಿರಿ. ಈ ಮೂಲಕ ರೈತರ ವಿಶ್ವಾಸವನ್ನು ಗಳಿಸಿ ಎಂದು ಪ್ರಧಾನಿ ಮೋದಿಗೆ ನಟ ಪ್ರಕಾಶ್ ರೈ ಸಲಹೆ ನೀಡಿದ್ದಾರೆ.

ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಈಗಾಗಲೇ ಹಲವು ಸೆಲಬ್ರಿಟಿಗಳು ಬೆಂಬಲ ಸೂಚಿಸಿದ್ದಾರೆ. ಪ್ರಶಸ್ತಿಗಳನ್ನು ವಾಪಸ್ ಮಾಡಿದ್ದಾರೆ. ನಿನ್ನೆ ಚಂಡೀಗಢದ ಕಾರಾಗೃಹಗಳ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (DIG) ಲಖ್ವಿಂದರ್ ಸಿಂಗ್ ಜಖರ್ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Aravind Kejriwal) ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. 

ರೈತರನ್ನು ಬೆಂಬಲಿಸಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ

ಈಗ ಪ್ರಕಾಶ್ ರೈ ರೈತರ ಜೊತೆ ಮಾತನಾಡುವಂತೆ ಪ್ರಧಾನಿ ಮೋದಿಗೆ ಸಲಹೆ ನೀಡಿದ್ದಾರೆ. ಪ್ರಕಾಶ್ ರೈ ಹಿಂದೆ ಕೂಡ ಹಲವು ಸಂದರ್ಭಗಳಲ್ಲಿ JustAsking ಎಂಬ ಅಭಿಯಾನದ ಮೂಲಕ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದರು.

Trending News