ಐಪಿಎಲ್ ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದು ನಿಜ ಎಂದ ಅರ್ಬಾಜ್ ಖಾನ್

    

Last Updated : Jun 2, 2018, 02:49 PM IST
 ಐಪಿಎಲ್ ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದು ನಿಜ ಎಂದ ಅರ್ಬಾಜ್ ಖಾನ್ title=

ನವದೆಹಲಿ: ಐಪಿಎಲ್ ಟೂರ್ನಿಯಲ್ಲಿ ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದು ನಿಜ ಎಂದು ಬಾಲಿವುಡ್ ನಟ ಅರ್ಬಾಜ್ ಖಾನ್ ಅವರು ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಥಾಣೆಯ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಟ ಸಲ್ಮಾನ್ ಖಾನ್ ಅವರ ಸಹೋದರಾಗಿರುವ ಅರ್ಬಾಜ್ ಅವರು ವಿಚಾರಣೆಗಾಗಿ ಶನಿವಾರದಂದು ಪೋಲೀಸರ ಎದುರು ಹಾಜರಾಗಿ ತಾವು ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದನ್ನು ಒಪ್ಪಿಕೊಂಡಿದ್ದಾರೆ. ಪೊಲೀಸರು ಮಂಗಳವಾರದಂದು ಬಂಧಿಸಿರುವ ಐಪಿಎಲ್  ಬುಕ್ಕಿ  ಸೋನು ಜಲಾನ್ ನನ್ನು ವಿಚಾರಿಸಿದಾಗ ಅವರು ಅರ್ಬಾಜ್ ಖಾನ್ ರವರ ಹೆಸರನ್ನು ಪ್ರಸ್ತಾಪಿಸಿದ್ದರು ಈ ಹಿನ್ನಲೆಯಲ್ಲಿ ಪೊಲೀಸರು ಅರ್ಬಾಜ್ ನನ್ನು ತನಿಖೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.

ಪೊಲೀಸರು ಬಂಧಿಸಿರುವ ಬುಕ್ಕಿ ಸೋನು ಜಲಾನ್ ಅಲಿಯಾಸ್ ಸೋನು ಬಾಟ್ಲಾ ಎನ್ನುವವನು ಹಲವಾರು ಭೂಗತ ದೊರೆಗಳ ನಂಟನ್ನು ಸಹ ಹೊಂದಿದ್ದಾನೆ ಎಂದು ತಿಳಿದುಬಂದಿದೆ. ಈ ಐಪಿಎಲ್ ಬೆಟ್ಟಿಂಗ್ ವಿಚಾರವಾಗಿ ಕಳೆದ ಆರು ವರ್ಷಗಳಿಂದ  ತನಿಖೆ ನಡೆಯುತ್ತಿದ್ದು  ಕನಿಷ್ಠ 500 ರಿಂದ 600 ಕೋಟಿಗಳವರೆಗೆ  ಬೆಟ್ಟಿಂಗ್ ನಡೆದಿದೆ ಎಂದು ತಿಳಿದುಬಂದಿದೆ. 

Trending News