ರೈತರಿಗೆ Aatmanirbhar ಆಗಲು Modi Govt ವತಿಯಿಂದ 1 ಲಕ್ಷ ಕೋಟಿ ರೂ. Agri Infra Fundಗೆ ಅನುಮೋದನೆ

ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಬುಧವಾರ ರೈತರಿಗಾಗಿ ಆಗ್ರಿ ಇನ್ಫ್ರಾ ಫಂಡ್ (Agri Infra Fund) ಪ್ರಕಟಿಸಿದೆ. 

Last Updated : Jul 8, 2020, 08:22 PM IST
ರೈತರಿಗೆ Aatmanirbhar ಆಗಲು Modi Govt ವತಿಯಿಂದ 1 ಲಕ್ಷ ಕೋಟಿ ರೂ. Agri Infra Fundಗೆ ಅನುಮೋದನೆ title=

ನವದೆಹಲಿ: ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಬುಧವಾರ ರೈತರಿಗಾಗಿ ಆಗ್ರಿ ಇನ್ಫ್ರಾ ಫಂಡ್ (Agri Infra Fund) ಪ್ರಕಟಿಸಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅವರ ನಿವಾಸದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಕೃಷಿ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ 1 ಲಕ್ಷ ಕೋಟಿ ರೂ.ಗಳ ಕೃಷಿ ಮೂಲಸೌಕರ್ಯ ನಿಧಿಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಈ ನಿಧಿಯ ಬಳಕೆ ಪ್ರಿಮರಿ ಅಗ್ರಿ ಕ್ರೆಡಿಟ್ ಸೊಸೈಟಿ (PAS), ರೈತ ಸಮೂಹಗಳು, FOPಗಳು, ರೈತ ಉದ್ಯಮಿಗಳು, ಸ್ಟಾರ್ಟ್ ಅಪ್ ಗಳು ಹಾಗೂ ಕೃಷಿ ತಂತ್ರಜ್ಞಾನದ ಮೇಲೆ ಕೆಲಸ ಮಾಡುವವರಿಗಾಗಿ ಇರಲಿದೆ.

ವೆಯರ್ ಹೌಸ್
ಈ ನಿಧಿಯ ಅಡಿಯಲ್ಲಿ ಕೋಲ್ಡ್ ಸ್ಟೋರ್ಸ್, ಕೋಲ್ಡ್ ಚೈನ್ ಅಭಿವೃದ್ಧಿ, ವೆಯರ್ ಹೌಸಿಂಗ್, ಪ್ಯಾಕೆಜಿಂಗ್ ಯೂನಿಟ್ ಗಳು, ಬೆಳೆಗಳ ಇ-ಮಾರ್ಕೆಟಿಂಗ್ ಪ್ಲಾಟ್ಫಾರ್ಮ್ ಸಹಾಯ ನೀಡಲಾಗುತ್ತಿದೆ. ಈ ನಿಧಿಯ ಬಳಕೆ PPP ಪ್ರಾಜೆಕ್ಟ್ ಗಳನ್ನು ಅಭಿವೃದ್ಧಿಗೊಳಿಸಲು ಮಾಡಲಾಗುವುದು ಎಂದು ತೋಮರ್ ಹೇಳಿದ್ದಾರೆ. ಇದರಲ್ಲಿ 2 ಕೋಟಿ ರೂ.ಗಳ ವರೆಗೆ ಸಾಲ ಸೌಲಭ್ಯ ಇರಲಿದೆ. ಅಷ್ಟೇ ಅಲ್ಲ 2 ಕೋಟಿ ರೂ.ಗಿಂತ ಹೆಚ್ಚಿನ ಸಾಲಕ್ಕೂ ಕೂಡ ಅನುಮೋದನೆ ನೀಡಲಾಗುವುದು. ಆದರೆ, ಕೇವಲ 2 ಕೋಟಿ ರೂ.ಗಳ ವರೆಗಿನ ಸಾಲಕ್ಕೆ ಕ್ರೆಡಿಟ್ ಗ್ಯಾರಂಟಿ ಹಾಗೂ ಶೇ.3 ರಷ್ಟು ಬಡ್ಡಿ ಸಬ್ಸಿಡಿ ಮಾತ್ರ ನೀಡಲಾಗುವದು.

ಆನ್ಲೈನ್ ಪ್ಲಾಟ್ಫಾರ್ಮ್
ಕೃಷಿ ಸಚಿವ ತೋಮರ್ ಹೇಳಿಕೆಯ ಪ್ರಕಾರ, ಈ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ರಚಿಸಲಾಗುವುದು. ಈ ಯೋಜನೆಗಳ  ಅವಧಿ 10 ವರ್ಷಗಳು ಇರಲಿದೆ. ಇದು ಕೃಷಿಯಲ್ಲಿ ಖಾಸಗಿ ಹೂಡಿಕೆ ಹೆಚ್ಚಿಸಲಿದೆ. ಆಹಾರ ಧಾನ್ಯಗಳ ಕ್ಷೇತ್ರದಲ್ಲಿ ದೇಶವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಎಂದು ತೋಮರ್ ಹೇಳಿದ್ದಾರೆ. ಈ ಪ್ಯಾಕೇಜ್ ರೈತರಿಗೆ ಹಾನಿಯಾಗುವುದನ್ನು ತಪ್ಪಿಸಲಿದೆ.

Trending News