ನವದೆಹಲಿ: ಆರುಷಿ ಪ್ರಕರಣದಲ್ಲಿ ಇತ್ತೀಚಿಗೆ ಅವಳ ಪೋಷಕರಾದ ರಾಜೇಶ್ ಮತ್ತು ನುಪುರ್ ತಳವಾರ್ ಮೇಲಿನ ಪ್ರಕರಣಗಳನ್ನು ಖುಲಾಸೆಗೊಳಿಸಿ ಅವರನ್ನು ನಿರ್ದೋಷಿ ಎಂದು ಅಲಹಾಬಾದ್ ಉಚ್ಚನ್ಯಾಯಾಲಯ ತನ್ನ ಅಂತಿಮ ತೀರ್ಪಿನಲ್ಲಿ ಹೇಳಿದ್ದನ್ನು ನಾವು ಗಮನಿಸಬಹುದು.
ಆದರೆ ಈ ಪ್ರಕರಣ ತಾರ್ಕಿಕ ಅಂತ್ಯ ಕಂಡಿತು ಎಂದು ನಿಟ್ಟಿಸಿರು ಬಿಡುವ ಮೊದಲೇ ಆರುಷಿ ದಂಪತಿಗಳಿಗೆ ಮತ್ತೊಂದು ಕಂಟಕ ಎದುರಾಗಿದೆ. ಕೊಲೆಯಾದ ಹೇಮರಾಜ ನ ಹೆಂಡತಿ ಕುಮಕಲಾ ಬಂಜಾಡೆ ಎನ್ನುವರು ಈ ಅಲಹಾಬಾದ್ ಹೈಕೋರ್ಟ್ನ್ನು ತೀರ್ಪನ್ನು ಪ್ರಶ್ನಿಸಿ ಸುಪ್ರಿಂಕೋರ್ಟ್ ನ ಮೆಟ್ಟಿಲೇರಿದ್ದಾರೆ.
50 ವರ್ಷದ ಈ ಮಹಿಳೆ ಉಚ್ಚ ನ್ಯಾಯಾಲಯದ ತೀರ್ಪು ಮತ್ತು ಅವರ ತನಿಖಾ ವೈಖರಿಯು ಶ್ರೀಮಂತರ ಪ್ರಭಾವಕ್ಕೆ ಒಳಪಟ್ಟಿದೆ ಎಂದು ಆರೋಪಿಸಿ ಈಗ ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ದಾರೆ. ಹಿರಿಯ ವಕೀಲ ಕೆ.ಟಿ.ಎಸ್ ತುಳಸಿ ಹೇಮರಾಜ್ ನ ಪತ್ನಿಯ ಪರವಾಗಿ ಸುಪ್ರಿಂಕೋರ್ಟ್ ನಲ್ಲಿ ವಾದ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
2008 ಮೇ 16 ರಂದು ಅರುಷಿಯನ್ನು ಅವಳ ಮಲಗುವ ಕೊನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಳು. ಈ ಘಟನೆಯ ನಂತರ ಹೇಮರಾಜ್ ದೇಹವು ಈ ತಳವಾರ ದಂಪತಿಯ ಮನೆಯ ಮಹಡಿಯ ಮೇಲೆ ದೊರೆತಿದ್ದು ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿತ್ತು.
ಆನಂತರದ ದಿನಗಳಲ್ಲಿ ಈ ಪ್ರಕರಣವು ರಾಷ್ಟ್ರೀಯ ಮಾದ್ಯಮಗಳಲ್ಲಿ ಹೆಚ್ಚು ಸುದ್ದಿ ಮಾಡಿದ್ದನ್ನು ನಾವು ಗಮನಿಸಬಹುದು. ಮಾಯಾವತಿ ಸರ್ಕಾರ ಅಂತಿಮವಾಗಿ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು. ಒಟ್ಟಿನಲ್ಲಿ ಈ ಪ್ರಕರಣ ಅಂತ್ಯವಾಯಿತು ಎಂದು ತಲ್ವಾರ್ ದಂಪತಿಗಳು ನಿಟ್ಟಿಸಿರು ಬಿಡುವಷ್ಟರಲ್ಲಿ ಮತ್ತೊಮ್ಮೆ ಈ ವಿಚಾರವಾಗಿ ಸರ್ವೋಚ್ಚ ನ್ಯಾಯಾಲಯದ ವಿಚಾರಣೆಯನ್ನು ಈ ಅವರು ಎದುರಿಸಬೇಕಾಗಿರುವುದು ಈಗ ಅನಿವಾರ್ಯವಾಗಿದೆ.