ಜಮ್ಮು-ಕಾಶ್ಮೀರ ಪಂಚಾಯತ್ ಅಸೋಸಿಯೇಶನ್ ನಿಯೋಗದಿಂದ ಇಂದು ಅಮಿತ್ ಶಾ ಭೇಟಿ

ದೆಹಲಿಯ ಗೃಹ ಸಚಿವಾಲಯದಲ್ಲಿ ನಡೆಯಲಿರುವ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸುಮಾರು 100 ಜನರ ನಿಯೋಗ ಅಮಿತ್ ಶಾ ಮತ್ತು ಗೃಹ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಲಿದೆ. 

Last Updated : Sep 3, 2019, 01:04 PM IST
ಜಮ್ಮು-ಕಾಶ್ಮೀರ ಪಂಚಾಯತ್ ಅಸೋಸಿಯೇಶನ್ ನಿಯೋಗದಿಂದ ಇಂದು ಅಮಿತ್ ಶಾ ಭೇಟಿ title=
File Pic, Courtesy: DNA

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಿದ ಅಲ್ಲಿನ ಪಂಚಾಯತ್ ಅಸೋಸಿಯೇಶನ್ ನಿಯೋಗ ಇಂದು ದೆಹಲಿಗೆ ಆಗಮಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ.

ದೆಹಲಿಯ ಗೃಹ ಸಚಿವಾಲಯದಲ್ಲಿ ನಡೆಯಲಿರುವ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸುಮಾರು 100 ಪ್ರತಿನಿಧಿಗಳ ನಿಯೋಗ ಅಮಿತ್ ಶಾ ಮತ್ತು ಗೃಹ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಲಿದೆ. ಈ ನಿಯೋಗದಲ್ಲಿ ಜಮ್ಮು, ಪುಲ್ವಾಮಾ, ಲಡಾಖ್ ಮತ್ತು ಕಾಶ್ಮೀರದ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ ಎನ್ನಲಾಗಿದೆ.

ಸಭೆ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 12ರ ಸುಮಾರಿಗೆ ಜಮ್ಮು ಕಾಶ್ಮೀರ ಪಂಚಾಯತ್ ಸಂಘದ ನಿಯೋಗ ಗೃಹ ಸಚಿವಾಲಯವನ್ನು ತಲುಪಿದ್ದು, ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಲಿದೆ.

Trending News