7th Pay Commission : ಕೇಂದ್ರ ನೌಕರರಿಗೆ ಈ ತಿಂಗಳಿನಿಂದ ಸಿಗಲಿದೆ ಶೇ.28 ಬದಲಿಗೆ ಶೇ.31 ರಷ್ಟು DA ! ಸಂಬಳ ಮತ್ತೆ ಹೆಚ್ಚಾಗುತ್ತದೆಯೇ?

ತುಟ್ಟಿ ಭತ್ಯ ಮತ್ತೆ ಹೆಚ್ಚಿಸಿದ ನಂತರ ಶೇ.3 ರಷ್ಟು DR ಹೆಚ್ಚಾಗುತ್ತದೆ ಅಂದರೆ ಅದು ಶೇ.28 ರ  ಬದಲು ಶೇ.31 ರಷ್ಟು ಹೆಚ್ಚಾಗಿದೆ. ಆದರೆ ಇದನ್ನ ಯಾವಾಗ ಪ್ರಕಟಿಸಲಾಗುವುದು ಎಂಬುದರ ಕುರಿತು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ನೌಕರರ ಸಂಘದಿಂದ ಬೇಡಿಕೆ ಇದೆ,

Written by - Channabasava A Kashinakunti | Last Updated : Sep 4, 2021, 01:57 PM IST
  • ಕೇಂದ್ರ ನೌಕರರ ತುಟ್ಟಿ ಭತ್ಯೆ ಮತ್ತೆ ಹೆಚ್ಚಳ
  • ತುಟ್ಟಿ ಭತ್ಯೆಯು ಶೇ. 3 ರಿಂದ ಶೇ.31 ರಷ್ಟು ಹೆಚ್ಚಳ
  • ಸೆಪ್ಟೆಂಬರ್ ಮಧ್ಯದಲ್ಲಿ ಮತ್ತೆ ಭತ್ಯೆ ಹೆಚ್ಚಾಗಬಹುದು
7th Pay Commission : ಕೇಂದ್ರ ನೌಕರರಿಗೆ ಈ ತಿಂಗಳಿನಿಂದ ಸಿಗಲಿದೆ ಶೇ.28 ಬದಲಿಗೆ ಶೇ.31 ರಷ್ಟು DA ! ಸಂಬಳ ಮತ್ತೆ ಹೆಚ್ಚಾಗುತ್ತದೆಯೇ? title=

ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಮ್ಮೆ ತುಟ್ಟಿ ಭತ್ಯ (DA) ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ. ಈ ಹಿಂದೆ, ಜುಲೈ 1 ರಿಂದ, ಕೇಂದ್ರ ನೌಕರರ ತುಟ್ಟಿ ಭತ್ಯ ಮತ್ತು ಪಿಂಚಣಿದಾರರಿಗೆ ಡಿಯರ್ನೆಸ್ ರಿಲೀಫ್ (DR) ಅನ್ನು ಶೇ.28 ರಷ್ಟು ಹೆಚ್ಚಿಸಿತು. ಇದನ್ನ ಕೇಂದ್ರ ಸರ್ಕಾರವು 17% ರಿಂದ 28% ಗೆ ತುಟ್ಟಿ ಭತ್ಯಯನ್ನು ಹೆಚ್ಚಿಸಿದೆ. ಮತ್ತೊಂದೆಡೆ, 18 ತಿಂಗಳ ಬಾಕಿ ಪಾವತಿಯಾಗದ ಕಾರಣ ಕೇಂದ್ರ ನೌಕರರು ಕೂಡ ಹಿನ್ನಡೆ ಅನುಭವಿಸಿದ್ದಾರೆ.

ತುಟ್ಟಿ ಭತ್ಯ ಮತ್ತೆ ಹೆಚ್ಚಾಗುತ್ತದೆ?

ತುಟ್ಟಿ ಭತ್ಯ ಮತ್ತೆ (DA) ಹೆಚ್ಚಿಸಿದ ನಂತರ ಶೇ.3 ರಷ್ಟು DR ಹೆಚ್ಚಾಗುತ್ತದೆ ಅಂದರೆ ಅದು ಶೇ.28 ರ  ಬದಲು ಶೇ.31 ರಷ್ಟು ಹೆಚ್ಚಾಗಿದೆ. ಆದರೆ ಇದನ್ನ ಯಾವಾಗ ಪ್ರಕಟಿಸಲಾಗುವುದು ಎಂಬುದರ ಕುರಿತು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ನೌಕರರ ಸಂಘದಿಂದ ಬೇಡಿಕೆ ಇದೆ, ಸರ್ಕಾರವು ಶೀಘ್ರದಲ್ಲೇ ಶೇ.3 ರಷ್ಟು ಡಿಯರ್ನೆಸ್ ಭತ್ಯೆಯ ಹೆಚ್ಚಳವನ್ನು ಘೋಷಿಸಬೇಕು, ಇದರಿಂದ ನೌಕರರು ಹಣದುಬ್ಬರದಿಂದ ಸ್ವಲ್ಪ ಪರಿಹಾರವನ್ನು ಪಡೆಯಬಹುದು. AICPI ಸೂಚ್ಯಂಕದ ಡೇಟಾದ ಪ್ರಕಾರ, ಸೂಚ್ಯಂಕ 121.7 ಕ್ಕೆ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ, ಜೂನ್ 2021 ರ ಡಿಯರ್ನೆಸ್ ಭತ್ಯೆಯನ್ನು 3% ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಜೂನ್ 2021 ರ ಸೂಚ್ಯಂಕವು 1.1 ಪಾಯಿಂಟ್‌ಗಳಷ್ಟು ಹೆಚ್ಚಾಗಿದೆ, ಇದು 121.7 ಕ್ಕೆ ತಲುಪಿದೆ.

ಇದನ್ನೂ ಓದಿ : India Post Recruitment 2021: 580 ಹುದ್ದೆಗಳಿಗೆ ಅರ್ಜಿ ಆಹ್ವಾನ, 10ನೇ ತರಗತಿ ಪಾಸಾದವರಿಗೆ ಅವಕಾಶ

ಸೆಪ್ಟೆಂಬರ್‌ನಲ್ಲಿ ಈ ನಿರ್ಧಾರ ತೆಗೆದುಕೊಳ್ಳಬಹುದು

ಜೂನ್ 2021 ರ ತುಟ್ಟಿ ಭತ್ಯೆಯನ್ನು (DA) ಸೆಪ್ಟೆಂಬರ್ ಮಧ್ಯದಲ್ಲಿ ಘೋಷಿಸಬಹುದು ಎಂದು ಅಂದಾಜಿಸಲಾಗಿದೆ. ಇದರ ಮೊತ್ತವನ್ನ ಸೆಪ್ಟೆಂಬರ್ ಸಂಬಳ(Salary)ದೊಂದಿಗೆ ಕೂಡ ನೀಡಬಬಹುದು. ತಮ್ಮಲ್ಲಿ ಒಂದೂವರೆ ವರ್ಷಗಳ ಬಾಕಿಯಿಲ್ಲ ಎಂದು ನೌಕರರ ಸಂಘ ಹೇಳುತ್ತದೆ, ಆದರೆ ಜೂನ್‌ಗೆ ಬಾಕಿ ಭತ್ಯೆಯನ್ನು ನೀಡಿ ಮತ್ತು ಅದನ್ನ ಸೆಪ್ಟೆಂಬರ್‌ನಲ್ಲಿ ಪಾವತಿಸಿದರೆ, ಸರ್ಕಾರವು ಜುಲೈ ಮತ್ತು ಆಗಸ್ಟ್‌ನಲ್ಲಿ ಎರಡು ತಿಂಗಳ ಬಾಕಿಯನ್ನು ನೀಡಬೇಕು. ಒಂದೂವರೆ ವರ್ಷಗಳ ಬಾಕಿ ಪಾವತಿಸಲು ಸರ್ಕಾರ ನಿರಾಕರಿಸಿದೆ. ಜೂನ್ 2021 ರಲ್ಲಿ ಘೋಷಿಸಿದರೆ, ಅದು ಉದ್ಯೋಗಿಗಳಿಗೆ ದೊಡ್ಡ ಪರಿಹಾರದ ಮೊತ್ತವಾಗಬಹುದು.

ತುಟ್ಟಿ ಭತ್ಯಯುವು ಶೇ. 31 ರಷ್ಟು ಹೆಚ್ಚಳ 

ತುಟ್ಟಿ ಭತ್ಯ(Dearness allowance)ಯನ್ನು ಶೇ.31.18 ರಷ್ಟು ಹೆಚ್ಚಿಸಲಾಗಿದೆ ಎಂದು ದತ್ತಾಂಶದಿಂದ ಸ್ಪಷ್ಟವಾಗಿದೆ, ಆದರೆ, ಡಿಎ ಲೆಕ್ಕಾಚಾರ ಹೀಗೆ ನೋಡಿ, ಈ ಸಂದರ್ಭದಲ್ಲಿ ಡಿಎ 31% ಆಗಿರುತ್ತದೆ. ಇಲ್ಲಿಯವರೆಗೆ, ಭತ್ಯೆ 28% ರಷ್ಟಾಗಿತ್ತು. ಜೂನ್ 2021 ರಲ್ಲಿ ಡಿಎ ಹೆಚ್ಚಳವನ್ನು ಒಳಗೊಂಡಂತೆ, ಇದು ಈಗ ಶೇ. 31 ಆಗಿರುತ್ತದೆ. ಆದರೆ, ಅದನ್ನು ಯಾವಾಗ ಘೋಷಿಸಲಾಗುತ್ತದೆ ಮತ್ತು ಪಾವತಿಸಲಾಗುವುದು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಸರ್ಕಾರಿ ನೌಕರರು ಸೆಪ್ಟೆಂಬರ್ ಮಧ್ಯದಲ್ಲಿ ಒಳ್ಳೆಯ ಸುದ್ದಿ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.

ಶೇ.31 ರಷ್ಟು DA ಮೇಲೆ ಲೆಕ್ಕಾಚಾರ

ಈಗ ಜೂನ್ ತಿಂಗಳಲ್ಲಿ ತುಟ್ಟಿ ಭತ್ಯೆಯು ಶೇ.3 ರಷ್ಟು ಹೆಚ್ಚಾದರೆ, ಒಟ್ಟು ಡಿಎ ಶೇ. 31 ರಷ್ಟಾಗುತ್ತದೆ. 7 ನೇ ವೇತನ ಆಯೋಗ(7th Pay Commission)ದ ಪ್ರಕಾರ, ಕೇಂದ್ರ ನೌಕರರ ಮಟ್ಟ -1 ರ ವೇತನ ಶ್ರೇಣಿ 18,000 ರಿಂದ 56900 ರೂ. ಈಗ 18,000 ರೂ. ಮೂಲ ವೇತನದಲ್ಲಿ, ವಾರ್ಷಿಕ ವಾರ್ಷಿಕ ಭತ್ಯೆಯು 66,960 ರೂ. ಆಗಿರುತ್ತದೆ. ಆದರೆ ವ್ಯತ್ಯಾಸದ ಬಗ್ಗೆ ಹೇಳುವುದಾದರೆ, ಸಂಬಳದ ವಾರ್ಷಿಕ ಹೆಚ್ಚಳ 30,240 ರೂ. ಆಗಿರುತ್ತದೆ.

ಇದನ್ನೂ ಓದಿ : Good News: ಕಾಯಿಲೆಯಿಂದ ಬಳಲುತ್ತಿರುವವರಿಗೆ ಭಾರಿ ನೆಮ್ಮದಿ, 39 ಅತ್ಯಾವಶ್ಯಕ ಔಷಧಿಗಳ ಬೆಲೆ ಇಳಿಕೆಗೆ ಮೋದಿ ಸರ್ಕಾರದ ಸಿದ್ಧತೆ

1. ಉದ್ಯೋಗಿಯ ಮೂಲ ವೇತನ 18,000 ರೂ.
2. ಹೊಸ ಡಿಯರ್ನೆಸ್ ಭತ್ಯೆ (31%) 5580 ರೂ. /ತಿಂಗಳು
3. ಇಲ್ಲಿಯವರೆಗೆ (17%)  3060 ರೂ. ತುಟ್ಟಿ ಭತ್ಯೆ
4. ಎಷ್ಟು ತುಟ್ಟಿ ಭತ್ಯೆ 5580-3060 = 2520 ರೂ. /ತಿಂಗಳು ಹೆಚ್ಚಾಗಿದೆ
5. ವಾರ್ಷಿಕ ವೇತನ 2520X12 = 30,240 ರೂ. ಹೆಚ್ಚಳವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News