Intercaste Marriage: ಅಂತರ್ಜಾತಿ ವಿವಾಹಕ್ಕೆ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡಲು ನಿರ್ಧರಿಸಿದೆ ಈ ರಾಜ್ಯ..!

ಅಂತರ್ಜಾತಿ ವಿವಾಹಕ್ಕೆ ಬೆಂಬಲ ನೀಡಿ ಸಮಾಜದಲ್ಲಿ ಏಕತೆ ಮೂಡಿಸುವ ಉದ್ದೇಶದಿಂದ ಹಾಗೂ ಸಾಮಾಜಿಕ ಸಾಮರಸ್ಯ ಪ್ರೋತ್ಸಾಹಿಸಲು ಅಸ್ಸಾಂ ಸರ್ಕಾರವು ಹಣಕಾಸಿನ ನೆರವಿನಡಿ ಪ್ರೋತ್ಸಾಹ ಧನ ನೀಡುವುದಾಗಿ ಘೊಷಿಸಿದೆ.    

Written by - Puttaraj K Alur | Last Updated : Nov 27, 2021, 07:06 AM IST
  • ಅಂತರ್ಜಾತಿ ವಿವಾಹಕ್ಕೆ ಬೆಂಬಲ ನೀಡಿ ಸಮಾಜದಲ್ಲಿ ಏಕತೆ ಮೂಡಿಸುವ ಉದ್ದೇಶ
  • ಅಂತರ್ಜಾತಿ ವಿವಾಹಕ್ಕೆ 5 ಲಕ್ಷ ರೂ. ಪ್ರೋತ್ಸಾಹದ ಧನ ಘೋಷಿಸಿರುವ ಅಸ್ಸಾಂ ಸರ್ಕಾರ
  • ಅಂತರ್ಜಾತಿ ವಿವಾಹವಾದ ದಂಪತಿಗೆ ವ್ಯಾಪಾರ ಪ್ರಾರಂಭಿಸಲು ಸರ್ಕಾರದಿಂದಲೇ ಹಣಕಾಸಿನ ನೆರವು
Intercaste Marriage: ಅಂತರ್ಜಾತಿ ವಿವಾಹಕ್ಕೆ 5 ಲಕ್ಷ ರೂ. ಪ್ರೋತ್ಸಾಹ ಧನ ನೀಡಲು ನಿರ್ಧರಿಸಿದೆ ಈ ರಾಜ್ಯ..!  title=
ಅಂತರ್ಜಾತಿ ವಿವಾಹಕ್ಕೆ 5 ಲಕ್ಷ ರೂ. ಪ್ರೋತ್ಸಾಹ ಧನ

ಗುವಾಹಟಿ: ಜಾತಿ ಆಧಾರಿತ ತಾರತಮ್ಯ ತೊಡೆದುಹಾಕುವ ಪ್ರಯತ್ನವಾಗಿ ಕೇಂದ್ರ ಸರ್ಕಾರವು ಅಂತರ್ಜಾತಿ ವಿವಾಹ(Inter Caste Marriage)ಗಳನ್ನು ಪ್ರೋತ್ಸಾಹಿಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ಅಂತರ್ಜಾತಿ ವಿವಾಹಕ್ಕೆ ಬೆಂಬಲ ನೀಡಿ ಸಮಾಜದಲ್ಲಿ ಏಕತೆ ಮೂಡಿಸುವ ಉದ್ದೇಶದಿಂದ ಹಾಗೂ ಸಾಮಾಜಿಕ ಸಾಮರಸ್ಯ ಪ್ರೋತ್ಸಾಹಿಸಲು ಅಸ್ಸಾಂ ಸರ್ಕಾರವು ಹಣಕಾಸಿನ ನೆರವಿನಡಿಯಲ್ಲಿ ಪ್ರೋತ್ಸಾಹ ಧನ ನೀಡುವುದಾಗಿ ಘೊಷಿಸಿದೆ.    

ಸರ್ಕಾರದಿಂದ ಸಿಗಲಿದೆ 5 ಲಕ್ಷ ರೂ. ಪ್ರೋತ್ಸಾಹ ಧನ

ಈ ಬಗ್ಗೆ ಮಾಹಿತಿ ನೀಡಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು, ಇತ್ತೀಚೆಗೆ ಆರಂಭಿಸಿರುವ ಅಂತರ್ಜಾತಿ ವಿವಾಹ ಯೋಜನೆಯಡಿ(Inter Caste Marriage Plan) ನೂತನ ದಂಪತಿ ಯಾವುದೇ ರೀತಿಯ ವ್ಯಾಪಾರ ಅಥವಾ ಆದಾಯ ತರುವ ಉದ್ಯಮ ಆರಂಭಿಸಲು 10 ಸಾವಿರ ರೂ.ದಿಂದ 5 ಲಕ್ಷ ರೂ.ವರೆಗೂ ಸರ್ಕಾರವು ಪ್ರೋತ್ಸಾಹ ಧನ(Financial Assistance Of Up To 5 Lakhs) ನೀಡಲಿದೆ. ಅಂತರ್ಜಾತಿ ವಿವಾಹವಾಗಿ ಬದುಕು ಕಟ್ಟಿಕೊಳ್ಳಲು ಇದು ಅವರಿಗೆ ನೆರವಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಲಿಂಗಾನುಪಾತದಲ್ಲಿ ಮೊದಲ ಬಾರಿಗೆ ಪುರುಷರ ಸಂಖ್ಯೆಯನ್ನು ಹಿಂದಿಕ್ಕಿದ ಮಹಿಳೆಯರು..!

ಯಾರಿಗೆ ಪ್ರಯೋಜನ ಸಿಗಲಿದೆ..?

ಅಧಿಕಾರಿಯವರು ನೀಡಿರುವ ಮಾಹಿತಿ ಪ್ರಕಾರ, ಯೋಜನೆಯ ಫಲಾನುಭವಿಯು ಏಪ್ರಿಲ್ 2019 ಮತ್ತು ಮಾರ್ಚ್ 2021ರ ನಡುವೆ ವಿವಾಹಿತರಾಗಿರಬೇಕು ಮತ್ತು ದಂಪತಿಗಳ ವಾರ್ಷಿಕ ಆದಾಯವು 5 ಲಕ್ಷ ರೂ.ಗಳನ್ನು ಮೀರಿರಬಾರದು. ಗಂಡ ಮತ್ತು ಹೆಂಡತಿ ಈ ಜನಾಂಗೀಯ ಸೂತ್ರವನ್ನು ಅನುಸರಿಸಬೇಕು. ಯೋಜನೆ(Financial Assistance By Assam Government)ಯ ಫಲಾನುಭವಿಯಾಗಲು ಮತ್ತೊಂದು ಷರತ್ತು ಏನೆಂದರೆ ಸಂಗಾತಿಗಳಲ್ಲಿ ಒಬ್ಬರು ಪರಿಶಿಷ್ಟ ಜಾತಿಗೆ ಮತ್ತು ಇನ್ನೊಬ್ಬರು ಸಾಮಾನ್ಯ ಜಾತಿಗೆ ಸೇರಿರಬೇಕು ಎಂಬುದು.

ಯೋಜನೆಯ ಉದ್ದೇಶವೇನು..?

ವಾಸ್ತವವಾಗಿ ಅನೇಕ ಸಂದರ್ಭಗಳಲ್ಲಿ ಕುಟುಂಬಗಳು ಅಂತರ್ಜಾತಿ ವಿವಾಹ(Other Caste Marriage)ಗಳನ್ನು ತಿರಸ್ಕರಿಸುವುದನ್ನು ಗಮನಿಸಲಾಗಿದೆ. ಇದು ಆತ್ಮಹತ್ಯೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಯೋಜನೆಯು ರಾಜ್ಯದಲ್ಲಿ ಸಾಮರಸ್ಯ, ಸಕಾರಾತ್ಮಕ ಮನಸ್ಥಿತಿ ಮತ್ತು ಸಾಮಾಜಿಕ ಅಂತರವನ್ನು ಉತ್ತೇಜಿಸುತ್ತದೆ ಎಂದು ಅಧಿಕಾರಿಯು ತಿಳಿಸಿದ್ದಾರೆ. ಅಂತರ್ಜಾತಿ ವಿವಾಹವಾದ ನವದಂಪತಿಯು ಸಮಾಜದಲ್ಲಿ ಎಲ್ಲರಂತೆ ಜೀವಸಲು ಮತ್ತು ತಮ್ಮ ಬದುಕು ಕಟ್ಟಿಕೊಳ್ಳಲು ಸರ್ಕಾರವು ಈ ಪ್ರೋತ್ಸಾಹ ಧನ ನೀಡಲು ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.   

ಇದನ್ನೂ ಓದಿ: ಹೊಸ ರೂಪಾಂತರದ ವೈರಸ್ ಗೆ Omicron ಎಂದು ಹೆಸರಿಸಿದ ವಿಶ್ವ ಆರೋಗ್ಯ ಸಂಸ್ಥೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News