Viral Video: ಕೆಲಸಕ್ಕೆ ಬರಲ್ಲ ಎಂದ ಬಾಲಕಿಗೆ ಚಾಕು ಇರಿದ ರಾಕ್ಷಸ ಜುಟ್ಟು ಹಿಡಿದು ರಸ್ತೆಯುದ್ದಕ್ಕೂ ಎಳೆದೊಯ್ದ..! ಮುಂದೆ?

man allegedly stabbed a girl: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಒಬ್ಬ ಪುರುಷನು ಬಾಲಕಿಯನ್ನು ಅವಳ ಕೂದಲಿನಿಂದ ಎಳೆದುಕೊಂಡು ಹೋಗುತ್ತಿರುವುದು ಕಾಣಬಹುದು. ತನ್ನ ಇನ್ನೊಂದು ಕೈಯಿಂದ ಚಾಕುವಿನಂತಹ ಆಯುಧವನ್ನು ಬೀಸುತ್ತಿದ್ದು, ನಿರ್ದಯವಾಗಿ ಅವಳನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿದ್ದಾನೆ.

Written by - Bhavishya Shetty | Last Updated : Feb 20, 2023, 05:55 PM IST
    • ತನ್ನ ಅಂಗಡಿಯಲ್ಲಿ ಕೆಲಸ ಮಾಡಲು ನಿರಾಕರಿಸಿದಳೆಂದು ಬಾಲಕಿಯ ಮೇಲೆ ಹಲ್ಲೆ
    • 16 ವರ್ಷದ ಬಾಲಕಿಗೆ ಚಾಕುವಿನಿಂದ ಇರಿದ 47 ವರ್ಷದ ವ್ಯಕ್ತಿ
    • ಛತ್ತೀಸ್‌ಗಢದ ರಾಯ್‌ಪುರದಲ್ಲಿ ಹಲ್ಲೆ ನಡೆಸಿ ಜನನಿಬಿಡ ರಸ್ತೆಯಲ್ಲಿ ಎಳೆದುಕೊಂಡು ಹೋಗಿದ್ದಾನೆ.
Viral Video: ಕೆಲಸಕ್ಕೆ ಬರಲ್ಲ ಎಂದ ಬಾಲಕಿಗೆ ಚಾಕು ಇರಿದ ರಾಕ್ಷಸ ಜುಟ್ಟು ಹಿಡಿದು ರಸ್ತೆಯುದ್ದಕ್ಕೂ ಎಳೆದೊಯ್ದ..! ಮುಂದೆ? title=
Man Stabbed Girl

ಛತ್ತೀಸ್‌ಗಢದ ರಾಯ್‌ಪುರದಲ್ಲಿ 16 ವರ್ಷದ ಬಾಲಕಿಗೆ ಚಾಕುವಿನಿಂದ ಇರಿದ 47 ವರ್ಷದ ವ್ಯಕ್ತಿಯನ್ನು ಭಾನುವಾರ ಬಂಧಿಸಲಾಗಿದೆ. ತನ್ನ ಅಂಗಡಿಯಲ್ಲಿ ಕೆಲಸ ಮಾಡಲು ನಿರಾಕರಿಸಿದಳೆಂದು ಬಾಲಕಿಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಜನನಿಬಿಡ ರಸ್ತೆಯಲ್ಲಿ ಎಳೆದುಕೊಂಡು ಹೋಗಿದ್ದಾನೆ.

ಇದನ್ನೂ ಓದಿ: ಅತ್ತೆಯನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ತುಂಬಿಟ್ಟ ಸೊಸೆ..!

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಒಬ್ಬ ಪುರುಷನು ಬಾಲಕಿಯನ್ನು ಅವಳ ಕೂದಲಿನಿಂದ ಎಳೆದುಕೊಂಡು ಹೋಗುತ್ತಿರುವುದು ಕಾಣಬಹುದು. ತನ್ನ ಇನ್ನೊಂದು ಕೈಯಿಂದ ಚಾಕುವಿನಂತಹ ಆಯುಧವನ್ನು ಬೀಸುತ್ತಿದ್ದು, ನಿರ್ದಯವಾಗಿ ಅವಳನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿದ್ದಾನೆ. ಹುಡುಗಿಯ ಅಳುತ್ತಿರುವುದು ಸಹ ಕೇಳಿಸುತ್ತದೆ. ಇದೇ ಸಂದರ್ಭದಲ್ಲಿ ಬಾಲಕಿಗೆ ಹಾನಿ ಮಾಡಬೇಡಿ ಎಂದು ಜನರು ಕೂಗಿ ಹೇಳುತ್ತಿದ್ದಾರೆ. ಈ ವಿಡಿಯೋವನ್ನು ಪತ್ರಕರ್ತೆ ಮೀರ್ ಫೈಸಲ್ ಕೂಡ ಹಂಚಿಕೊಂಡಿದ್ದಾರೆ.

ಈ ಘಟನೆ ಶನಿವಾರ ನಡೆದಿದ್ದು, ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗಿದೆ. ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ವರದಿಯಾಗಿದೆ. ಸಂತ್ರಸ್ತೆಯ ಸಹೋದರ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ರಾಯ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಅಗರವಾಲ್ ಪಿಟಿಐಗೆ ತಿಳಿಸಿದ್ದಾರೆ.

 

ದೂರಿನ ಪ್ರಕಾರ, ಆರೋಪಿಯು ತನ್ನ ಮಸಾಲೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಕೆಲಸ ಬಿಟ್ಟಿದ್ದರಿಂದ ಕೋಪಗೊಂಡಿದ್ದನಂತೆ. ಅಷ್ಟೇ ಅಲ್ಲದೆ, ಈ ಹಿಂದೆ ಆ ಮಹಿಳೆಯ ಮಗಳನ್ನು ತನಗೆ ನೀಡುವಂತೆ ಕೇಳಿದ್ದ ಎಂದು ಸಂತ್ರಸ್ತೆಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Trending Video : ಹುಡುಗಿ ಹಾಟ್ ಡ್ಯಾನ್ಸ್ ಕಂಡು ದಂಗಾದ ನೆಟ್ಟಿಗರು.!

ಆರೋಪಿಯು ಆಕೆಯ ಕುತ್ತಿಗೆ ಮತ್ತು ಕೈ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆತನ ಮೇಲೆ 'ಕೊಲೆ ಯತ್ನ' ಆರೋಪ ಹೊರಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News