ದೆಹಲಿಯಲ್ಲಿ ಸಂಸದರಿಗಾಗಿ 400 ನೂತನ ಫ್ಲಾಟ್ ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧಾರ

ನಿರ್ಮಾಣ ತ್ಯಾಜ್ಯವನ್ನು ಬಳಸಿಕೊಂಡು ಸಂಸತ್ ಸದಸ್ಯರಿಗಾಗಿ ಲುಟಿಯೆನ್ಸ್ ದೆಹಲಿಯಲ್ಲಿ 400 ಹಳೆಯ ಫ್ಲ್ಯಾಟ್‌ಗಳನ್ನು ನೆಲಸಮಗೊಳಿಸಿ ಹೊಸದಾಗಿ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.

Last Updated : Jun 16, 2019, 02:22 PM IST
ದೆಹಲಿಯಲ್ಲಿ ಸಂಸದರಿಗಾಗಿ 400 ನೂತನ ಫ್ಲಾಟ್ ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧಾರ  title=

ನವದೆಹಲಿ: ನಿರ್ಮಾಣ ತ್ಯಾಜ್ಯವನ್ನು ಬಳಸಿಕೊಂಡು ಸಂಸತ್ ಸದಸ್ಯರಿಗಾಗಿ ಲುಟಿಯೆನ್ಸ್ ದೆಹಲಿಯಲ್ಲಿ 400 ಹಳೆಯ ಫ್ಲ್ಯಾಟ್‌ಗಳನ್ನು ನೆಲಸಮಗೊಳಿಸಿ ಹೊಸದಾಗಿ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ.

ರಾಷ್ಟ್ರಪತಿ ಭವನದ ಎರಡೂ ಬದಿಯಲ್ಲಿರುವ ನಾರ್ತ್ ಅವೆನ್ಯೂ ಮತ್ತು ಸೌತ್ ಅವೆನ್ಯೂದಲ್ಲಿರುವ ಫ್ಲ್ಯಾಟ್‌ಗಳು ಸುಮಾರು 60 ವರ್ಷಗಳ ಹಿಂದೆ ನಿರ್ಮಿಸಲಾದ ಕಟ್ಟಡಗಳಾಗಿವೆ ಬದಲಾಯಿಸಲಿವೆ ಈಗ ಅವುಗಳ ಬದಲಾಗಿ ನೂತನ ಪ್ಲಾಟ್ ಗಳನ್ನು ನಿರ್ಮಿಸುವುದಾಗಿ  ಎಂದು ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ) ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಸಿಪಿಡಬ್ಲ್ಯುಡಿಯ ಮಹಾನಿರ್ದೇಶಕ ಪ್ರಭಾಕರ್ ಸಿಂಗ್ "ಸ್ವಾತಂತ್ರ್ಯದ ನಂತರ ಉತ್ತರ ಮತ್ತು ದಕ್ಷಿಣ ಅವೆನ್ಯೂಗಳಲ್ಲಿ ನಿರ್ಮಿಸಲಾದ ಎಲ್ಲಾ ಹಳೆಯ ಸಂಸದ ಫ್ಲ್ಯಾಟ್‌ಗಳನ್ನು ನೆಲಸಮ ಮಾಡಲಾಗುವುದು" ಎಂದು ಹೇಳಿದ್ದಾರೆ.

"ನಾವು ಅನೇಕ ಹಳೆಯ ಫ್ಲ್ಯಾಟ್‌ಗಳನ್ನು ಹೊಂದಿರುವ ಪ್ರದೇಶವಾದ ಉತ್ತರ ಮತ್ತು ದಕ್ಷಿಣ ಅವೆನ್ಯೂಗಳಲ್ಲಿ ಸಂಸದರಿಗಾಗಿ ಹೊಸ ಫ್ಲ್ಯಾಟ್‌ಗಳನ್ನು ನಿರ್ಮಿಸಲು ನಿರ್ಮಾಣ ಮತ್ತು ಉರುಳಿಸುವಿಕೆಯ (ಸಿ ಮತ್ತು ಡಿ) ತ್ಯಾಜ್ಯವನ್ನು ಬಳಸುತ್ತೇವೆ" ಎಂದು ಅವರು ಹೇಳಿದರು.

ಹಳೆಯ ಫ್ಲ್ಯಾಟ್‌ಗಳ ಉರುಳಿಸುವಿಕೆಯ ಸ್ಥಳದಿಂದ ಬರುವ ತ್ಯಾಜ್ಯವನ್ನು ಸಂಸ್ಕರಿಸಿದ ನಂತರ ಅದನ್ನೇ ಹೊಸ ಕಟ್ಟಡ ನಿರ್ಮಾಣಕ್ಕೆ ಬಳಸಲಾಗುವುದು ಎಂದು ಹೇಳಿದ್ದಾರೆ.

Trending News