' ಟ್ರಾಫಿಕ್ ನಿಂದಾಗಿಯೇ ಮುಂಬೈನಲ್ಲಿ ಶೇ 3 ರಷ್ಟು ವಿಚ್ಛೇದನಗಳು ಸಂಭವಿಸುತ್ತವೆ"

ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರ ಪತ್ನಿ, ಗಾಯಕಿ ಅಮೃತಾ ಫಡ್ನವಿಸ್ ಅವರು ಆಡಳಿತಾರೂಢ ಮಹಾರಾಷ್ಟ್ರ ವಿಕಾಸ್ ಅಗಾಡಿ (ಎಂವಿಎ) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವಾಗ ಶುಕ್ರವಾರ (ಫೆಬ್ರವರಿ 4) ಮುಂಬೈನಲ್ಲಿ ಟ್ರಾಫಿಕ್ ಜಾಮ್‌ಗಳು ಶೇಕಡಾ 3 ರಷ್ಟು ವಿಚ್ಛೇದನಕ್ಕೆ ಕಾರಣವಾಗಿವೆ ಎಂದು ಹೇಳಿದ್ದಾರೆ.

Written by - Zee Kannada News Desk | Last Updated : Feb 5, 2022, 06:21 PM IST
  • ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರ ಪತ್ನಿ, ಗಾಯಕಿ ಅಮೃತಾ ಫಡ್ನವಿಸ್ ಅವರು ಆಡಳಿತಾರೂಢ ಮಹಾರಾಷ್ಟ್ರ ವಿಕಾಸ್ ಅಗಾಡಿ (ಎಂವಿಎ) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವಾಗ ಶುಕ್ರವಾರ (ಫೆಬ್ರವರಿ 4) ಮುಂಬೈನಲ್ಲಿ ಟ್ರಾಫಿಕ್ ಜಾಮ್‌ಗಳು ಶೇಕಡಾ 3 ರಷ್ಟು ವಿಚ್ಛೇದನಕ್ಕೆ ಕಾರಣವಾಗಿವೆ ಎಂದು ಹೇಳಿದ್ದಾರೆ.
 ' ಟ್ರಾಫಿಕ್ ನಿಂದಾಗಿಯೇ ಮುಂಬೈನಲ್ಲಿ ಶೇ 3 ರಷ್ಟು ವಿಚ್ಛೇದನಗಳು ಸಂಭವಿಸುತ್ತವೆ" title=

ನವದೆಹಲಿ: ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರ ಪತ್ನಿ, ಗಾಯಕಿ ಅಮೃತಾ ಫಡ್ನವಿಸ್ ಅವರು ಆಡಳಿತಾರೂಢ ಮಹಾರಾಷ್ಟ್ರ ವಿಕಾಸ್ ಅಗಾಡಿ (ಎಂವಿಎ) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವಾಗ ಶುಕ್ರವಾರ (ಫೆಬ್ರವರಿ 4) ಮುಂಬೈನಲ್ಲಿ ಟ್ರಾಫಿಕ್ ಜಾಮ್‌ಗಳು ಶೇಕಡಾ 3 ರಷ್ಟು ವಿಚ್ಛೇದನಕ್ಕೆ ಕಾರಣವಾಗಿವೆ ಎಂದು ಹೇಳಿದ್ದಾರೆ.

'ನಾನು ಇದನ್ನು ಒಬ್ಬ ಸಾಮಾನ್ಯ ಪ್ರಜೆಯಾಗಿ ಹೇಳುತ್ತಿದ್ದೇನೆ, ನಾನು ಒಮ್ಮೆ ಹೊರಗೆ ಹೋದರೆ, ನಾನು ಗುಂಡಿಗಳು, ಟ್ರಾಫಿಕ್ ಸೇರಿದಂತೆ ಹಲವಾರು ಸಮಸ್ಯೆಗಳನ್ನು ನೋಡುತ್ತೇನೆ, ಟ್ರಾಫಿಕ್‌ನಿಂದ ಜನರು ತಮ್ಮ ಕುಟುಂಬಗಳಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಮತ್ತು ಮುಂಬೈನಲ್ಲಿ 3 ಶೇಕಡಾ ವಿಚ್ಛೇದನಗಳು ಇದರಿಂದ ಸಂಭವಿಸುತ್ತಿವೆ. ಹಾಗಾಗಿ ರಾಜ್ಯ ಸರ್ಕಾರ ತನ್ನ ತಪ್ಪುಗಳ ಬಗ್ಗೆ ಹೆಚ್ಚು ಗಮನ ಹರಿಸುವಂತೆ ನಾನು ಸಲಹೆ ನೀಡುತ್ತೇನೆ ಎಂದು ಅಮೃತಾ ಫಡ್ನವಿಸ್ ಹೇಳಿದ್ದಾರೆ.

ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ನಿಧನ: ಸಿಎಂ ಬೊಮ್ಮಾಯಿ ಸಂತಾಪ

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ "ಶೇ 3 ರಷ್ಟು ಮುಂಬೈಕರ್‌ಗಳು ರಸ್ತೆಗಳಲ್ಲಿನ ಟ್ರಾಫಿಕ್‌ನಿಂದಾಗಿ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಹೇಳುವ ಮಹಿಳೆಗೆ ದಿನದ ಅತ್ಯುತ್ತಮ (ಐಎಲ್) ತರ್ಕ ಪ್ರಶಸ್ತಿಯನ್ನು ನೀಡಲಾಗುತ್ತದೆ.ದಯವಿಟ್ಟು ರಜೆಯನ್ನು ತೆಗೆದುಕೊಳ್ಳಿ..ಬೆಂಗಳೂರು ಕುಟುಂಬಗಳು ದಯವಿಟ್ಟು ಇದನ್ನು ಓದುವುದನ್ನು ನಿಲ್ಲಿಸಿ ,ನಿಮ್ಮ ಮದುವೆಗೆ ಮಾರಕವಾಗಬಹುದು" ಎಂದು ಚತುರ್ವೇದಿ ಟ್ವೀಟ್ ಮಾಡಿದ್ದಾರೆ.

ರಾಜ್ಯದ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಆಸನ ಬಳಕೆಗೆ ಅವಕಾಶ ನೀಡಲು ತೀರ್ಮಾನ

ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಕೂಡ ಅಮೃತಾ ಫಡ್ನವಿಸ್ ಅವರ ವಿಚಿತ್ರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. "ಅಮೃತಾ ಫಡ್ನವಿಸ್ ನಮ್ಮ ಮಾಜಿ ಮುಖ್ಯಮಂತ್ರಿಯವರ ಪತ್ನಿ. ಅವರ ಆರೋಪವು ಟ್ರಾಫಿಕ್ ವಿಚ್ಛೇದನಕ್ಕೆ ಕಾರಣವಾಗುತ್ತದೆ ಎಂಬುದು ಆಶ್ಚರ್ಯಕರವಾಗಿದೆ.ವಿಚ್ಛೇದನಕ್ಕೆ ಹಲವು ಕಾರಣಗಳಿರಬಹುದು ಆದರೆ ನಾನು ಇದನ್ನು ಮೊದಲ ಬಾರಿಗೆ ಕೇಳಿದ್ದೇನೆ" ಎಂದು ಪೆಡ್ನೇಕರ್ ಹೇಳಿದರು.

 

 

 

Trending News