ಉಧಂಪುರ್: ಜಮ್ಮು ಮತ್ತು ಕಾಶ್ಮೀರ(Jammu and Kashmir)ದ ಉಧಂಪುರ್ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಭಾರತೀಯ ಸೇನಾ ಹೆಲಿಕಾಪ್ಟರ್ ಪತನಗೊಂಡು ಇಬ್ಬರು ಪೈಲಟ್‌ಗಳು ಹುತಾತ್ಮರಾಗಿದ್ದಾರೆ. ಪಟ್ನಿಟಾಪ್ ಪ್ರದೇಶದಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಶಿವ್ ಗರ್ ಧರ್ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ ಎಂದು ಜಮ್ಮು ಮೂಲದ ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಸೇನಾ ಏವಿಯೇಷನ್ ಹೆಲಿಕಾಪ್ಟರ್(Army Aviation Helicopter) ಪತನಗೊಂಡ ಬಳಿಕ ಅದರಲ್ಲಿದ್ದ ಇಬ್ಬರೂ ಪೈಲಟ್ ಗಳು ತೀವ್ರವಾಗಿ ಗಾಯಗೊಂಡಿದ್ದರು. ಸ್ಥಳೀಯರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅವರು ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದರು.ಇಂದು ಬೆಳಗ್ಗೆ ಸುಮಾರು 10.30 ರಿಂದ 10.45 ರ ನಡುವೆ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Viral News: ಪ್ರೀತಿಯ ಶ್ವಾನಕ್ಕಾಗಿ ಇಡೀ ವಿಮಾನದ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಬುಕ್..!
An Indian Army Aviation chopper Cheetah made a force landing due to technical snag near Patnitop of Jammu & Kashmir. Two pilots have been reported injured and rescued by the local civilians and rushed to the hospital. More details being ascertained.
— Aditya Raj Kaul (@AdityaRajKaul) September 21, 2021
ಈ ಹೆಲಿಕಾಪ್ಟರ್ ಸೇನಾ ವಿಮಾನಯಾನ ದಳಕ್ಕೆ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರೂ ಪೈಲಟ್‌ಗಳು ಪ್ರಮುಖ ದರ್ಜೆಯ ಅಧಿಕಾರಿಗಳು ಎಂದು ಹಿರಿಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ನಾವು ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವು. ಆದರೆ ದುರದೃಷ್ಟವಶಾತ್ ಇಬ್ಬರೂ ಹುತಾತ್ಮರಾಗಿದ್ದಾರೆಂದು ಅಧಿಕಾರಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ(Social Media)ಗಳಲ್ಲಿಶೇರ್ ಮಾಡಲಾಗಿರುವ ದೃಶ್ಯಗಳಲ್ಲಿ ಗುಡ್ಡದ ಮೇಲೆ ಚೀತಾ ಹೆಲಿಕಾಪ್ಟರ್ ಚಿದ್ರ ಚಿದ್ರವಾಗಿದೆ ಬಿದ್ದಿರುವುದು ಕಂಡುಬಂದಿದೆ. ಸ್ಥಳೀಯರು ಪೈಲಟ್‌ಗಳನ್ನು ಹೊರತೆಗೆಯಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸರೆಯಾಗಿದೆ.
ಭಾರತೀಯ ಸೇನೆಯ Northern Command ತಮ್ಮ ಟ್ವಿಟರ್ ಖಾತೆಯಲ್ಲಿ ಹೆಲಿಕಾಪ್ಟರ್ ಅವಘಡದಲ್ಲಿ ಹುತಾತ್ಮರಾದ ಇಬ್ಬರು ಪೈಲಟ್‌ಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದೆ. ಮೇಜರ್ ರೋಹಿತ್ ಕುಮಾರ್ ಮತ್ತು ಮೇಜರ್ ಅನುಜ್ ರಜಪೂತ್ ಸೆಪ್ಟೆಂಬರ್ 21ರಂದು ಪಟ್ನಿಟಾಪ್ ನಲ್ಲಿ ಕರ್ತವ್ಯ ನಿರ್ವಹಣೆಯಲ್ಲಿ ಹುತಾತ್ಮರಾಗಿದ್ದಾರೆ’ ಎಂದು ಹೇಳಿದೆ.
#LtGenYKJoshi, #ArmyCdrNC and all ranks #salute the bravehearts Major Rohit Kumar & Major Anuj Rajput who made the supreme sacrifice in the line of duty on 21 Sept 2021 at #Patnitop and offer deepest condolences to their families.@adgpi@Tri_Service@Whiteknight_IA@IAF_MCC pic.twitter.com/4QC3ccefZi
— NorthernComd.IA (@NorthernComd_IA) September 21, 2021
ಇದನ್ನೂ ಓದಿ: "ಮಮತಾ ದೀದಿ ಹೇಳಿದ್ದೆಲ್ಲವೂ ನನಗೆ ಕಿವಿಗೆ ಸಂಗೀತದಂತೆ"
ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಪಟ್ನಿಟಾಪ್(Patnitop) ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಅಪಘಾತದ ಸುದ್ದಿಯಿಂದ ಆಘಾತವಾಗಿದೆ’ ಎಂದು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 7 ವಾರಗಳಲ್ಲಿ ಇದು 2ನೇ ಸೇನಾ ಹೆಲಿಕಾಪ್ಟರ್ ಅಪಘಾತವಾಗಿದೆ. ಕಳೆದ ತಿಂಗಳು ಸೇನೆಯ ಹೆಲಿಕಾಪ್ಟರ್ ರಂಜಿತ್ ಸಾಗರ್ ಅಣೆಕಟ್ಟಿಗೆ ಅಪ್ಪಳಿಸಿದ ನಂತರ ಇಬ್ಬರು ಪೈಲಟ್‌ಗಳು ಹುತಾತ್ಮರಾಗಿದ್ದರು. ಪೈಲಟ್ ಒಬ್ಬರ ಮೃತದೇಹ ಇನ್ನೂ ಪತ್ತೆಯಾಗಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.